Advertisement

ತೋಟಗಾರಿಕೆ ಬೆಳೆ ಬೆಳೆಯಿರಿ

06:22 PM Sep 28, 2020 | Suhan S |

ಸಿಂದಗಿ: ರೈತರಿಗೆ ಕಷ್ಟ ಕಾಲದಲ್ಲಿಯೂ ಆರ್ಥಿಕವಾಗಿ ಸಹಾಯ ಮಾಡುವ ತೋಟಗಾರಿಕೆ ವ್ಯವಸಾಯ ಎಟಿಎಂ ಇದ್ದಂತೆ. ಕಡಿಮೆ ಅವ ಧಿಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅಮೋಘಿ ಹಿರೇಕುರಬರ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಬೂದಿಹಾಳ, ಹರನಾಳ ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿ, ತೋಟಗಾರಿಕೆ ಬೆಳೆ ವೀಕ್ಷಣೆ ಮಾಡಿ ಅವರು ಮಾತನಾಡಿದರು. ದೀರ್ಘಾವಧಿ ಮತ್ತು ಅಲ್ಪಾವಧಿ ತೋಟಗಾರಿಕೆ ಬೆಳೆಗಳು ಲಾಭದಾಯಕವಾಗಿವೆ. ರೈತರು ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು. ಸಾಂಪ್ರದಾಯಿಕ ಕೃಷಿ ಜೊತೆಗೆ ಅಲ್ಪಾವಧಿ ತೋಟಗಾರಿಕೆ ಬೆಳೆ ಬೆಳೆಯುವ ಮೂಲಕ ಹೆಚ್ಚಿನ ಆದಾಯ ಪಡೆಯಬೇಕು ಎಂದರು.

ರೈತರ ಹೊಲಗಳಿಗೆ ಖುದ್ದಾಗಿ ಭೇಟಿ ನೀಡಿ, ರೈತರಿಗೆ ಇಲಾಖೆ ನೀಡಿದ ಅವಕಾಶಗಳನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದನ್ನು ರೈತರಿಂದಲೇ ತಿಳಿದುಕೊಂಡರು. ಪ್ರಸ್ತುತ ಕೋವಿಡ್ ದಿಂದಾಗಿ ರೈತರಿಗೆ ಉಂಟಾಗಿರುವ ಸಮಸ್ಯೆಗಳನ್ನು ಕೇಳಿ ಅವುಗಳಿಗೆ ಇಲಾಖೆಯಿಂದ ಯಾವ ರೀತಿಯಲ್ಲಿ ಪರಿಹಾರ ದೊರಕಿಸಿಕೊಡಬೇಕು ಎಂಬುದನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದರು.

……………………………………………………………………………………………………………………………………………………………….

ಮನೆಯಂಗಳದಲ್ಲಿ ಆಟ-ಪಾಠ : ಮುದ್ದೇಬಿಹಾಳ: ಚವನಭಾವಿ ಗ್ರಾಮದಲ್ಲಿ ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆ ಇಂದಿರಾ ಕುಂಬಾರ ಮನೆ ಅಂಗಳದಲ್ಲಿ ಆಟ-ಪಾಠ ಹಾಗೂ ಇತರೆ ಚಟುವಟಿಕೆ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಅವರು, ಕೋವಿಡ್ ಹಾವಳಿ ಹೆಚ್ಚುತ್ತಿರುವುದರಿಂದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ಬರುವಂತಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸರ್ಕಾರ ಮನೆ ಅಂಗಳದಲ್ಲಿ ಆಟ-ಪಾಠ ಕಾರ್ಯಕ್ರಮ ಪ್ರಾರಂಭಿಸಿದೆ. ಇದು ರಾಜ್ಯಾದ್ಯಂತ ಪ್ರಾರಂಭಗೊಂಡಿದೆ ಎಂದರು.

ಇದೇ ವೇಳೆ ಮಕ್ಕಳನ್ನು ಒಂದೆಡೆ ಸೇರಿಸಿ ಆಟ-ಪಾಠ ಸೇರಿದಂತೆ ಹಲವು ಚಟುವಟಿಕೆ ನಡೆಸಿಕೊಟ್ಟರು. ಅಡವಿ ಸೋಮನಾಳ ಗ್ರಾಪಂ ವ್ಯಾಪ್ತಿಯ ಚವನಭಾವಿ, ಅಡವಿ ಹುಲಗಬಾಳ ಹಾಗೂ ತಾಂಡಾ, ಡೊಂಕಮಡು, ಖ್ಯಾತನಡೋಣಿ, ಅಡವಿ ಸೋಮನಾಳ ಅಂಗನವಾಡಿ ಕೇಂದ್ರ ವ್ಯಾಪ್ತಿಯ ಮಕ್ಕಳಿಗೆ ಈ ಕಾರ್ಯಕ್ರಮ ನಡೆಸಿಕೊಡಲಾಯಿತು.

ಹಿರೇಮುರಾಳ ವಲಯದಲ್ಲಿ ಬರುವ ಎಲ್ಲ ಗ್ರಾಮಗಳ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು- ಸಹಾಯಕಿಯರು ಮಕ್ಕಳಿಗೆ ಪಾಠ ಹೇಳುವ ಜತೆಗೆ ಮನೆ ಮನೆಗೆ ತೆರಳಿ ಕೋವಿಡ್  ಅರಿವು ಮೂಡಿಸಿದರು. ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರಾದ ವಿನೋದ ಚಿಮ್ಮಲಗಿ, ಇಂದಿರಾ ಕುಂಬಾರ, ಶಾಂತಾ ಈಳಗೇರ, ಸುನಂದಾ ಸೇಲಾರ, ಬಸಮ್ಮ ಕಡಿ, ಅಂಜಿನಾ ಬಡಿಗೇರ, ಲಕ್ಷ್ಮೀ ಗುಡಗುಂಟಿ, ಯಮನಮ್ಮ ವಾಲೀಕಾರ, ರೇಣುಕಾ ಗುಂಡಕನಾಳ, ಚನ್ನಮ್ಮ ಗುಡದಾರಿ, ಸತ್ಯಮ್ಮ ನಾಗರಾಳ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next