Advertisement

ಸಾಂಪ್ರದಾಯಿಕ ಸಸಿ ಬೆಳೆಸಿ

11:54 AM Jul 10, 2019 | Suhan S |

ಕುಮಟಾ: ಮೂರೂರು ಮತ್ತು ಕಲ್ಲಬ್ಬೆ ಗ್ರಾಮದ ಸುತ್ತಮುತ್ತಲಿನ ಬೆಟ್ಟ ಗುಡ್ಡಗಳಲ್ಲಿ ಅರಣ್ಯ ಇಲಾಖೆ ಪರಿಸರಕ್ಕೆ ಮಾರಕವಾದ ಅಕೇಶಿಯಾ ಗಿಡಗಳನ್ನು ನೆಡುವ ಬದಲು, ಸಾಂಪ್ರದಾಯಿಕ ವೈವಿಧ್ಯಮಯ ಗಿಡಗಳನ್ನು ನೆಡಬೇಕೆಂದು ಆಗ್ರಹಿಸಿ ಮೂರೂರು ಹಾಗೂ ಕಲ್ಲಬ್ಬೆ ಗ್ರಾಮಸ್ಥರು ಮಂಗಳವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಗ್ರಾಮಸ್ಥರೆಲ್ಲರೂ ಸಾಂಪ್ರದಾಯಿಕ ಅಡಕೆ, ಭತ್ತ, ತೆಂಗು ಸೇರಿದಂತೆ ಇನ್ನಿತರ ಬೆಳೆಗಳ ಕೃಷಿಕರಾಗಿದ್ದು, ಬಹಳ ವರ್ಷಗಳಿಂದ ಈ ಬೆಟ್ಟದ ತೆರಗಿನ ಎಲೆ ಹಾಗೂ ಹಸಿರು ಸೊಪ್ಪನ್ನು ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಊರಿನ ಸುತ್ತಲಿನ ಬೆಟ್ಟಗಳಲ್ಲಿ ಅರಣ್ಯ ಇಲಾಖೆ ಅಕೇಶಿಯಾ ಗಿಡ ನೆಡುತ್ತಿದ್ದು, ಇದು ಇನ್ನಿತರ ಮರಗಿಡಗಳಿಗೆ ಹಾಗೂ ಮಣ್ಣಿಗೆ ಮಾರಕವಾಗಿದೆ. ಈ ಬೆಟ್ಟದಲ್ಲಿ ಯಾವುದೇ ಕಾರಣಕ್ಕೂ ಅಕೇಶಿಯಾ, ನಿಲಗಿರಿ, ಮ್ಯಾಂಜಿಯಮ್‌ ಈ ತರಹದ ಗಿಡಗಳನ್ನು ನೆಡಬಾರದು. ಬದಲಾಗಿ ವೈವಿಧ್ಯಮಯ ಸಾಂಪ್ರದಾಯಿಕ ಬೆಟ್ಟದ ಗಿಡಗಳನ್ನು, ಹಣ್ಣು, ಔಷಧಿ ಗಿಡಗಳನ್ನು ನೆಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

ನಂತರ ಎಂ.ಜಿ. ಭಟ್ಟ ಮಾತನಾಡಿ, ಅಕೇಶಿಯಾ ಗಿಡ ರಾಕ್ಷಸಿ ಗುಣ ಹೊಂದಿದೆ. ಇದರಿಂದ ಪರಿಸರಕ್ಕೆ ಹಾಗೂ ಭೂಮಿಗೆ ಹಾನಿ ಉಂಟಾಗಲಿದೆ. ಮಣ್ಣಿನಲ್ಲಿರುವ ಸತ್ವ ಹಾಗೂ ನೀರಿನ ಅಂಶ ಕಡಿಮೆಯಾಗುತ್ತದೆ. ಅಂತರ್ಜಲ ಬತ್ತುತ್ತದೆ. ಆದ್ದರಿಂದ ಮೂರೂರು, ಕಲ್ಲಬ್ಬೆ ಭಾಗದ ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ಗಿಡ ನೆಡುವುದನ್ನು ಸ್ಥಗಿತಗೊಳಿಸಬೇಕು. ಅರಣ್ಯ ಪ್ರದೇಶದಲ್ಲಿ ಮಂಗಗಳಿಗೆ ಹಾಗೂ ಕಾಡುಪ್ರಾಣಿಗಳಿಗೆ ತಿನ್ನುವಂತಹ ಆಹಾರವಿಲ್ಲದೇ, ಅವು ರೈತರು ಬೆಳೆಗಳತ್ತ ಮುಖಮಾಡುತ್ತಿವೆ. ಇದರಿಂದ ರೈತನಿಗೆ ಹಾನಿ ಉಂಟಾಗುತ್ತಿದೆ. ಅಕೇಶಿಯಾ ಗಿಡ ನೆಡುವುದರ ಬದಲು ಇತರೆ ಹಣ್ಣು, ಔಷಧಿಯ ಗಿಡಗಳನ್ನು ನೆಡಬೇಕು. ಇದರಿಂದ ಪರಿಸಕ್ಕೂ ಒಳಿತು ಎಂದರು.

ಮೂರೂರು ಕಲ್ಲಬ್ಬೆ ಗ್ರಾಮಸ್ಥರಾದ ಎಸ್‌.ವಿ. ಹೆಗಡೆ, ಮಂಜುನಾಥ ಶೇಟ್, ಧ‌ನಂಜಯ ಹೆಗಡೆ, ದಿನೇಶ ಭಟ್ಟ, ಉದಯ ಗೌಡ, ಚಿದಾನಂದ ಶಂಕರ ಹೆಗಡೆ, ಪ್ರವೀಣ ಹೆಗಡೆ, ತ್ರಿವೇಣಿ ಹೆಗಡೆ, ಡಿ.ಸಿ. ಭಟ್ಟ, ಕೆ.ವಿ. ಹೆಗಡೆ ಸೇರಿದಂತೆ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next