Advertisement
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ ಅವರು ಸಂಸ್ಥೆಯು ಆಯೋಜಿಸಿರುವ ಬೆಣ್ಣೆಹಣ್ಣು ಮತ್ತು ಮಡಹಾಗಲದ ಮೇಳದಲ್ಲಿ ವಿವಿಧ ತಳಿಗಳನ್ನು ಪರಿಚಯಿಸುತ್ತಿದ್ದು, ಇದರ ಅನುಕೂಲವನ್ನು ಈ ಜಿಲ್ಲೆಯ ರೈತರು ಪಡೆಯುವಂತಾಗಬೇಕು. ಕಾಫಿ ತೋಟ ಗಳಲ್ಲಿ ಕಿತ್ತಳೆಯೊಂದಿಗೆ ಬೆಣ್ಣೆಹಣ್ಣು ಮಿಶ್ರ ಬೆಳೆಯಾಗಿ ಬೆಳೆದು ಹೆಚ್ಚಿನ ಆದಾಯ ಗಳಿಸುವಂತೆ ಅವರು ತಿಳಿಸಿದರು.
Related Articles
Advertisement
ಭಾರತೀಯ ಕೃಷಿ ಸಂಶೋಧನೆ ಸಂಸ್ಥೆಯು ಕಳೆದ ವರ್ಷ 13,224 ಕೋಟಿ ರೂ.ಆದಾಯ ಗಳಿಸಿದ್ದು ಆರ್ಥಿಕತೆಗೆ ತನ್ನದೆ ಆದ ಕೊಡುಗೆಯನ್ನು ನೀಡಿದೆ. ಸಂಸ್ಥೆಯು ಹವಾಮಾನ ಬದಲಾವಣೆಗೆ ಅನು ಗುಣವಾಗಿ ವಿಶೇಷ ತಳಿಗಳ ಸಂಶೋಧನೆ ನಡೆಸಿ ರೋಗ ನಿರೋಧಕ ತಳಿಯ ವಿವಿಧ ತರಕಾರಿ ಬೆಳೆಗಳನ್ನು ರೈತರಿಗೆ ಪರಿಚಯಿಸಿದ್ದು ಇದರಿಂದ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನ ಕೇಂದ್ರದ ಮುಖ್ಯಸ್ಥರಾದ ಡಾ| ಭಾರತಿ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವೀರೇಂದ್ರ ಕುಮಾರ್ ಉಪಸ್ಥಿತದ್ದರು. ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನ ಕೇಂದ್ರದ ಸಂಜು ಜಾರ್ಜ್ ವಂದಿಸಿದರು.
ರೈತ ವಿಜ್ಞಾನಿ ಇದ್ದಂತೆ
ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆಯ ನಿರ್ದೇಶಕರಾದ ಡಾ| ಎಂ.ಆರ್ .ದಿನೇಶ್ ಅವರು ಮಾತನಾಡಿ ಭಾರತೀಯ ರೈತ ಒಬ್ಬ ವಿಜ್ಞಾನಿ ಇದ್ದಂತೆ ಇವರಲ್ಲಿ ಪಾರಂಪರಿಕ ಕೃಷಿ ಜ್ಞಾನವು ಅತ್ಯುನ್ನತ ಮಟ್ಟದಲ್ಲಿದ್ದು ಇದನ್ನು ಬಳಸಿಕೊಂಡು ಕೆಲವು ರೈತರು ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದಿದ್ದಾರೆ ಎಂದು ಅವರು ನುಡಿದರು. ಭಾರತ ಸರಕಾರವು 2022 ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಿದ್ದು ಇದರಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಗೊಳ್ಳಲಿದೆ ಎಂದು ತಿಳಿಸಿದರು.