Advertisement

ರಾಮನವಮಿ ಮೆರವಣಿಗೆ ವೇಳೆ ಗುಂಪು ಘರ್ಷಣೆ

03:24 PM Apr 01, 2023 | Team Udayavani |

ಚನ್ನರಾಯಪಟ್ಟಣ: ಪಟ್ಟನದ ಮೇಗಲಕೇರಿ ಕಾಡಾಂಜನೇಸ್ವಾಮಿ ದೇವಾಲಯದಲ್ಲಿ ಶ್ರೀರಾಮ ನವಮಿ ಅಂಗವಾಗಿ ದೇವರ ವಿಗ್ರಹ ಮೆರಣಿಗೆ ಮಾಡುವಾಗ ಬಾಗೂರು ರಸ್ತೆಯಲ್ಲಿ ಮುಸ್ಲಿಂ ಯುಕವರು ಹಿಂದೂ ಯುವಕರನ್ನು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಮೇಗಲಕೇರಿ ದೇವಾಲಯದಿಂದ ಹೊರಟ ಮೆರವಣಿಗೆ ಬಾಗೂರು ರಸ್ತೆಯ ಜಾಮಿಯಾ ಮಸೀದಿ ಬಳಿ ಬಂದಾಗ ಮುಸ್ಲಿಂ ಯುವಕರ ಗುಂಪು ಮೆರವಣಿಗೆ ಉತ್ಸವಕ್ಕೆ ಅಡ್ಡಿ ಮಾಡಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮುಸ್ಲಿಂ ಯುವಕರ ಗುಂಪು ಹರ್ಷ, ಮುರಳಿಗೆ ಚಾಕುವಿನಿಂದ ಹಲ್ಲೆ ನಡೆಸಿ, ಚೇತನ್‌, ರಾಕೇಶ್‌ ಮೇಲೆ ನಡೆದಿದೆ.

ದೂರು ದಾಖಲು: ರಾಮನವಮಿ ಆಚರಣೆ ವೇಳೆ ಭಾವೈಕ್ಯತೆಗೆ ಧಕ್ಕೆ ತಂದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿ ಸಬೇಕೆಂದು ಮೇಘಲಕೇರಿ ಹರ್ಷ ಪಟ್ಟಣ ನಗರ ಪೊಲೀಸ್‌ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.

ದೂರಿಗೆ ಪ್ರತಿ ದೂರು: ರಾಮನ ಮೆರವಣಿಗೆ ವೇಳೆ ಹಿಂದೂ ಯುವಕರ ಗುಂಪು ಕಲ್ಲು ತೂರಿ ಹಲ್ಲೆ ಮಾಡಿ, ವಾಹನಗಳನ್ನು ಜಖಂಗೊಳಿಸುದ್ದಾರೆ ಎಂದು ಅವೇಜ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next