Advertisement

ಯುವಿ ಬದುಕು ಹಾಳು ಮಾಡಿದ್ದೇ ಚಾಪೆಲ್‌!

11:44 PM Jun 12, 2019 | Sriram |

ಚಂಡೀಗಢ: ಇತ್ತೀಚೆಗೆ ಯುವರಾಜ್‌ ಸಿಂಗ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆ ದಿನ ಸುಮ್ಮನಿದ್ದ ಅವರ ತಂದೆ ಯೋಗರಾಜ್‌ ಈಗ ಮಾಜಿ ಕೋಚ್‌ ಗ್ರೆಗ್‌ ಚಾಪೆಲ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

“ಯುವಿ ಇನ್ನಷ್ಟು ಅದ್ಭುತ ದಾಖಲೆ ನಿರ್ಮಿಸುವುದನ್ನು ಭಾರತ ತಂಡದ ಮಾಜಿ ತರಬೇತುದಾರ ಗ್ರೆಗ್‌ ಚಾಪೆಲ್‌ ತಡೆದರು. ಚಾಪೆಲ್‌ ಅಭ್ಯಾಸದ ವೇಳೆ ಖೋ ಖೋ ಆಡಿಸಿದ್ದರಿಂದ ಯುವಿಗೆ ಮಂಡಿನೋವು ಶುರುವಾಯಿತು. ಇದೇ ಆತನ ಆಟದ ಕುಸಿತಕ್ಕೆ ಕಾರಣ. ನಾನು ಚಾಪೆಲ್‌ ಅವರನ್ನು ಎಂದೂ ಕ್ಷಮಿಸುವುದಿಲ್ಲ’ ಎಂದು ಯೋಗರಾಜ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next