Advertisement

ಶಂಕರಮಠದಲ್ಲಿ ಅರ್ಚಕರ ಕುಟುಂಬಕ್ಕೆ  ದಿನಸಿ ವಿತರಣೆ

08:33 PM Jul 04, 2021 | Team Udayavani |

ಕೆಜಿಎಫ್: ಲಾಕ್‌ಡೌನ್‌ ವೇಳೆ ದೇಗುಲಗಳು ಕೂಡ ಬಾಗಿಲು ಹಾಕಿದ್ದರಿಂದಅರ್ಚಕರು ತೊಂದರೆಗೆ ಒಳಗಾದರು.ಅವರಿಗೆ ಸರ್ಕಾರ ಸರಿಯಾದ ರೀತಿಯಲ್ಲಿ ಪರಿಹಾರ ನೀಡಬೇಕಿತ್ತು ಎಂದುಶಾಸಕಿ ಎಂ.ರೂಪಕಲಾ ಹೇಳಿದರು.

Advertisement

ನಗರದ ಶಂಕರಮಠದಲ್ಲಿ ಅರ್ಚಕರಕುಟುಂಬಗಳಿಗೆ ದಿನಸಿ ಕಿಟ್‌ ವಿತರಣೆಮಾಡಿ ಮಾತನಾಡಿ, ಹರಸುವ ಕೈಗಳುಸದಾ ದೇವರ ಸೇವೆಯಲ್ಲಿರಬೇಕು.ಇದರಿಂದಾಗಿ ಎಲ್ಲರಿಗೂಒಳ್ಳೆಯದಾಗುತ್ತದೆ ಎಂದು ಹೇಳಿದರು.

ರೋಟರಿ ಕ್ಲಬ್‌ ನೀಡಿದ ಆಮ್ಲಜನಕಸಾಂದ್ರಕವನ್ನು ಸ್ವೀಕರಿಸಿ ಮಾತನಾಡಿ,ರೋಟರಿ ಕ್ಲಬ್‌ ಪೋಲಿಯೋ ಲಸಿಕೆಅಭಿಯಾನದಲ್ಲಿ ಉತ್ತಮವಾಗಿ ಕೆಲಸಮಾಡಿತು. ಈಗಿನ ಕೋವಿಡ್‌ಸಂದರ್ಭದಲ್ಲಿ ಕೂಡ ಒಳ್ಳೆಯ ಕೆಲಸಮಾಡುತ್ತಿದೆ.

ರೋಟರಿ ಕ್ಲಬ್‌ಗಾಗಿ ಸೂಕ್ತನಿವೇಶನ ಕೊಡಲು ಪ್ರಯತ್ನಮಾಡಲಾಗುವುದು ಎಂದು ಹೇಳಿದರು.ರೋಟರಿ ಕ್ಲಬ್‌ನ ರಾಮಚಂದ್ರಗೌಡಮಾತನಾಡಿ, ರೋಟರಿ ಕ್ಲಬ್‌ ಸೇವೆಯಲ್ಲಿನಿರತರಾಗಿದೆ. ಇನ್ನು ಮುಂದಿನದಿನಗಳಲ್ಲಿ ಹೆಚ್ಚಿನ ಯೋಜನೆರೂಪಿಸಿಕೊಳ್ಳಲಾಗುವುದು ಎಂದರು.ದಾನಿ ಅಪ್ಪಿರೆಡ್ಡಿ ಉಚಿತ ಆಹಾರಕಿಟ್‌ವಿತರಣೆ ಮಾಡಿದರು. ನಾರಾಯಣಮೂರ್ತಿ, ಸೋಮಶೇಖರ್‌, ದಿನೇಶ್‌ಕುಮಾರ್‌, ಶ್ರೀಧರ ಮೂರ್ತಿ, ಕೃಷ್ಣಮೂರ್ತಿ, ಗುರು ದೀಕ್ಷಿತ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next