Advertisement
ಮೆಹಂದಿಗೆ ಲೆಹೆಂಗಾ ಸೂಕ್ತಸಾಂಪ್ರದಾಯಿಕತೆಯ ಜತೆಗೆ ಹೊಸ ಫ್ಯಾಶನ್ ಆಗಿಯೂ ಲೆಹೆಂಗಾದ ಆಯ್ಕೆ ಅತ್ಯುತ್ತಮ ಎಂದರೆ ಅತಿಶಯವಲ್ಲ.
ಪೈಥಾನಿ ಮದುವೆ ಸೀರೆಗಳು, ಕಾಂಜೀವರಂ, ಬನಾರಸ್ ಸೀರೆಗಳು, ಮುಗ ಸಿಲ್ಕ್ , ಪಾಟ್ನಾ ಪಟೊಲ, ಬಂಧನೀ, ಪಟ್ಟು ಸೀರೆಗಳನ್ನು ಮದುಮಕ್ಕಳ ಸೀರೆ ಸಿಂಗಾರದ ವಿಚಾರದಲ್ಲಿ ಹೆಚ್ಚು ಅಯ್ಕೆ ಮಾಡಿಕೊಳ್ಳುವುದು ಸಾಮಾನ್ಯ ವಿಚಾರ. ಆಯಾಯ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಮದುಮಗಳ ಬಟ್ಟೆಯ ಶೈಲಿಯೂ ಬದಲಾಗುತ್ತಿರುತ್ತಿದ್ದರೂ ಎಲ್ಲ ಕಾಲದಲ್ಲಿಯೂ ಎಲ್ಲರ ಮನೆ ಮನಗಳಲ್ಲಿಯೂ ಪ್ರಾಶಸ್ತ್ಯ ಪಡೆದಿರುವ ಹಿರಿಮೆ ಸೀರೆಗಳಿಗೆ ಸಲ್ಲುತ್ತದೆ. ಸೀರೆಗಳ ಆಯ್ಕೆ ವಿಷಯಕ್ಕೆ ಬಂದಾಗ ವಾತಾವರಣಕ್ಕೆ ಅನುಗುಣವಾಗಿ, ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಸೀರೆ ಖರೀದಿಸಿದಲ್ಲಿ ಉತ್ತಮ. ಬೇಸಗೆಯಲ್ಲಿ ಹಗುರವಾದ ಮತ್ತು ಬೆವರನ್ನು ತಡೆಯುವಂತಹ ತೆಳು ಬಟ್ಟೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಲ್ಲಿ ಉತ್ತಮ. ಚಳಿಗಾಲದಲ್ಲಿ ವೆಲ್ವೆಟ್ ಮತ್ತು ಬೊಕೇಡ್ ಸೀರೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದಲ್ಲಿ ಉತ್ತಮ. ಜತೆಗೆ ನಿಮ್ಮ ಸೀರೆಗೆ ಒಪ್ಪುವಂತಹ ಆರ್ನಮೆಂಟ್ಸ್‌ಗಳ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುವುದು ಅತೀ ಅಗತ್ಯ. ಮ್ಯಾಚಿಂಗ್ ಒಡವೆಗಳನ್ನು ಧರಿಸಿ, ಈಗಿನ ಟ್ರೆಂಡೀ ರೀತಿಯಲ್ಲಿ ಸೀರೆ ಉಟ್ಟಿರೆಂದಾದಲ್ಲಿ ಮುಂದೆ ಇತರ ಮದುಮಕ್ಕಳು ನಿಮ್ಮ ಫ್ಯಾಶನ್ ಅನ್ನೇ ನಕಲು ಮಾಡಬಹುದು.
Related Articles
Advertisement
ರಿಸೆಪ್ಶನ್ ವೇರ್ ರಿಸೆಪ್ಶನ್‌ಗಳಿಗೆ ಮತ್ತೆ ಲೆಹೆಂಗಾಗಳ ಆಯ್ಕೆ ಈಗಿನ ಟ್ರೆಂಡ್. ನಿಮ್ಮ ಬಣ್ಣಕ್ಕೊಪ್ಪುವ ವಸ್ತ್ರಗಳ ಬಣ್ಣಗಳ ಕಡೆಗೆ ಹೆಚ್ಚು ಗಮನ ವಹಿಸಿದಲ್ಲಿ ಉತ್ತಮ. ಜತೆಗೆ ಲೈಟಿಂಗ್ಸ್ ಬೆಳಕಿಗೆ ಹೊಳೆೆಯುವ ಕಲ್ಲುಗಳಿರುವ, ಮಣಿ, ಮುತ್ತುಗಳಿಂದ ಅವೃತವಾದ ಲೆಹೆಂಗಾಗಳ ಬಳಕೆ ಮದುವೆಯನ್ನು ಇನ್ನಷ್ಟು ಸ್ಮರಣೀಯಗೊಳಿಸಬಹುದು.
– ಭುವನ ಬಾಬು, ಪುತ್ತೂರು