Advertisement

ಇಂದಿನಿಂದ ಹಸುರು ನಿಶಾನೆ

12:43 AM Apr 20, 2020 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರವು ಸೋಮವಾರದಿಂದ ಕೆಲವು ವಲಯಗಳ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಿದೆ. ಆದರೆ ಈ ಚಟುವಟಿಕೆಗಳು ಹಾಟ್‌ಸ್ಪಾಟ್‌ ಜಿಲ್ಲೆಗಳಿಗೆ ಅನ್ವಯವಾಗುವುದಿಲ್ಲ, ಅಲ್ಲಿ ಯಥಾಪ್ರಕಾರ ಲಾಕ್‌ಡೌನ್‌ ಬಿಗಿಯಾಗಿರುತ್ತದೆ ಎಂದು ಹೇಳಿದೆ.

Advertisement

ಈಗಾಗಲೇ ಘೋಷಣೆ ಮಾಡಲಾಗಿರುವ ಕೆಲವು ವಲಯಗಳಿಗೆ ಕೇಂದ್ರ ಗೃಹ ಇಲಾಖೆ ಬದಲಾವಣೆ ತಂದಿದೆ. ಅದರಲ್ಲಿ ಪ್ರಮುಖವಾದದ್ದು ಇ ಕಾಮರ್ಸ್‌ಗಳಿಗೆ ನೀಡಲಾಗಿದ್ದ ಒಪ್ಪಿಗೆಯನ್ನು ಭಾಗಶಃ ವಾಪಸ್‌ ಪಡೆದಿರುವುದು. ಅಂದರೆ ಅತ್ಯಗತ್ಯ ಮತ್ತು ಅತ್ಯಗತ್ಯವಲ್ಲದ ವಸ್ತುಗಳ ಮಾರಾಟಕ್ಕಾಗಿ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಸೇರಿ ಕೆಲವು ಕಂಪೆನಿಗಳಿಗೆ ಒಪ್ಪಿಗೆ ನೀಡಲಾಗಿತ್ತು. ಆದರೆ ಚಿಲ್ಲರೆ ವ್ಯವಹಾರ ಕ್ಷೇತ್ರದಲ್ಲಿ ವ್ಯಾಪಕ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ಕೇವಲ ಅಗತ್ಯ ಸೇವೆಗಳನ್ನಷ್ಟೇ ನೀಡಲು ಅವಕಾಶ ನೀಡಲಾಗಿದೆ.

ಉಳಿದಂತೆ ಮಾ.25ರಿಂದ ಜಾರಿಯಲ್ಲಿರುವ ಎಲ್ಲ ನಿರ್ಬಂಧಗಳೂ ಹಾಗೆಯೇ ಮುಂದುವರಿಯುತ್ತವೆ. ಶಾಲಾ ಕಾಲೇಜುಗಳು, ಕೈಗಾರಿಕೆಗಳು, ಸಾರಿಗೆ, ರೈಲು, ವಿಮಾನ ಸಂಚಾರ, ಆಟೋ, ಟ್ಯಾಕ್ಸಿ, ಮಾಲ್‌, ಸಿನೆಮಾ ಹಾಲ್‌ಗಳು, ಎಲ್ಲ ರೀತಿಯ ಕ್ರೀಡೆ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಕಾರ್ಯಕ್ರಮಗಳು, ಹಬ್ಬ, ಜಾತ್ರೆ, ಉತ್ಸವಗಳು, ಹೊಟೇಲ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಮೇಲಿನ ನಿರ್ಬಂಧ ಹಾಗೆಯೇ ಮುಂದುವರಿಯಲಿವೆ.

ಯಾವುದಕ್ಕೆ ಅವಕಾಶ?
1. ಕೃಷಿ ಮತ್ತು ಮೀನುಗಾರಿಕೆ
2. ಹೈನುಗಾರಿಕೆ ಚಟುವಟಿಕೆಗಳು
3. ಟೀ, ಕಾಫಿ, ರಬ್ಬರ್‌ ಪ್ಲಾಂಟೇಶನ್‌ (ಶೇ.50 ಕಾರ್ಮಿಕರು)
4. ನರೇಗಾ ಚಟುವಟಿಕೆಗಳು
5. ಅಂಗನವಾಡಿಗಳು, ಮಕ್ಕಳ ಮತ್ತು ಹಿರಿಯರ ಆಶ್ರಮಗಳು
6. ಲಾರಿಗಳ ಓಡಾಟ (ಅಂತಾರಾಜ್ಯಕ್ಕೂ ಅವಕಾಶ)
7. ಗ್ರಾಮೀಣ ಪ್ರದೇಶದ ಕೈಗಾರಿಕೆಗಳು
8. ನೀರಾವರಿ ಯೋಜನೆಗಳು, ಕಟ್ಟಡ ಕಾಮಗಾರಿಗಳು

Advertisement

Udayavani is now on Telegram. Click here to join our channel and stay updated with the latest news.

Next