Advertisement
ಶಾಂಗ್ರಿಲಾ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮಪ್ರಸಾತ್ ಮನೋಹರ್ ಅವರು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ನೀರನ್ನು ಉಳಿತಾಯ ಮಾಡುವಂತಹ ಏರಿಯೇಟರ್ ಅಳವಡಿಸುವ ಮೂಲಕ ಗ್ರೀನ್‌ಸ್ಟಾರ್ ಚಾಲೆಂಜ್‌ಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.
Related Articles
Advertisement
ಸರ್ಕಾರಿ ಕಚೇರಿ, ಮನೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು. ನಗರದ ಯಾವುದೇ ಪ್ರದೇಶದಲ್ಲಿ ಅನಧಿಕೃತವಾಗಿ ಬೋರ್‌ವೆಲ್‌ಕೊರೆಯುತ್ತಿರುವುದು ಅಥವಾ ನೀರಿನ ದುರ್ಬಳಕೆ ಮಾಡುತ್ತಿ ರುವುದು ಕಂಡುಬಂದಲ್ಲಿ ಮಂಡಳಿಗೆ ದೂರು ನೀಡಿದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೆಲವು ಜಲ ಮಂಡಳಿ ಅಧ್ಯಕ್ಷ ಡಾ.ರಾಮಪ್ರಸಾತ್ ಮನೋಹರ್ ಭರವಸೆ ನೀಡಿದರು.
ನೀರಿನ ಸಮಸ್ಯೆ ದೂರು ಇಳಿಕೆ:
ಬೆಂಗಳೂರು ನಗರದ ಹೃದಯ ಭಾಗದಲ್ಲಿ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಇದ್ದಂತಹ ನೀರಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮೊದಲ ಹಂತದಲ್ಲಿ ಪ್ರತಿ ನಿತ್ಯ 300ಕ್ಕೂ ಹೆಚ್ಚು ದೂರುಗಳು ದಾಖಲಾಗುತ್ತಿದ್ದವು. ಈಗ ಅವುಗಳ ಸಂಖ್ಯೆ 100ಕ್ಕೆ ಇಳಿದಿದೆ.
30 ದಿನ ಮಾನಿಟರಿಂಗ್: ಮುಂದಿನ 30 ದಿನಗಳ ಕಾಲ ನಾವು ಹೋಟೆಲ್‌ಗಳ ನೀರಿನ ಬಳಕೆಯನ್ನು ಮಾನಿಟರಿಂಗ್ ಮಾಡುತ್ತೇವೆ. ಗ್ರೀನ್ ಸ್ಟಾರ್ ರೇಟಿಂಗ್ ಅನ್ನು ಪಡೆಯಲು ಬಯಸುವಂತಹ ಹೋಟೆಲ್‌ಗಳು ಈ ಎಲ್ಲಾ ಕ್ರಮಗಳ ಅಳವಡಿಕೆಯ ನಂತರ ಜಲ ಮಂಡಳಿಗೆ ತಿಳಿಸುವುದು ಅವಶ್ಯಕ. ಆನಂತರ ಜಲ ಮಂಡಳಿಯ ಸಿಬ್ಬಂದಿಗಳು ಪರಿಶೀಲನೆಯನ್ನು ಮಾಡಿ ಈ ಪಂಚಸೂತ್ರಗಳನ್ನು ಅಳವಡಿಸಿಕೊಂಡಿರುವ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಗ್ರೀನ್ ಸ್ಟಾರ್ ರೇಟಿಂಗ್ ನೀಡಲಿದ್ದಾರೆ ಎಂದು ತಿಳಿಸಿದರು.
ಅಪಾರ್ಟ್‌ಮೆಂಟ್ ಗ್ರೀನ್ ಸ್ಟಾರ್ ರೇಟಿಂಗ್ ಚಾಲನೆ: ಇದೇ ರೀತಿ ಅಪಾರ್ಟ್‌ಮೆಂಟ್‌ಗಳ ಗ್ರೀನ್ ಸ್ಟಾರ್ ರೇಟಿಂಗ್‌ಗೆ ಶನಿವಾರ ಚಾಲನೆ ನೀಡ ಲಾಗುವುದು. ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಆಯೋಜಿಸಲಾಗಿರುವ ಕಾರ್ಯಕ್ರಮ ದಲ್ಲಿ ಗ್ರೀನ್ ಸ್ಟಾರ್ ಚಾಲೆಂಜ್ ಅನ್ನು ಪ್ರಾರಂಭಿಸಲಾಗುವುದು. ಇದೇ ಪಂಚಸೂತ್ರಗಳ ಆಧಾರದ ಮೇಲೆ ಅಪಾರ್ಟ್‌ಮೆಂಟ್‌ಗಳಿಗೂ ಗ್ರೀನ್ ಸ್ಟಾರ್ ರೇಟಿಂಗ್ ಅನ್ನು ನೀಡುವುದಾಗಿ ತಿಳಿಸಿದರು.