ಲಕ್ನೋ: ಮದುವೆ ಸಮಯದಲ್ಲಿ ಪತಿಯ ಕಾಲಿಗೆ ಪತ್ನಿ ನಮಸ್ಕರಿಸುವ ಸಂಪ್ರ ದಾಯವಿದೆ. ಆದರೆ ಪತ್ನಿಯ ಕಾಲಿಗೆ ಪತಿಯೇ ನಮಸ್ಕರಿಸಿದರೆ ಹೇಗಿರುತ್ತದೆ? ಉತ್ತರ ಪ್ರದೇಶದಲ್ಲಿ ಇಂಥದ್ದೊಂದು ವಿಶೇಷ ಘಟನೆ ನಡೆ ದಿದ್ದು, ಡಾ| ಅಜಿತ್ ವರಾÌಂಡ್ಕರ್ ಅವರು ಇದರ ಫೋಟೋ ಟ್ವೀಟ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈ ಫೋಟೋ ಮತ್ತು ವೀಡಿಯೋ ವೈರಲ್ ಆಗಿ, ಬಹಳ ಮೆಚ್ಚುಗೆ ಯನ್ನೂ ಪಡೆದುಕೊಂಡಿದೆ. ಆದರೆ, ಈ ಮದುವೆ ಎಲ್ಲಿ ನಡೆದದ್ದು ಎಂಬ ಬಗ್ಗೆ ಅವರು ಉಲ್ಲೇಖಿಸಿಲ್ಲ.
ಇದನ್ನೂ ಓದಿ:ಮತ್ತೊಂದು ದೇಶಿ ಲಸಿಕೆ: 30 ಕೋಟಿ ಡೋಸ್ ಬಯಾಲಾಜಿಕಲ್ ಇ ಕೋವಿಡ್ ಲಸಿಕೆಗಾಗಿ ಕೇಂದ್ರ ಒಪ್ಪಂದ
ವರ ಮಾಡಿದ ಕೆಲಸ ನೋಡಿ, ಆತನ ಕುಟುಂಬ ಸದಸ್ಯರು ಮತ್ತು ಮದುವೆಗೆ ಆಗಮಿಸಿದ್ದವರೆಲ್ಲ ಬೆಕ್ಕಸ ಬೆರಗಾಗಿ ಹೋಗಿದ್ದಾರೆ. ವಧುವಿನ ಕಾಲಿಗೆ ವರ ಬೀಳುತ್ತಿದ್ದಂತೆ ಪುರೋಹಿತರು ಮತ್ತು ಇತರರು ಆಕ್ಷೇಪಿಸಿದ್ದಾರೆ. ಆಗ ವರ ನೀಡಿದ ಉತ್ತರ ಅವರನ್ನು ಮೌನವಾಗಿಸಿತು.
“ಪತ್ನಿಯಾಗಿ ಬಂದ ವಧು ನನ್ನ ಕುಟುಂಬಕ್ಕೆ ಭಾಗ್ಯಲಕ್ಷ್ಮಿ. ಅವಳು ನಮ್ಮ ವಂಶವನ್ನು ವೃದ್ಧಿಸು ವವಳು. ನಾನು ತಂದೆಯಾಗಲು ಆಕೆ ಕಾರಣಳಾಗುತ್ತಾಳೆ. ತನ್ನ ಕುಟುಂಬವನ್ನು ಬಿಟ್ಟು ನನ್ನ ಮನೆ ಸೇರುವ ಆಕೆ ಹೊಸ ಜೀವನ ಶುರು ಮಾಡುತ್ತಾಳೆ. ಆಕೆ ನನ್ನ ಹೆತ್ತವರನ್ನು ಗೌರವಿಸುತ್ತಾಳೆ. ಇಷ್ಟೆಲ್ಲ ಮಾಡುವ ಆಕೆಗೆ ನಾನು ಗೌರವ ನೀಡಿದರೆ ತಪ್ಪೇನಿದೆ’ ಎಂಬ ವರನ ಪ್ರಶ್ನೆಗೆ ಎಲ್ಲರೂ ಗಪ್ ಚುಪ್ ಆಗಿದ್ದಾರೆ.
ಕೊನೆಗೆ, ನವದಂಪತಿಗೆ ಶುಭ ಹಾರೈಸಿ ಬಂಧು ಬಾಂಧವರು ಸವಿಯೂಟ ಉಂಡು ತೆರಳಿದ್ದಾರೆ. ಇತ್ತ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ. ಜತೆಗೆ ವರನ ವರ್ತನೆ ಬಗ್ಗೆ ಪರ ವಿರೋಧದ ಚರ್ಚೆಗಳೂ ಶುರುವಾಗಿವೆ.