ಶ್ರೀನಗರ: ಮಾರುಕಟ್ಟೆ ಪ್ರದೇಶದಲ್ಲಿ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಕನಿಷ್ಠ ಹತ್ತು ಮಂದಿ ಗಾಯಗೊಂಡಿರುವ ಘಟನೆ ಶ್ರೀನಗರದ ಪ್ರವಾಸಿ ಸ್ವಾಗತ ಕೇಂದ್ರ (ಟಿಆರ್‌ಸಿ) ಬಳಿ ಭಾನುವಾರ( ನ.3) ರಂದು ಮಧ್ಯಾಹ್ನ ನಡೆದಿದೆ.
ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಲಷ್ಕರ್-ಎ-ತೈಬಾ ದ (ಎಲ್‌ಇಟಿ) ಉನ್ನತ ಪಾಕಿಸ್ತಾನಿ ಕಮಾಂಡರ್ ನನ್ನು ಹೊಡೆದುರುಳಿಸಿದ ಒಂದು ದಿನದ ಬಳಿಕ ಟಿಆರ್‌ಸಿ ಕೇಂದ್ರದ ಬಳಿ ಈ ದಾಳಿ ನಡೆದಿದೆ. ಗಾಯಾಳುಗಳನ್ನು ಶ್ರೀನಗರದ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಖಂಡಿಸಿದ್ದು ಸಂಡೇ ಮಾರ್ಕೆಟ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿದ್ದು ಉಗ್ರರು ಇಲ್ಲಿನ ನಾಗರಿಕರನ್ನು ಗುರಿಯಾಗಿಸಿ ಗ್ರೆನೇಡ್ ದಾಳಿ ನಡೆಸಿದ್ದಾರೆ ಇದ್ದಕ್ಕೆ ತಕ್ಕುದಾದ ಬೆಲೆ ತೆರಬೇಕಾಗಲಿದೆ ಅಲ್ಲದೆ ಮುಂದಿನ ದಿನಗಳಲ್ಲಿ ನಾಗರಿಕರು ನಿರ್ಭಿತಿಯಿಂದ ತಿರುಗಾಡುವ ವಾತಾವರಣ ಇಲ್ಲಿ ನಿರ್ಮಿಸಲು ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ ಎಂದು x ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸ್ಫೋಟದ ನಂತರ ವೈದ್ಯಕೀಯ ತಂಡಗಳೊಂದಿಗೆ ಭದ್ರತಾ ಪಡೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿವೆ.
ಇದನ್ನೂ ಓದಿ: Mollywood: ಚಿತ್ರದ ಬಗ್ಗೆ ನೆಗೆಟಿವ್ ರಿವ್ಯೂ ಕೊಟ್ಟ ಯುವಕನಿಗೆ ಖ್ಯಾತ ನಟನಿಂದ ಬೆದರಿಕೆ