ಬೆಂಗಳೂರು: ದೇಶದಲ್ಲಿ ಅತಿ ಹೆಚ್ಚು ಹಾಸಿಗೆಗಳು ಮಾರಾಟವಾಗುವ ಖ್ಯಾತ ಕುರ್ಲಾನ್ ಮ್ಯಾಟ್ರಸ್‌ಗೆ ಅಂಡರ್‌ರೈಟರ್ ಲ್ಯಾಬೊರೇಟರಿಸ್ (ಯುಎಲ್)ನ ಪ್ರತಿಷ್ಠಿತ “ಗ್ರೀನ್‌ಗಾರ್ಡ್’ ಸರ್ಟಿಫಿಕೇಷನ್ ದೊರೆತಿದೆ.
ಗ್ರಾಹಕರಿಗೆ ಇಷ್ಟವಾಗುವ ಆರೋಗ್ಯಕರ ಒಳಾವರಣ ಹಾಗೂ ಕನಿಷ್ಠ ರಾಸಾಯನಿಕ ಹೊರಹೊಮ್ಮುವ ಉತ್ಪನ್ನಕ್ಕೆ ನೀಡುವ ಯುಎಲ್ ಗ್ರೀನ್‌ಗಾರ್ಡ್ ಮುದ್ರೆಯನ್ನು ಬಳಸುವ ಅನುಮೋದನೆ ಪಡೆದಿರುವ ಭಾರತದ ಪ್ರಥಮ ಹಾಸಿಗೆ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಕುರ್ಲಾನ್ ಮ್ಯಾಟ್ರಸ್ ಪಾತ್ರವಾಗಿದೆ.
ಇತೀ¤ಚೆಗೆ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಧಾಕರ್ ಪೈ ಅವರು, ಕುರ್ಲಾನ್ ಉತ್ಪನ್ನಗಳ ಬಳಸುವ ಪ್ರತಿಯೊಬ್ಬ ಗ್ರಾಹಕನನ್ನು ನಮ್ಮ ಕುಟುಂಬದ ಸದಸ್ಯ ಎಂದು ಭಾವಿಸುತ್ತೇವೆ. ಕುಟುಂಬದ ಸದಸ್ಯರ ಸುರಕ್ಷತೆ ಹಾಗೂ ಹಿತದೃಷ್ಟಿಗಾಗಿ ಆರೋಗ್ಯಕರ ಉತ್ಪನ್ನಗಳನ್ನು ಬಳಸುವಂತೆ, ನಮ್ಮ ಗ್ರಾಹಕರಿಗೆ ಆರೋಗ್ಯಕರ, ಹಾಗೂ ಪರಿಸರ ಸ್ನೇಹಿ ಉತ್ಪನ್ನಗಳನ್ನು ಕೊಡುವುದು ನಮ್ಮ ಕರ್ತವ್ಯ ಎಂದರು.
ಕುರ್ಲಾನ್ ಹಾಸಿಗೆಗಳು ಒಳಾಂಗಣ ಗಾಳಿಯಲ್ಲಿ ಕನಿಷ್ಠ ಬಾಷ್ಪಯುಕ್ತ ಸಾವಯವ ಸಂಯುಕ್ತಗಳ (ವಿಒಸಿ) ಹೊರಸೂಸುವಿಕೆ ಮೂಲಕ ವಿಶ್ವದ ಅತ್ಯಂತ ಕಠಿಣ ಮಾನದಂಡವನ್ನು ಪೂರೈಸಿವೆ. ಆದ್ದರಿಂದ ಯುಎಲ್ ಗ್ರೀನ್ ಗಾರ್ಡ್ ಸರ್ಟಿಫಿಕೇಟ್ ದೊರೆತಿದೆ. ಈ ಮುದ್ರೆಯು ಗ್ರಾಹಕರಿಗೆ ಒಂದು ರೀತಿಯಲ್ಲಿ ರಕ್ಷಕನಂತೆ ಆರೋಗ್ಯಕರ ಉತ್ಪನ್ನಗಳನ್ನು ಗುರುತಿಸುವಲ್ಲಿ ಸಹಾಯಕವಾಗುತ್ತದೆ. ಅಲ್ಲದೆ, ಪರಿಸರ ಸ್ನೇಹಿ ತಂತ್ರಜ್ಞಾನದೊಂದಿಗೆ ಆರಾಮದಾಯಕ ನಿದ್ರೆ ತರುವ ಸುರಕ್ಷಿತ ಪರಿಹಾರವಾಗಿವೆ ಎಂದು ನುಡಿದರು.
ಉತ್ಪಾದನೆ ವಿಭಾಗದ ಉಪಾಧ್ಯಕ್ಷ ಎಂ.ಎಸ್.ಕಾಮತ್ ಮಾತನಾಡಿ, ಕುರ್ಲಾನ್ ಮ್ಯಾಟ್ರಸ್‌ಗಳು ಅತ್ಯಾಧುನಿಕ ಗುಣಮಟ್ಟದ್ದಾಗಿವೆ. ಆ ಮೂಲಕ ನಮ್ಮ ಗ್ರಾಹಕರಿಗೆ ಸಂತೋಷ ಹಾಗೂ ಆರೋಗ್ಯಕರ ನಿದ್ರೆಯನ್ನು ಒದಗಿಸಲು ಪ್ರಯತ್ನಿಸುತ್ತಿದ್ದೇವೆ. ಗ್ರೀನ್‌ಗಾರ್ಡ್ ಗೋಲ್ಡ್ ಪ್ರಮಾಣೀಕೃತ ಹಾಸಿಗೆಗಳು ಸೂಕ್ಷ್ಮ ವ್ಯಕ್ತಿಗಳಿಗೂ ಸುರಕ್ಷಿತವಾಗಿವೆ. ಇಷ್ಟೇ ಅಲ್ಲದೆ, ಶಾಲೆಗಳು, ಆರೋಗ್ಯ ರಕ್ಷಣಾ ಘಟಕಗಳು ಹಾಗೂ ವಾಣಿಜ್ಯ ಸ್ಥಳಗಳ ಒಳಾಂಗಣ ಪರಿಸರದಲ್ಲಿ ಸೀÌಕಾರ್ಹವಾದ ಉತ್ಪನ್ನಗಳಾಗಿವೆ ಎಂದಿದ್ದಾರೆ.