Advertisement

ಖ್ಯಾತ ಟೆನ್ನಿಸ್ ಆಟಗಾರ ಗ್ರಿಗೋರ್‌ ಡಿಮಿಟ್ರೋವ್‌ ನನ್ನು ಬಿಡದ ಕೋವಿಡ್ ಸೋಂಕು

06:00 PM Jun 22, 2020 | sudhir |

ಝಾದರ್‌: ಕಳೆದ ಕೆಲ ದಿನಗಳಿಂದ ರಾಜಕೀಯ ವ್ಯಕ್ತಿಗಳಲ್ಲಿ, ಹಿರಿಯ ಅಧಿಕಾರಿಗಳಲ್ಲಿ ಮತ್ತು ಕೋವಿಡ್ ವಾರಿಯರ್ಸ್‌ಗಳಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಕ್ರೀಡಾಪಟುಗಳಿಗೂ ಈ ಡೆಡ್ಲಿ ವೈರಸ್‌ ಕಂಟಕವಾಗಿ ಕಾಡುತ್ತಿದೆ.

Advertisement

ವಿಶ್ವದ 19ನೇ ರ್‍ಯಾಂಕ್‌ನ ಟೆನಿಸ್‌ ಆಟಗಾರ, ಬಲ್ಗೇರಿಯಾದ ಗ್ರಿಗೋರ್‌ಡಿಮಿಟ್ರೋವ್‌ಗೆ ಸೋಂಕು ದೃಢಪಟ್ಟಿದ್ದು, ಆಡ್ರಿಯಾ ಟೂರ್‌ನಲ್ಲಿ ಪಾಲ್ಗೊಂಡಿದ್ದ ವೇಳೆ ಇವರಿಗೆ ಸೋಂಕು ತಗುಲಿದೆ ಎನ್ನಲಾಗಿದೆ.

ಈ ಕುರಿತು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಡಿಮಿಟ್ರೋವ್‌ “ನನ್ನಗೆ ಕೋವಿಡ್‌-19 ಸೋಂಕು ಕಾಣಿಸಿಕೊಂಡಿದ್ದು, ಆಡ್ರಿಯಾ ಟೂರ್‌ ವೇಳೆ ನನ್ನ ಸಂಪರ್ಕಕ್ಕೆ ಬಂದಿದ್ದವರೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ. ನನ್ನಿಂದ ನಿಮಗೇನಾದರೂ ತೊಂದೆಯಾಗಿದ್ದರೆ ಕ್ಷಮಿಸಿ. ನಾನು ಮನೆಗೆ ಬಂದು ಈಗ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ.

ಎಲ್ಲರ ಬೆಂಬಲಕ್ಕೆ ಚಿರಋಣಿ. ಸುರಕ್ಷಿತವಾಗಿರಿ, ಆರೋಗ್ಯವಾಗಿರಿ” ಎಂದು ತನ್ನ ಅಭಿಮಾನಿಗಳಿಗೆ ಮನವಿ ಮಾಡಿಕೊಂಡು ಸಂದೇಶ ರವಾಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next