Advertisement
ಜಿಲ್ಲೆಯ ಮಾಗಡಿ ಮತ್ತು ಚನ್ನಪಟ್ಟಣ ತಾಲೂಕುಗಳಲ್ಲಿ ಅಂತರ್ಜಲ ಬಳಕೆ ಆಪತ್ತಿನಅಂಚಿನಲ್ಲಿದೆ ಎಂದು ಕೇಂದ್ರ ಅಂತರ್ಜಲ ಮಂಡಳಿಯ ವರದಿ ತಿಳಿಸಿದೆ. ವರದಿಯ ಪ್ರಕಾರ ಎರಡೂ ತಾಲೂಕುಗಳಲ್ಲಿ ನಿಗದಿಗಿಂತ ಹೆಚ್ಚು ಅಂದರೆ ಶೇ.100ಕ್ಕೂ ಹೆಚ್ಚು ಅಂತರ್ಜಲವನ್ನು ಈ ಎರಡೂ ತಾಲೂಕುಗಳಲಿ ಕೊಳವೆ ಬಾವಿಗಳಿಂದ ಹೀರಿಕೊಳ್ಳಲಾಗುತ್ತಿದೆ. ಹೀಗಾಗಿ ಅಂತರ್ಜಲವನ್ನು ಕಾಪಾಡಿಕೊಳ್ಳಲು ಅನುಮತಿ ಕಡ್ಡಾಯಗೊಳಿಸಲಾಗುತ್ತದೆ. ಹಾಗೊಮ್ಮೆ ನಿಯಮಗಳನ್ನು ಉಲ್ಲಂಘಿಸಿದರೆ, ಕಾನೂನು ಪ್ರಕಾರ ದಂಡ ಕಟ್ಟುವುದು ಸೇರಿದಂತೆ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
Related Articles
Advertisement
ಕೊಳವೆ ಬಾವಿಗೆ ಅನುಮತಿ: ಅ.5 ರಿಂದ ಅಕ್ರಮ ಸಕ್ರಮ ಚಾಲ್ತಿಯಲ್ಲಿದ್ದು, ಅನುಮತಿ ಪಡೆಯದೆ ಕೊಳವೆ ಬಾವಿಗಳನ್ನು ಕೊರೆದಿದ್ದಲ್ಲಿ, ಅಕ್ರಮ-ಸಕ್ರಮ ಅವಕಾಶದಲ್ಲಿ ಪಡೆಯಲು ಸಾಧ್ಯವಿದ್ದು, 120 ದಿನಗಳ ಅವಕಾಶವಿದೆ. ನಂತರ ಅನುಮತಿ ಪಡೆಯಲು 5 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಯಮಗಳು ಪಾಲನೆಯಾಗುತ್ತಿದೆಯೇ?: ಕರ್ನಾಟಕ ಅಂತರ್ಜಲ 2004ರ ಅಧಿನಿಯಮದ ಪ್ರಕಾರ ಸಾರ್ವಜನಿಕ ಕುಡಿಯುವ ನೀರಿನ ಮೂಲಗಳಿಂದ 500 ಮೀಟರ್ ಅಂತರದೊಳಗೆ ಬಾವಿ, ಕೊಳವೆಬಾವಿ ಕೊರೆಯಲು ಅವಕಾಶವಿಲ್ಲ.ಎಂಬ ನಿಯಮಗಳು ಜಿಲ್ಲೆಯಲ್ಲಿ ಪಾಲಿಸಲಾಗುತ್ತಿದೆ ಎಂಬ ಬಗ್ಗೆ ಅಧಿಕಾರಿಗಳು ಸ್ಪಷ್ಟ ಮಾಹಿತಿಯನ್ನು ಬಹಿರಂಗ ಪಡೆಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಅಂತರ್ಜಲ ಮೌಲೀಕರಣ ವರದಿ ಬಿಡುಗಡೆಯಾಗಿದೆ. ಅಂತರ್ಜಲ ನಿರ್ವಹಣೆಯ ನಿಯಮಗಳ ಪ್ರಕಾರ ಕೊಳವೆ ಬಾವಿಗಳನ್ನು ಕೊರೆಸಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿ ಪಡೆಯದೆ ಕೊಳವೆಬಾವಿ ಕೊರೆಸಿದ್ದಲ್ಲಿ, ಮನೆ ಬಳಕೆಗೆ50 ರೂ, ವಾಣಿಜ್ಯ ಬಳಕೆಗೆ 500ಪಾವತಿಸಿ ಅಕ್ರಮ ಸಕ್ರಮದಡಿ ಅನುಮತಿ ಪಡೆಯಬಹುದು -ಎಸ್.ಆರ್.ರಾಜಶ್ರಿ, ಹಿರಿಯ ಭೂ ವಿಜ್ಞಾನಿ, ಜಿಲ್ಲಾ ಅಂತರ್ಜಲ ನಿರ್ದೇಶನಾಲಯ