Advertisement

ದೊಡ್ಡಕರೆ ಅಭಿವೃದ್ಧಿಯಿಂದ ಅಂತರ್ಜಲ ವೃದ್ಧಿ

03:00 PM Mar 14, 2021 | Team Udayavani |

ರಟ್ಟೀಹಳ್ಳಿ: ರಟ್ಟೀಹಳ್ಳಿ ತಾಲೂಕಿನಲ್ಲಿ ಮಕರಿ ಗ್ರಾಮ ಅಭಿವೃದ್ಧಿ ಹೊಂದುತ್ತಿರುವಪ್ರದೇಶವಾಗಿದೆ. ರಟ್ಟಿàಹಳ್ಳಿಗೆ ಕೇವಲ ಮೂರುಕಿ.ಮೀ. ದೂರದಲ್ಲಿರುವ ಈ ಗ್ರಾಮದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಮಕರಿ ದೊಡ್ಡಕರೆ ಅಭಿವೃದ್ಧಿಯಿಂದ ಅಂತರ್ಜಲ ಹೆಚ್ಚಳವಾಗಿಸುತ್ತಮುತ್ತಲಿನ ಹೊಲಗಳು ಉತ್ತಮ ಫಸಲು ನೀಡಲಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

Advertisement

ರಟ್ಟೀಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ಶನಿವಾರ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮಕರಿ ದೊಡ್ಡಕೆರೆಯನ್ನು 86 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದ್ದು,ಕೆರೆಯ ಅಂತಿಮ ಜಾಗೆ ನಿರ್ಮಾಣ, ಹೂಳೆತ್ತುವ ಕಾಮಗಾರಿ ಸೇರಿದಂತೆ ಕೆರೆಯ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ರಟ್ಟೀಹಳ್ಳಿ ಹಿರೇಕೆರೂರು ತಾಲೂಕನ್ನುನೀರಾವರಿ ಕ್ಷೇತ್ರವನ್ನಾಗಿಸಿ ರಾಜ್ಯದಲ್ಲಿ ಮಾದರಿತಾಲೂಕನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮಾತನಾಡಿ, ಕೆರೆ ಅಭಿವೃದ್ಧಿಯಿಂದ ಈ ಭಾಗದ ರೈತರಿಗೆ ಮತ್ತುಸಾರ್ವಜನಿಕರಿಗೆ, ಕೃಷಿಗೆ ಹಾಗೂ ಸಾರ್ವಜನಿಕಉಪಯೋಗಗಳಿಗೆ ಅನುಕೂಲವಾಗಲಿದೆ. ನಮ್ಮ ಕೃಷಿ ಮಂತ್ರಿಗಳಿಂದ ಈ ಎರಡು ತಾಲೂಕುಗಳುಸಮಗ್ರ ಅಭಿವೃದ್ಧಿಯಾಗುವುದರಲ್ಲಿ ಯಾವುದೇಸಂದೇಹವಿಲ್ಲ ಎಂದರು.

ಪ್ರಥಮ ದರ್ಜೆ ಗುತ್ತಿಗೆದಾರ ರಾಜ್ಯ ಕೃಷಿಕಸಮಾಜದ ನಿರ್ದೆಶಕ ಆರ್‌.ಎನ್‌.ಗಂಗೋಳ ಮಾತನಾಡಿ, ಈ ಕೆರೆ ಅಭಿವೃದ್ಧಿ ಕಾಮಗಾರಿ 9.97 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ.ಮಕರಿ ಗ್ರಾಮದ ಸಮಸ್ತ ಜನತೆಗೆ ಇದರ ಪ್ರಯೋಜನವಾಗಲಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಪ್ರಥಮ ದರ್ಜೆ ಗುತ್ತಿಗೆದಾರ ರಾಜ್ಯ ಕೃಷಿಕ ಸಮಾಜದನಿರ್ದೇಶಕ ಆರ್‌.ಎನ್‌.ಗಂಗೋಳ, ಮಕರಿಗ್ರಾಮ ಪಂಚಾಯತಿ ಎಲ್ಲಾ ಸದಸ್ಯರು, ಮುಖಂಡರಾದ ಕೆಎಂಎಫ್‌ ನಿರ್ದೇಶಕ ಹನುಮಂತಗೌಡ ಭರಮಣ್ಣನವರ,ಶೆದಿಯಪ್ಪ ಹಾರೋಗೊಪ್ಪ, ಮಾಲತೇಶಗಂಗೋಳ, ಜಿಪಂ ಸದಸ್ಯ ಎನ್‌.ಎಂ.ಈಟೇರ, ಸುಭಾಸ ನಿಂಬೆಗೊಂದಿ, ಸುಮಾ ಗಂಗೋಳ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಣೇಶ ಬಿದರಿ, ದೊಡ್ಡಗೌಡ ಪಾಟೀಲ, ಅಶೋಕ ನಾಗಣ್ಣನವರ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next