Advertisement

ಗುರುವಿಗೆ ವಂದಿಸುತ್ತ…

06:00 AM May 04, 2018 | |

ಶಿಕ್ಷಕರನ್ನು ದೇವರ ಮಟ್ಟಕ್ಕೆ ಏರಿಸುವ ಈ ಮಾತುಗಳು ನಿಜವಾಗಿ ಹೇಳುವುದಾದರೆ, ಶಿಕ್ಷಕರು ಪ್ರಾಮಾಣಿಕತೆಯಿಂದ, ತನ್ನ ಹೊಣೆಯನ್ನರಿತು ಜವಾಬ್ದಾರಿಯಿಂದ ತನ್ನ ಕರ್ತವ್ಯಗಳನ್ನು ನಿರ್ವಹಿಸಿದರೆ ಆತ ಖಂಡಿತ ದೇವತಾ ಸ್ವರೂಪಿಯೇ ಆಗುತ್ತಾನೆ. ಹೌದು, ದೇಶದ ಭವಿಷ್ಯ ಇಂತಹ ಆದರ್ಶ ಶಿಕ್ಷಕರ ಮೇಲೆಯೇ ನಿಂತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ತನ್ನ ಗುರಿ ತಲುಪಬೇಕಾದರೆ ಒಬ್ಬ ಆದರ್ಶ ಗುರು ಇರಬೇಕು. ವಿದ್ಯಾರ್ಥಿಯ ಜೀವನದಲ್ಲಿ ಮುಂದೆ ಗುರಿ ಹಿಂದೆ ಗುರು ಇದ್ದರೆ ಅವನ ಜೀವನ ಸಾರ್ಥಕವಾಗುತ್ತದೆ. ಪ್ರತಿಯೊಬ್ಬ ಶಿಕ್ಷಕರು ಕೇವಲ ಪುಸ್ತಕ ಸಂಬಂಧಿಸಿದ ಪಾಠ ಮಾತ್ರ ಮಾಡುವುದಲ್ಲದೇ ನಮ್ಮ ಜೀವನದ ಹಲವು ತಿರುವುಗಳಲ್ಲಿ ನಮ್ಮೊಂದಿಗೆ ಇದ್ದು ನಮ್ಮ ಜೀವನ ಉಜ್ವಲವಾಗುವಲ್ಲಿ ಸಹಕರಿಸುತ್ತಾರೆ. 

Advertisement

ಮಾತಾ-ಪಿತರನ್ನು ಬಿಟ್ಟರೆ ನಮ್ಮ ಜೀವನವನ್ನು ಸಂಪೂರ್ಣವಾಗಿ ರೂಪುಗೊಳಿಸುವ ಕಾರ್ಯವನ್ನು ಒಬ್ಬ ಶಿಕ್ಷಕ ಮಾಡುತ್ತಾನೆ. ಒಂದು ಮಗುವಿನ ಜೀವನದಲ್ಲಿ ಅವನ ಅಪ್ಪ-ಅಮ್ಮ-ಶಿಕ್ಷಕ ಈ ಮೂವರೂ ಒಂದು ತ್ರಿಭುಜದಂತಿರುತ್ತಾರೆ. ಒಬ್ಬರು ಎಡವಿದರೂ ಒಂದು ಮಗುವಿನ ಜೀವನ ಅನ್ಯಮಾರ್ಗ ಹಿಡಿಯುವ ಸಾಧ್ಯತೆ ಇದೆ. 

ಒಬ್ಬ ಶಿಕ್ಷಕನಿಗೆ ಒಂದು ಮಗುವಿನ ಭವಿಷ್ಯ ಉಜ್ವಲವಾದಾಗ ಎಷ್ಟು ಸಂತೋಷವಾಗುತ್ತದೆಯೋ ಅದೇ ರೀತಿ ಒಂದು ಮಗುವಿನ ಭವಿಷ್ಯ ಹಾಳಾದಾಗಲೂ ಅಷ್ಟೇ ದುಃಖವೂ ಆಗುತ್ತದೆ.

ರಮ್ಯಾ ತೃತೀಯ ಬಿ.ಕಾಂ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ

Advertisement

Udayavani is now on Telegram. Click here to join our channel and stay updated with the latest news.

Next