ಸುಳ್ಯ : ನಾಗರಿಕರು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಪಟ್ಟ ದೂರು ಗಳನ್ನು ದಾಖಲಿಸಲು ಜಾರಿ ಮಾಡಿರುವ ಜನಹಿತ ವೆಬ್ ತಂತ್ರಾಂಶವನ್ನು ಇನ್ನಷ್ಟು ಸುಧಾರಣೆಗೊಳಿಸಲಾಗಿದೆ.
ಸುಧಾರಿತ ಜನಹಿತ ತಂತ್ರಾಂಶದಲ್ಲಿ ನಾಗ ರೀಕರು ನೀಡಿದ ದೂರುಗಳನ್ನು ಪರಿಹರಿಸದೆ ಮುಕ್ತಾಯಗೊಳಿಸಿದ್ದಲ್ಲಿ ಕೇಂದ್ರ ಸಹಾಯವಾಣಿ ಸಂಖ್ಯೆ 080-23108108ಕ್ಕೆ ಕರೆ ಮಾಡಿ ದೂರಿನ ಸಂಖ್ಯೆಯನ್ನು ತಿಳಿಸಿ ದಲ್ಲಿ ದೂರನ್ನು ನ.ಪಂ.ಗಮನಕ್ಕೆ ತಂದು ಪರಿಹರಿಸುವ ಕ್ರಮ ತೆಗೆದು ಕೊಳ್ಳುವಂತೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಇದರ ಜತೆಗೆ ನಾಗರೀಕರಿಗೆ ಹೆಚ್ಚಿನ ಅನುಕೂಲ ವಾಗುವಂತೆ ಜನಹಿತ ಮೊಬೈಲ್ ತಂತ್ರಾಂಶ (Mobile App)ವನ್ನು ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿಯಿಂದ ಅಭಿವೃದ್ಧಿಪಡಿಸಲಾಗಿದ್ದು, ನಾಗರಿಕರು ಈ ಮೊಬೈಲ್ ತಂತ್ರಾಂಶದ ಮೂಲಕ ಸುಳ್ಯ ನ.ಪಂ.ಗೆ ಸಂಬಂಧಪಟ್ಟ ಎಲ್ಲ ದೂರುಗಳನ್ನು ದಾಖಲಿಸಬಹುದಾಗಿದೆ. ಮತ್ತು ದೂರುಗಳ ಸ್ಥಿತಿಯನ್ನು ತಿಳಿಯ ಬಹುದಾಗಿದೆ. ಈ ಮೊಬೈಲ್ ತಂತ್ರಾಂಶವನ್ನು ನಾಗರಿಕರು ಪೌರಸುಧಾರಣಾ ಕೋಶದ ವೈಬ್‌ಸೈಟ್‌ನಿಂದ, ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಧಿಕೊಳ್ಳ ಬಹುದಾಗಿರುತ್ತದೆ.
ಸಾರ್ವಜನಿಕರು ದೂರವಾಣಿ ಕೇಂದ್ರ ಸಂಖ್ಯೆ 080-23108108 ಅಥವಾ ವಾಟ್ಸಾಪ್ ಸಂಖ್ಯೆ 8277777728 ಅಥವಾ www.mrc.gov.in/janahita ಮೂಲಕ ದೂರುಗಳನ್ನು ದಾಖಲಿಸಬಹುದು. ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ನಾಗರಿಕರು ಇದರ ಸದುಪಯೋಗ ಪಡೆ ಯುವಂತೆ ತಿಳಿಸಲಾಗಿದೆ.