Advertisement
ಕಳೆದ ಎರಡು ವರ್ಷಗಳ ಹಿಂದೆ ಕಲುಷಿತ ಕೆರೆ ನೀರನ್ನೇ ಅವಲಂಬಿಸಿದ್ದ ಇಲ್ಲಿನ ನಿವಾಸಿಗಳಿಗೆಪ್ರಸ್ತುತ ಮೂರು ತಿಂಗಳ ಹಿಂದೆ ಗ್ರಾಮ ಪಂಚಾಯತ್‌ನಿಂದ ಕೊರೆದ ಕೊಳವೆ ಬಾವಿನೀರಿನ ಆಶ್ರಯ ದೊರೆತಿದೆ. ಪಂಚಾಯತ್ ನೀರು ಎರಡು ದಿನಗಳಿಗೊಮ್ಮೆಬರುತ್ತದೆ. ಆದರೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ನೇರ ಟ್ಯಾಂಕ್‌ಗೆ ತುಂಬಿ ಸರಬರಾಜು ಮಾಡಿದ್ದಲ್ಲಿಕೊಂಚ ನೀರು ಸಂಗ್ರಹಿಸಿಕೊಳ್ಳಬಹುದು. ಆದರೆ ನೇರವಾಗಿ ನೀರು ಸರಬರಾಜಾಗಿ ಎತ್ತರ ಪ್ರದೇಶವಾದ್ದರಿಂದ ನೀರು ಬರುವುದೇ ಅಪರೂಪವಾಗಿದೆ ಎನ್ನುತ್ತಾರೆ ಹಿರಿಯಾಜೆ ನಿವಾಸಿ ಪ್ರೇಮಾ.
Related Articles
Advertisement
> ಕೆರೆಗಳ ಹೂಳು ತೆಗೆಯಬೇಕು.
> ನೇರವಾಗಿ ಪೈಪ್‌ಲೈನ್ ಮೂಲಕ ನೀರು
> ನೀಡದೆ ಟ್ಯಾಂಕ್ ಮೂಲಕವೇ ನೀರು ಬರುವಂತಾಗಲಿ.
> ಸಮಯಕ್ಕೆ ಸರಿಯಾಗಿ ನೀರು ಸಿಗಲಿ.
> ಕೊಳವೆ ಬಾವಿಯಿಂದ ನೀರು ಒದಗಿಸಲು
ಕ್ರಮ ಅಗತ್ಯ.
ಒಣ ಭೂಮಿ ಹಾಗೂ ಎತ್ತರಪ್ರದೇಶವಾದ್ದರಿಂದ ಗ್ರಾ.ಪಂ.ನಿಂದ
ಸರಬರಾಜಾಗುತ್ತಿರುವ ನೀರು ಪ್ರಶರ್ ಇಲ್ಲದೆ ಮೇಲೆ ಏರುತ್ತಿಲ್ಲ.
ಹೆಚ್ಚಿನವರು ಕೆಲಸಕ್ಕೆ ತೆರಳುವುದರಿಂದ ಸಮಯಕ್ಕೆ ಸರಿಯಾಗಿ ನೀರು
ಬಾರದೇ ಸಂಗ್ರಹಿಸಿಡಲು ತೊಡಕಾಗಿದೆ ಎಂಬುದು ಉದಯವಾಣಿ ತಂಡಕ್ಕೆ
ಕಂಡುಬಂದಿದೆ.
ನೀರಿದ್ದರೂ ಉಪಯೋಗಕ್ಕಿಲ್ಲ :
ಹಿರಿಯಾಜೆ ದೇವಸ್ಥಾನ ಕೆಳಗಿರುವ ಕೆರೆಯಲ್ಲಿ ಊರಿಗೆಆಗುವಷ್ಟು ನೀರಿದೆ. ಸಮೀಪದಲ್ಲೇ ನೀರಿನ ತೊರೆಗೆಕಟ್ಟ ಕಟ್ಟಿದ್ದು, ನೀರಿನ ಒರತೆ ಈಗಲೂ ಇದೆ. ಆದರೆನೀರು ಕಲುಷಿತಗೊಂಡಿದ್ದರಿಂದ ಊರಿಗೆ ಊರೇಬಾಯಾರಿದಂತಾಗಿದೆ. ಸಿಕ್ಕಸಿಕ್ಕಲ್ಲಿ ಕೊಳವೆ ಬಾವಿ ತೆಗೆದು ಅಂತರ್ಜಲ ಮಟ್ಟ ಕುಸಿತ ಮಾಡುವ ಬದಲು, ಕೆರೆಯಕಲುಷಿತ ನೀರು ಹಾಗೂ ಕೆಸರು ತೆಗೆದಲ್ಲಿ ಮೂರುಗ್ರಾಮಗಳಿಗೆ ನೀಡುವಷ್ಟು ನೀರು ಸಿಗಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.
ಉದಯವಾಣಿ ಆಗ್ರಹ:
ವಾರಕ್ಕೆ 2 ದಿನ ಟ್ಯಾಂಕರ್‌ನೀರು ಸರಬರಾಜುಮಾಡಿದ್ದಲ್ಲಿ ಉತ್ತಮ. ಇಲ್ಲವೇಸ್ಥಳೀಯ ಖಾಸಗಿ ಕೊಳವೆಬಾವಿಮೂಲಕ ನೀರು ಒದಗಿಸುವ ಚಿಂತನೆಗ್ರಾ.ಪಂ.ನಿಂದ ಆಗಬೇಕಿದೆ.
ಮಾಹಿತಿ ನೀಡಿ: ನೀರಿನ ತೀವ್ರ ಸಮಸ್ಯೆಇದ್ದಲ್ಲಿ ತಮ್ಮ ಹೆಸರಿನಸಹಿತ “ಉದಯವಾಣಿ’ ವಾಟ್ಸಪ್ ನಂಬರ್ 91080 51452 ಬರೆದು ಕಳುಹಿಸಿ.
.ಚೈತ್ರೇಶ್ ಇಳಂತಿಲ