Advertisement

“ಶಿಬಿರಗಳಿಂದ ಆತ್ಮವಿಶ್ವಾಸ ವೃದ್ಧಿ’

01:55 AM Apr 09, 2019 | mahesh |

ಒಡಿಯೂರು: ಪ್ರಕೃತಿ ಮತ್ತು ಮನುಷ್ಯನಿಗೆ ಅವಿನಾಭಾವ ಸಂಬಂಧವಿದೆ. ಪ್ರಕೃತಿಯನ್ನು ನೋಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಶಿಬಿರಗಳು ಪ್ರತಿಭೆಗಳನ್ನು ಅರಳಿಸುವು ದರೊಂದಿಗೆ ಆತ್ಮವಿಶ್ವಾಸವನ್ನು ವೃದ್ಧಿಸುತ್ತವೆ. ಆತ್ಮವಿಶ್ವಾಸ ಮಿತವಾ ಗಿರಬೇಕು. ಅತಿಯಾದಲ್ಲಿ ನಮ್ಮನ್ನು ಕುಗ್ಗಿಸುತ್ತದೆ. ಶಿಕ್ಷಣದ ಬೇರುಗಳು ಕಹಿಯಾಗಿದ್ದರೂ ಭವಿಷ್ಯದಲ್ಲಿ ಅದರ ಫ‌ಲ ಸಿಹಿಯಾಗಿರುತ್ತದೆ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

Advertisement

ಅವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾ ಪೀಠ ಮತ್ತು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಎರಡು ದಿನಗಳ ವಸಂತ ಶಿಬಿರವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಸಾಧ್ವಿ ಮಾತಾನಂದಮಯೀ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ಲೋಹಿತ್‌ ಭಂಡಾರಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ನಿರ್ದೇಶಕ ಕಿರಣ್‌ ಉಡುಪಿ, ಯಶವಂತ್‌ ವಿಟ್ಲ, ಶಾಲಾ ಸಂಚಾಲಕ ಗಣಪತಿ ಭಟ್‌ ಸೇರಾಜೆ, ಮುಖ್ಯೋಪಾಧ್ಯಾಯ ಜಯಪ್ರಕಾಶ್‌ ಶೆಟ್ಟಿ, ಶಿಬಿರಾರ್ಥಿಗಳಾದ ಕನ್ಯಾನ ಬಾಲವಿಕಾಸ ಕೇಂದ್ರದ ರಿತೇಶ್‌, ಪೆರುವಾಯಿ ಬಾಲವಿಕಾಸ ಕೇಂದ್ರದ ದೀಕ್ಷಿತಾ ಉಪಸ್ಥಿತರಿದ್ದರು.

ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು, ಬಾಲವಿಕಾಸ ಕೇಂದ್ರದ ಮಾತಾಜಿಯವರು, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕ ವೃಂದದವರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕಿ ವೇದಾವತಿ ನಿರೂಪಿಸಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ ಎಸ್‌. ರೈ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next