Advertisement

ಹಾಡುಗಳಲ್ಲಿ ಕೇಳುಗರ ಗಮನ ಸೆಳೆದ “ಗ್ರೂಫಿ’: ಆ.20ಕ್ಕೆ ರಿಲೀಸ್‌

11:30 AM Aug 13, 2021 | Team Udayavani |

ಆರಂಭದಿಂದಲೂ ಕನ್ನಡ ಚಿತ್ರರಂಗದಲ್ಲಿ ಮೆಲೋಡಿ ಹಾಡುಗಳಿಗೆ ತನ್ನದೇ ಆದ ಸ್ಥಾನಮಾನವಿದೆ. ಕನ್ನಡದ ಅದೆಷ್ಟೋ ಸಿನಿಮಾಗಳ ಮೆಲೋಡಿ ಹಾಡುಗಳು ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆದುಕೊಂಡು ಬಂದು ಸಿನಿಮಾಗಳನ್ನು ಹಿಟ್‌ ಮಾಡಿರುವ ಉದಾಹರಣೆಗಳೂ ಚಿತ್ರರಂಗದಲ್ಲಿ ಸಾಕಷ್ಟು ಸಿಗುತ್ತವೆ. ಆದರೆ ಕಳೆದ ಕೆಲ ವರ್ಷಗಳಿಂದ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ವೆಸ್ಟರ್ನ್, ಫಾಸ್ಟ್‌ಬೀಟ್‌ ಹಾಡುಗಳೇ ಹೆಚ್ಚಾಗುತ್ತಿದ್ದರಿಂದ, ಮೆಲೋಡಿ ಹಾಡುಗಳ ಸಂಖ್ಯೆ ಕೊಂಚ ಕಡಿಮೆಯಾಗುತ್ತಿದೆ ಅನ್ನೋ ಬೇಜಾರುಕೂಡ ಅನೇಕರಲ್ಲಿದೆ. ಈ ಬೇಜಾರಿನ ನಡುವೆಯೇ, ಇತ್ತೀಚೆಗೆ ಹೊರ ಬಂದಿರುವ ಹೊಸಬರ “ಗ್ರೂಫಿ’ ಸಿನಿಮಾದ ಮೆಲೋಡಿ ಹಾಡುಗಳು ನಿಧಾನವಾಗಿ ಸ್ಯಾಂಡಲ್‌ವುಡ್‌ ಸಿನಿಪ್ರಿಯರ ಗಮನ ಸೆಳೆಯುತ್ತಿವೆ.

Advertisement

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಗ್ರೂಫಿ’ ಚಿತ್ರದ ಹಾಡುಗಳಿಗೆ ಯುವ ಸಂಗೀತ ನಿರ್ದೇಶಕ ವಿಜೇತ್‌ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ “ಹೆಸರೇನೆಂದು ಹೇಳು…’ ಮೆಲೋಡಿ ಹಾಡಿಗೆ ಖ್ಯಾತ ಚಿತ್ರ ಸಾಹಿತಿ ಜಯಂತ ಕಾಯ್ಕಿಣಿ, ಟೈಟಲ್‌ ಟ್ರ್ಯಾಕ್‌ ಗೆ ಚೇತನ್‌ಕುಮಾರ್‌ ಸಾಹಿತ್ಯವಿದೆ. ಅನಿರುದ್ಧ್ ಶಾಸ್ತ್ರೀ, ರಕ್ಷಾ, ವಿಜೇತ್‌ಕೃಷ್ಣ ಮೊದಲಾದವರು “ಗ್ರೂಫಿ’ ಹಾಡುಗಳಿಗೆ ಧ್ವನಿಯಾಗಿದ್ದಾರೆ.

“ಗ್ರೂಫಿ’ ಚಿತ್ರದ ಹಾಡುಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಮಾತನಾಡುವ ಚಿತ್ರ ಸಾಹಿತಿ ಜಯಂತಕಾಯ್ಕಿಣಿ, “ಸುಮಾರು ಎರಡು ವರ್ಷಗಳ ಹಿಂದೆ ಬರೆದಿದ್ದ ಸಾಲುಗಳು, ಈಗ ಮೆಲೋಡಿ ಹಾಡಾಗಿ ಕೇಳುಗರಿಗೆ ಇಷ್ಟವಾಗುತ್ತಿದೆ. ಆರಂಭದಲ್ಲಿ ಕೇಳಿದಾಗಲೇ ಹಾಡಿನ ಟ್ಯೂನ್‌ ನನಗೆ ಇಷ್ಟವಾಗಿತ್ತು. ಟ್ಯೂನ್‌ಗೆ ತಕ್ಕಂತೆ ವಾಯ್ಸ್ ಕೂಡ ಫ್ರೆಶ್‌ ಆಗಿದೆ. ನಮ್ಮ ಊರಿನ (ಹೊನ್ನಾವರ) ಸುತ್ತಮುತ್ತ ಈ ಹಾಡಿನ ಶೂಟಿಂಗ್‌ ಮಾಡಿದ್ದಾರೆ. ಹಾಡಿಗೆ ತಕ್ಕಂತಕೊರಿಯೋಗ್ರಫಿ ಇದೆ’ ಎನ್ನುತ್ತಾರೆ.

ಇದನ್ನೂ ಓದಿ:ಆಗಸ್ಟ್‌ ಆಸೆ ಬಿಟ್ಟಾಕಿ.. ಸೆಪ್ಟೆಂಬರ್‌ವರೆಗೆ ನಿಮ್ಮಾಸೆ ಕಟ್ಟಾಕಿ…: ಮುಂದೈತೆ ಸಿನಿಹಬ್ಬ

“ಬಹುತೇಕ ಹೊಸಬರೇ ಸೇರಿಕೊಂಡು ಅಚ್ಚುಕಟ್ಟಾಗಿ ಹಾಡನ್ನು ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಕೂಡ ಹೀಗೆ ಇರಬಹುದು ಎಂಬ ನಿರೀಕ್ಷೆ ಇದೆ’ ಎಂದು ಹೊಸಬರ ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ ಜಯಂತ್‌ ಕಾಯ್ಕಿಣಿ.

Advertisement

ಇನ್ನು “ಗ್ರೂಫಿ’ ಚಿತ್ರವನ್ನು ಬೆಂಗಳೂರು, ಹೊನ್ನಾವರ, ಮಡಿಕೇರಿ ಹಾಗೂ ಪಶ್ಚಿಮ ಘಟ್ಟಗಳ ಸುಂದರ ಪರಿಸರದಲ್ಲಿ ಸುಮಾರು ಐವತ್ತು ದಿನಗಳಕಾಲ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಆರ್ಯನ್‌ ನಾಯಕನಾಗಿ, ಪದ್ಮಶ್ರೀ ಜೈನ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. “ಲಿಯಾ ಗ್ಲೋಬಲ್‌ ಮೀಡಿಯಾ’ ಬ್ಯಾನರ್‌ನಲ್ಲಿಕೆ. ಜಿ. ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಡಿ. ರವಿ ಅರ್ಜುನ್‌ ನಿರ್ದೇಶನವಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ಆ.20ಕ್ಕೆ “ಗ್ರೂಫಿ’ಯನ್ನು ಥಿಯೇಟರ್‌ಗೆ ತರುವ ಯೋಚನೆಯಲ್ಲಿದೆ

ಫೋಟೋವನ್ನು ಒಬ್ಬರೇ ತೆಗೆದುಕೊಂಡರೆ ಅದು ಸೆಲ್ಫಿ. ಅದೇ ಫೋಟೋವನ್ನು ಗುಂಪಾಗಿ ತೆಗೆದುಕೊಂಡರೆ ಅದು”ಗ್ರೂಫಿ’. ಇದು ನಮ್ಮ ಸಿನಿಮಾದ ಟೈಟಲ್‌ ಮತ್ತು ಸಬ್ಜೆಕ್ಟ್ಗೆ ಹೇಗೆ ಕನೆಕ್ಟ್ ಆಗುತ್ತದೆ ಅನ್ನೋದನ್ನ ಸ್ಕ್ರೀನ್‌ ಮೇಲೇ ನೋಡಬೇಕು. ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಕಥಾಹಂದರದ ಸಿನಿಮಾ. ಕಂಪ್ಲೀಟ್‌ ಯೂಥ್‌ಫ‌ುಲ್‌ ಸಬ್ಜೆಕ್ಟ್ ಜೊತೆಗೆ ಒಂದೊಳ್ಳೆ ಮೆಸೇಜ್‌ ಕೂಡ ಸಿನಿಮಾದಲ್ಲಿದೆ. ಪ್ರಕೃತಿಯ ಸೊಬಗಿನ ಜೊತೆಗೆ ಸಿನಿಮಾ ಸಾಗುತ್ತದೆ. – ಡಿ. ರವಿಅರ್ಜುನ್‌, ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next