Advertisement

Engineers:150 ಎಂಜಿನಿಯರ್‌ಗಳ ನೇಮಕಾತಿಗೆ ಗ್ರೀನ್‌ ಸಿಗ್ನಲ್‌

03:40 PM Sep 05, 2023 | Team Udayavani |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಎಂಜಿನಿಯರ್‌ ವಿಭಾಗದ ಅಧಿಕಾರಿಗಳ ಕಾರ್ಯದೊತ್ತಡ ಮತ್ತಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ)ಮುಂದಾಗಿದೆ. ಈ ಹಿಂದೆ ಮಂಜೂರಾ ಗಿಯೂ ಖಾಲಿಯಿರುವ 150 ಎಂಜಿನಿ ಯರ್‌ಗಳನ್ನು ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಮೂಲಕ ನೇರ ನೇಮ ಕಾತಿ ಮಾಡಿಕೊಳ್ಳಲು ಸಹಮತಿ ನೀಡಿದೆ.

Advertisement

ಆ.21ರಂದು ಆರ್ಥಿಕ ಇಲಾಖೆ ಕೂಡ ಎಂಜಿನಿಯರ್‌ಗಳ ನೇಮಕಾತಿಗೆ ಸಹಮತಿ ನೀಡಿದ್ದು, ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡ ಅನುಮೋದಿಸಿ ದ್ದಾರೆ. ಹೀಗಾಗಿ, ಶೀಘ್ರ ಪಾಲಿಕೆಯಲ್ಲಿ ಖಾಲಿಯಿರುವ 100 ಸಹಾಯಕ ಅಭಿಯಂತರರು (ಸಿವಿಲ್‌)ಮತ್ತು 50 ಕಿರಿಯ ಎಂಜಿನಿಯರ್‌ಗಳ ನೇರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

2009-10ರಲ್ಲಿ ನೇಮಕಾತಿ ನಡೆದಿತ್ತು: 13 ವರ್ಷ ನಂತರ ನಾಗರಾಭಿವೃದ್ಧಿ ಇಲಾ ಖೆ ಬಿಬಿಎಂಪಿಯಲ್ಲಿ ಖಾಲಿರುವ 150 ಎಂಜಿನಿಯರಿಂಗ್‌ ಹುದ್ದೆಗಳ ನೇಮಕಾತಿ ಮುಂದಾಗಿದೆ. ಈ ಹಿಂದೆ 2009-10ರಲ್ಲಿ ನೇಮಕಾತಿ ನಡೆದಿತ್ತು. ಆಗ ಬಿಬಿಎಂಪಿಗೆ 120 ಕಾಯಂ ಎಂಜಿನಿಯರ್‌ಗಳನ್ನು ಸರ್ಕಾರ ನೇರ ನೇಮಕಾತಿ ಮಾಡಿಕೊಂಡಿ ತ್ತು. ಅದೇ ಕೊನೆ. ಆ ನಂತರ ಅಲ್ಪಾವಧಿಗೆ ನಿಯೋ ಜಿತ ಎಂಜಿನಿಯರ್‌ಗಳಿಂದ ಖಾಲಿ ಹುದ್ದೆ ಭರ್ತಿ ಮಾಡಲಾಗಿತ್ತು.

ಕೆಪಿಎಸ್‌ಸಿ ಮೂಲಕ ನೇಮಕ ಕುತೂಹಲ: ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌  ಮೂಲಕ ಗುತ್ತಿಗೆ ಆಧಾರದಲ್ಲಿ ಸಿವಿಲ್‌ ಎಂಜಿನಿಯರ್‌ಗಳ ನೇಮಕಾತಿ ನಡೆಸಿತ್ತು. ಆದರೆ, ಇದೀಗ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ  ಸಹಾಯಕ ಮತ್ತು ಕಿರಿಯ ಎಂಜಿನಿ ಯರ್‌ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿ ರುವುದು ಕುತೂಹಲ ಮೂಡಿಸಿದೆ. ಮೊದಲ ಹಂತದಲ್ಲಿ ಪಾಲಿಕೆಯಲ್ಲಿ ಮಂಜೂರಾಗಿ ಖಾಲಿ ಇರುವ ನೂರು ಸಹಾಯಕ ಅಭಿಯಂತ ರರು ಮತ್ತು ಐವತ್ತು ಕಿರಿಯ ಅಭಿಯಂ ತರರನ್ನು ಕೆಪಿಎಸ್‌ಸಿ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಸಹ ಮತ ನೀಡಿದ್ದು, ಈ ಬಗ್ಗೆ  ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ)ಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್‌.ಕೆ.ಲಕ್ಷ್ಮೀ ಸಾಗರ್‌ ಸುತ್ತೋಲೆಯನ್ನೂಹೊರ ಡಿಸಿ ದ್ದಾರೆ. ಜತೆಗೆ ಈ ಹುದ್ದೆಗಳು ಭರ್ತಿ ಯಾದ ನಂತರ ಪಾಲಿಕೆಯಲ್ಲಿ ನಿಯೋಜ ನೆ ಮತ್ತು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವ ಹಿಸುತ್ತಿರುವ ಸಹಾಯಕ ಮತ್ತು ಕಿರಿಯ ಎಂಜಿನಿಯರ್‌ಗಳನ್ನು ಪ್ರಮಾಣಕ್ಕೆ ಅನುಗುಣವಾಗಿ ಕಡ್ಡಾಯವಾಗಿ ಕಡಿಮೆ ಮಾಡಿ ಕೊಳ್ಳುವಂತೆ ನಿರ್ದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next