ಇಂಧೋರ್: ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಗಲಭೆಕೋರರ ಆಸ್ತಿಯನ್ನು ಧ್ವಂಸಗೊಳಿಸಲು ಬುಲ್ಡೋಜರ್ ಗಳನ್ನು ಉಪಯೋಗಿಸಿದ್ದು ಹೆಚ್ಚು ಸುದ್ದಿಯಾಗಿರುವ ನಡುವೆಯೇ ಮಧ್ಯಪ್ರದೇಶದಲ್ಲಿ ವರನೊಬ್ಬ ತನ್ನ ಮದುವೆಯ ಸ್ಥಳ ತಲುಪಲು ಕಾರು ಅಥವಾ ಕುದುರೆ ಗಾಡಿಯ ಬದಲಿಗೆ ಬುಲ್ಡೋಜರ್ ಬಳಸಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಕುಂದಾಪುರ: ಹಿರಿಯರ ಮಾತು ಕೇಳಿ ನಾಲ್ವರು ವಿದ್ಯಾರ್ಥಿಗಳಿಂದ ಕೊಪ್ಪರಿಗೆ ಶೋಧನೆ
ಬೇತುಲ್ ಜಿಲ್ಲೆಯ ಭೈನ್ಸ್ ದೆಹಿ ತೆಹಸಿಲ್ ನ ಜಲ್ಲಾರ್ ಗ್ರಾಮದಲ್ಲಿ ಬುಧವಾರ ಬರ ಅಂಕುಶ್ ಜೈಸ್ವಾಲ್ ಅವರು ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಸಿದ್ದು, ಇದರಲ್ಲಿ ಕುಟುಂಬದ ಇಬ್ಬರು ಮಹಿಳಾ ಸದಸ್ಯರು ಸಾಥ್ ಕೊಟ್ಟಿರುವುದಾಗಿ ವರದಿ ವಿವರಿಸಿದೆ.
ಈ ವಿಶಿಷ್ಟ ಮದುವೆ ಮೆರವಣಿಗೆಯ ಕೆಲವು ಫೋಟೊಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೈಸ್ವಾಲ್ ಸಿವಿಲ್ ಎಂಜಿನಿಯರ್ ಆಗಿದ್ದು, ನಾನು ಕಟ್ಟಡ ನಿರ್ಮಾಣ ಕಾರ್ಯದಲ್ಲಿರುವುದರಿಂದ ಬುಲ್ಡೋಜರ್ ಸೇರಿದಂತೆ ಇತರ ಯಂತ್ರಗಳನ್ನು ಪ್ರತಿದಿನ ಬಳಸುತ್ತಿರುತ್ತೇನೆ. ಇದು ನನ್ನ ಉದ್ಯೋಗದ ಒಂದು ಭಾಗ. ಹೀಗಾಗಿ ತನ್ನ ಮದುವೆ ಕಾರ್ಯಕ್ರಮವನ್ನು ಸ್ಮರಣೀಯವಾಗಿರಿಸಲು ಯಾಕೆ ಇಂತಹ ಯಂತ್ರವನ್ನು ಬಳಸಬಾರದು ಎಂದು ಆಲೋಚಿಸಿದ್ದೆ. ಕೊನೆಗೆ ನನ್ನ ಇಚ್ಛೆಗೆ ಮನೆಯವರು ಒಪ್ಪಿಗೆ ಸೂಚಿಸಿದ್ದರು ಎಂದು ಜೈಸ್ವಾಲ್ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಬುಲ್ಡೋಜರ್ ಮುಂಭಾಗದ ಲೋಡರ್ ಬಕೆಟ್ ಅನ್ನು ಆಕರ್ಷಕವಾಗಿ ಅಲಂಕರಿಸಲಾಗಿತ್ತು. ವರ ಮೆರವಣಿಗೆ ಸಂದರ್ಭದಲ್ಲಿ ಬುಲ್ಡೋಜರ್ ಬ್ಲೇಡ್ಸ್ ಮೇಲೆ ಆರಾಮವಾಗಿ ಕುಳಿತು ತೆರಳುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ.