ರಾಮನಗರ: ಅಂತರ್ಜಲ ನಿರ್ದೇಶ ನಾಲಯ ಬೆಂಗಳೂರು ಮತ್ತು ಹಿರಿಯ ಭೂ ವಿಜ್ಞಾನ, ಜಿಲ್ಲಾ ಅಂತರ್ಜಲ ಕಚೇರಿ ವತಿಯಿಂದ ಇತ್ತೀಚೆಗೆ ಕನಕಪುರ ತಾಲೂಕಿನ ಚಿಕ್ಕಮುದವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರ್ಜಲ ಅಭಿವೃದ್ಧಿ, ಸದ್ಭಳಕೆ, ಸಂರಕ್ಷಣೆ, ಮಳೆ ನೀರು ಸಂಗ್ರಹಣೆ, ಮರುಬಳಕೆ, ಅಂತರ್ಜಲ ಕಲುಷಿತತೆ ತಡೆಗಟ್ಟುಕೆ ಮತ್ತು ತೆರೆದ ತ್ಯಕ್ತ ಕೊಳವೆಬಾವಿಗಳಲ್ಲಿ ಚಿಕ್ಕ ಮಕ್ಕಳು ಬೀಳುವ ಅವಘಡಗಳನ್ನು ನಿಯಂತ್ರಿಸುವ ಕುರಿತಾದ ಅಂತರ್ಜಲ ಜನ ಜಾಗೃತಿ ಶಿಬಿರ ಏರ್ಪಡಿಸಲಾಗಿತ್ತು.
ಗೌಸಿಯಾ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಪ್ರಕ ಡಾ.ಎ.ಗಣೇಶ್ ಮಾತನಾಡಿ, ಅಂತರ್ಜಲ ಕುರಿತಂತೆ ಕಲುಷಿತತೆ ತಡೆ ಗಟ್ಟುವಿಕೆ, ಅಂತರ್ಜಲ ಅಭಿವೃದ್ಧಿ, ಸದ್ಭಳಕೆ, ಸಂರಕ್ಷಣೆ, ಕುರಿತು ಪ್ರಾತ್ಯಕ್ಷಿತೆ ಯೊಂದಿಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಈ ಕುರಿತು ಕರಪತ್ರಗಳನ್ನು ಬಿಡುಗಡೆ ಮಾಡಿದರು.
ಅಂತರ್ಜಲ ನಿರ್ದೇಶನಾಲಯದ ಹಿರಿಯ ಭೂ ವಿಜಾnನಿ ಎಸ್. ಆರ್. ರಾಜಶ್ರೀ ಮಾತನಾಡಿ, ಮಳೆ ನೀರು ಸಂಗ್ರಹಣೆ, ಮರು ಬಳಕೆ, ತೆರೆದ ಕೊಳವೆಬಾಗಳಲ್ಲಿ ಚಿಕ್ಕ ಮಕ್ಕಳು ಬೀಳುವ ಅವಘಡಗಳನ್ನು ನಿಯಂತ್ರಿಸುವ ಕುರಿತು ಮತ್ತು ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಲವನ್ನು ಪುನಶ್ಚೇತನ ಮಾಡುವ ಬಗ್ಗೆ ಪ್ರಾತ್ಯಕ್ಷಿತೆಯೊಂದಿಗೆ ಉಪನ್ಯಾಸ ನೀಡಿ ನಂತರ ಕಿರುಹೊತ್ತಿಗೆ ಬಿಡುಗಡೆ ಮಾಡಿದರು.
ಚಿಕ್ಕಮುದವಾಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಡಾ.ಮಧುಸೂದನ್ ಅಕಾರ್ಯಕ್ರಮ ಉದ್ಘಾಟಿಸಿ, ಶಿಬಿರದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಅಂತರ್ಜಲ ಕುರಿತಂತೆ ಚರ್ಚಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿದರು.