Advertisement

ನೂತನ ಸಂಸತ್ ಭವನಕ್ಕೆ ಇಂದು ಪ್ರಧಾನಿ ಮೋದಿ ಶಂಕು ಸ್ಥಾಪನೆ

08:29 AM Dec 10, 2020 | keerthan |

ಹೊಸದಿಲ್ಲಿ: ನೂತನ ಸಂಸತ್ ಭವನ ಕಟ್ಟಡಕ್ಕೆ ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ಮಾಡಲಿದ್ದಾರೆ.

Advertisement

ಮಧ್ಯಾಹ್ನ 12:55 ಕ್ಕೆ ಸಮಾರಂಭವು ಪ್ರಾರಂಭವಾಗಲಿದೆ. ಭೂಮಿ ಪೂಜೆ ಮತ್ತು ಅಡಿಗಲ್ಲು ಹಾಕುವ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಮಧ್ಯಾಹ್ನ 2.15 ಕ್ಕೆ ಪ್ರಧಾನಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಯೋಜನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗದ್ದು, ಇದರ ಇತ್ಯರ್ಥ ಇನ್ನೂ ಆಗಿಲ್ಲವಾದ ಕಾರಣ ಭವನದ ನಿರ್ಮಾಣವನ್ನು ತಕ್ಷಣ ಪ್ರಾರಂಭಿಸಲು ಸಾಧ್ಯವಿಲ್ಲ.

ಇದನ್ನೂ ಓದಿ:ಶಾಲಾ ಬ್ಯಾಗ್‌ ತೂಕ ಇಳಿಕೆ: “ಸ್ಕೂಲ್‌ ಬ್ಯಾಗ್‌ ಪಾಲಿಸಿ-2020′ ಸಿದ್ಧಪಡಿಸಿದ ಕೇಂದ್ರ

ನೂತನ ಭವನ ನಾಲ್ಕು ಮಹಡಿಯ ಕಟ್ಟಡವಾಗಿರಲಿದ್ದು, 64,500 ಚದರ ಮೀಟರ್ ವಿಸ್ತೀರ್ಣದಲ್ಲಿರಲಿದೆ. ಅಂದಾಜು 971 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಭವನ 2022ರ ಆಗಸ್ಟ್ ನಲ್ಲಿ ಪೂರ್ಣವಾಗಿ ಉದ್ಘಾಟನೆಯಾಗಲಿದೆ.

Advertisement

ಭೂಕಂಪನ ನಿರೋಧಕ ವ್ಯವಸ್ಥೆಯಡಿ ನೂತನ ಭವನವನ್ನು ನಿರ್ಮಿಸಲಾಗುತ್ತಿದೆ. ಲೋಕಸಭಾ ಹಾಗೂ ರಾಜ್ಯಸಭಾ ಸದನಗಳಲ್ಲಿ ಕ್ರಮವಾಗಿ 888 ಮತ್ತು 384 ಆಸನ ಸಾಮರ್ಥ್ಯ ಹೊಂದಿರಲಿವೆ. ಮುಂದಿನ ದಿನಗಳಲ್ಲಿ ಉಭಯ ಸದನಗಳ ಸದಸ್ಯರ ಸಂಖ್ಯೆಯಲ್ಲಿ ಏರಿಕೆಯಾಗುವ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಆಸನ ಸಾಮರ್ಥ್ಯ ಹೆಚ್ಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next