Advertisement

ವರುಣನ ಕೃಪೆ: ಬಿಸಿಲ ನಾಡಲ್ಲಿ ಹಸಿರ ಹೊದಿಕೆ

03:32 PM Oct 01, 2020 | sudhir |

ಕುಷ್ಟಗಿ: ವರುಣನ ಕೃಪೆಗೆ ತಾಲೂಕಿನ ಅರಣ್ಯ ಇಲಾಖೆ ವ್ಯಾಪ್ತಿಯ ಗುಡ್ಡಗಾಡು ಪ್ರದೇಶದಲ್ಲೀಗ ಹಸಿರು ಕಂಗೊಳಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಕಳೆದ ಜುಲೈ ತಿಂಗಳ ಕೊನೆಯ ವಾರದಿಂದ ಸೆಪ್ಟಂಬರ್‌ ತಿಂಗಳವರೆಗೂ ಕುಷ್ಟಗಿ ತಾಲೂಕಿನಲ್ಲಿ ಸಾಧರಣ ಮಳೆಯ ವಾತವರಣ ಬೆನ್ನಲ್ಲೆ ಇಲ್ಲಿನ ಅರಣ್ಯ ವ್ಯಾಪ್ತಿಯ ಗುಡ್ಡಗಾಡಿನ ಚಿತ್ರಣ ಬದಲಾಗಿದೆ. ಕುರುಚಲು ಗಿಡಗಳಿಂದ ಕೂಡಿದ ಗುಡ್ಡಗಾಡು ಪ್ರದೇಶದಲ್ಲೀಗ ಮಳೆಯಿಂದ ಹಸಿರು ಚಿಗುರೊಡೆದಿದೆ.

Advertisement

ಈ ಪ್ರದೇಶದಲ್ಲಿ ತುಗ್ಗಲಿ, ಹೊಂಗೆ, ತಪ್ಸಿ, ಬೆಟ್ಲ, ಕವಳಿ, ಕಾರಿ, ಮಾಶವಳ, ಬೇವು, ಅಂಟವಾಳ, ಗಣವಾರಿ, ತುಪ್ರಾ, ಗೇರು, ಉದಯ ಮೊದಲಾದ ಸಸ್ಯ ಪ್ರಭೇದಗಳಿವೆ. ನರಿ, ತೋಳ, ಕಾಡು ಹಂದಿ, ನವಿಲು ಮೊದಲಾದ ಪ್ರಾಣಿ ಪಕ್ಷಿಗಳ ಜೀವ ವೈವಿಧ್ಯತೆಯಿದೆ.

ಹನುಮಸಾಗರ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಪಲೆಪ್ಪ ಹಾಗೂ ಚಂದನ ಮಿನಿ ಜಲಪಾತಗಳು ಮಳೆಗಾಲದ
ಸಂದರ್ಭದಲ್ಲಿ ನಯನಮನೋಹರ ಎನಿಸಿವೆ.

ತಾಲೂಕಿನ ಅರಣ್ಯ ಕ್ಷೇತ್ರ: ತಾಲೂಕಿನಲ್ಲಿ ಒಟ್ಟಾರೆಯಾಗಿ 5,528 ಹೆಕ್ಟೇರ್‌ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದು, ಇದರಲ್ಲಿ 13,370 ಹೆಕ್ಟೇರ್‌ ಕಾಯ್ದಿಟ್ಟ ಅರಣ್ಯ ಪ್ರದೇಶ, 1,647.38 ಹೆಕ್ಟೇರ್‌ ರಕ್ಷಿತ ಅರಣ್ಯ ಪ್ರದೇಶವಿದೆ. ಇದರಲ್ಲಿ ಮಾಲಗಿತ್ತಿ ಕಾಯ್ದಿಟ್ಟ ಅರಣ್ಯ 349.0 ಹೆಕ್ಟೇರ್‌, ತುಗ್ಗಲದೋಣಿ 711.83 ಹೆಕ್ಟೇರ್‌, ವಕ್ಕನದುರ್ಗಾ 1,421.30
ಹೆಕ್ಟೇರ್‌, ತಾವರಗೇರಾ 3,71.60 ಹೆಕ್ಟೇರ್‌, ಕುಮಾರಖೇಡ್‌ 515.99 ಹೆಕ್ಟೇರ್‌ ಕಾದಿಟ್ಟ ಅರಣ್ಯ ಪ್ರದೇಶವಿದೆ.

ಹನುಮಸಾಗರ ರಕ್ಷಿತ ಅರಣ್ಯ 1,647.38 ಹೆಕ್ಟೇರ್‌ ವ್ಯಾಪ್ತಿ ಹೊಂದಿದ್ದು, ಹಂಚಿನಾಳ, ಹಿರೇಮನ್ನಾಪುರ, ಶಾಖಾಪುರ,
ಮೆಣಸಗೇರಾ, ಮುದ್ದಲಗುಂದಿ, ಅಡವಿಬಾವಿ ಸೇಬಿನಕಟ್ಟಿ, ಕಿಲ್ಲಾರಹಟ್ಟಿ, ಹುಲಿಯಾಪುರ ಸೇರಿದಂತೆ ಒಟ್ಟು 511.72 ಹೆಕ್ಟೇರ್‌ ಸೆಕ್ಷನ್‌-4 ಅಧೀನದಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next