Advertisement

ರೈತರಿಗೆ ಗ್ರೀನ್‌ಪಾಸ್‌ ವ್ಯವಸ್ಥೆ: ಪಾಟೀಲ್‌

05:20 PM Apr 12, 2020 | mahesh |

ಮೈಸೂರು: ರೈತರು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಉತ್ಪನ್ನ ಮಾರಾಟಕ್ಕೆ ಓಡಾಡಲು ಗ್ರೀನ್‌ಪಾಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ತಿಳಿಸಿದರು. ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳು, ರೈತ ಮುಖಂಡ ರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ರೈತರಿಗೆ ಓಡಾಡಲು ಕೃಷಿ ಇಲಾಖೆ ವತಿಯಿಂದ ಈಗಾಗಲೇ ಗ್ರೀನ್‌ ಪಾಸ್‌ ನೀಡಲು ಆದೇಶಿಸಲಾಗಿದೆ ಎಂದು ಹೇಳಿದರು.

Advertisement

ಹೂ ಬೆಳೆಗಾರರಿಗೆ ಸಂಕಷ್ಟ: ಸ್ವಲ್ಪ ಪ್ರಮಾಣದಲ್ಲಿಯಾದರೂ ಹಣ್ಣು-ತರಕಾರಿಯನ್ನು ಜನ ಕೊಂಡುಕೊಳ್ಳುತ್ತಿದ್ದಾರೆ. ಆದರೆ ಹೂ ಖರೀದಿಸುತ್ತಿಲ್ಲ. ಹಾಗಾಗಿ ಎಲ್ಲಾ ಜಿಲ್ಲೆಗಳಲ್ಲೂ ಹೂ ಬೆಳೆ ನಷ್ಟದ ಪ್ರಮಾಣ ಪರಿಶೀಲಿಸಿ ವರದಿ ಸಿದ್ಧಪಡಿಸುವಂತೆ ಅಧಿ ಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ಸರ್ಕಾರ ಹಣ್ಣು -ತರಕಾರಿ ಖರೀದಿಸಲಾ ಗುವುದು ಎಂದು ಹೇಳಿದೆ. ಆದರೆ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಹಣ್ಣು- ತರಕಾರಿಗೆ ಸರ್ಕಾರ ಬೆಲೆ ನಿಗದಿಪಡಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಜಿ.ಟಿ.ದೇವೆಗೌಡ, ಯತೀಂದ್ರ ಸಿದ್ದರಾಮಯ್ಯ, ಅನಿಲ್‌ ಚಿಕ್ಕಮಾದು, ಅಶ್ವಿ‌ನ್‌ ಕುಮಾರ್‌, ಹರ್ಷವರ್ಧನ್‌, ವಿಧಾನ ಪರಿಷತ್‌ ಸದಸ್ಯರಾದ ಧರ್ಮ ಸೇನಾ, ಸಂದೇಶ್‌ ನಾಗರಾಜ್‌, ಶ್ರೀಕಂಠೇಗೌಡ ಇದ್ದರು.

ಬೆಳೆ ನಾಶ ಮಾಡಬೇಡಿ
ರೈತರು ಬೆಳೆದಿರುವ ಬೆಳೆ ನಾಶ ಮಾಡಬೇಡಿ. ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ರೈತರ ಮನೆ ಬಾಗಿಲಿಗೆ ಹೋಗಿ ಟ್ರ್ಯಾಕ್ಟರ್‌ ರಿಪೇರಿ ಮಾಡಲು ಕೆಲವು
ಕಂಪನಿಗಳು ಮುಂದೆ ಬಂದಿವೆ. ಅದಕ್ಕೂ ಅನುಮತಿ ನೀಡಲಾಗುವುದು. ಕೃಷಿಗೆ ಪೂರಕವಾದ ಗ್ಯಾರೇಜ್‌, ಗೊಬ್ಬರ, ಬಿತ್ತನೆ ಬೀಜಗಳ ಅಂಗಡಿಗೆ ಅವಕಾಶ
ನೀಡಲಾಗಿದೆ. ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯಲು ಆದೇಶ ನೀಡಿದೆ ಎಂದು ಆತ್ಮಸ್ಥೈರ್ಯ ತುಂಬಿದರು.

Advertisement

Udayavani is now on Telegram. Click here to join our channel and stay updated with the latest news.

Next