Advertisement
ಸಾವಯವ ಬೆಳೆಶಾಲೆಯಲ್ಲಿ ಬೆಳೆದ ತರಕಾರಿಗೆ ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೆ ಸಾವಯವ ಹಟ್ಟಿ ಗೊಬ್ಬರ ಬಳಸಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಶಾಲಾ ಮಕ್ಕಳ ಹೆತ್ತವರು ಮತ್ತು ಶಿಕ್ಷಕರ ಮಾರ್ಗದರ್ಶನದೊಂದಿಗೆ ಶಾಲಾ ತೋಟದಲ್ಲಿ ಶಾಲಾ ಬಿಸಿಯೂಟಕ್ಕೆ ಬೇಕಾದ ತರಕಾರಿಗಳನ್ನು ಬೆಳೆಸಲಾಗುತ್ತಿದೆ.
ಸುಮಾರು ಅರ್ಧ ಎಕ್ರೆಯಲ್ಲಿ ಮೂರು ವರ್ಷ ಗಳಿಂದ ನಿರಂತರ ತರಕಾರಿ ಬೆಳೆಯುತ್ತಿರುವ ಶಾಲೆಯು ಅಲಸಂಡೆ, ಹೀರೇಕಾಯಿ, ಪಡವಲ ಕಾಯಿ, ಸೋರೆಕಾಯಿ, ಸೌತೆಕಾಯಿ, ಕುಂಬಳಕಾಯಿ, ಸುವರ್ಣ ಗಡ್ಡೆ, ಸಾಮ್ರಾಣಿ ತರಕಾರಿಗಳನ್ನು ಬೆಳೆಸಲಾಗಿದೆ. ಪ್ರತಿ ವರ್ಷ ಜೂನ್‌ನಿಂದ ಅಕ್ಟೋಬರ್ ತನಕ ಒಂದು ಬೆಳೆ ಹಾಗೂ ಅಕ್ಟೋಬರ್‌ನಿಂದ ಮಾರ್ಚ್ ತನಕ ಇನ್ನೊಂದು ಬೆಳೆಯನ್ನು ಬೆಳೆಯಲಾಗುತ್ತದೆ. ಕಳೆದ ಬಾರಿ ಬೆಳೆದ ತರಕಾರಿ ದಿನ ಬಿಸಿಯೂಟದ ಬಳಕೆಗಿಂತ ಹೆಚ್ಚಾಗಿದ್ದ ಕಾರಣ ಅವನ್ನು ಅಂಗಡಿಗೆ ಮಾರಲಾಗಿದೆ. ಅದರಿಂದ ಬಂದ ಹಣದಿಂದ ದಿನಸಿ ಸಾಮಾನುಗಳನ್ನು ಖರೀದಿಸಲಾಗಿದೆ ಎನ್ನುತ್ತಾರೆ ಈ ಕಾರ್ಯಕ್ರಮದ ರೂವಾರಿ ದೈ.ಶಿ. ಶಿಕ್ಷಕ ರಮಾನಂದ ಶೆಟ್ಟಿ ಅವರು.
Related Articles
Advertisement
ಶೇ.100 ಹಾಜರಾತಿಈ ಹಿಂದೆ ಮಕ್ಕಳು ನಿರಂತರವಾಗಿ ಶಾಲೆಗೆ ಬರುತ್ತಿರಲಿಲ್ಲ. ಆದರೆ ಕಳೆದ ಮೂರು ವರ್ಷಗಳಿಂದ ಶೇ.100 ಹಾಜರಾತಿ ಇದೆ. ಇದಕ್ಕೆ ಕಾರಣ ಶಾಲೆಯ ವಠಾರದಲ್ಲಿ ಮಾಡಲಾಗುತ್ತಿರುವ ತರಕಾರಿ ಕೃಷಿ. ಮಕ್ಕಳಿಗೆ ಈ ಬಗ್ಗೆ ವಿಶೇಷ ಆಸಕ್ತಿಯಿದ್ದು, ಓದಿನ ಜತೆ ಕೃಷಿ ಕೆಲಸದಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಕಾರಣ ಇದು ಸಾಧ್ಯವಾಗಿದೆ ಎಂಬುದು ರಮಾನಂದ ಶೆಟ್ಟಿ ಅವರ ಅಭಿಪ್ರಾಯ. ವಿಶೇಷ ಆಸಕ್ತಿ
ಹೆತ್ತವರ ನಿರಂತರ ಸಹಕಾರ ಹಾಗೂ ಮಕ್ಕಳಲ್ಲಿ ಕೃಷಿ ಬಗ್ಗೆ ಇರುವ ವಿಶೇಷ ಆಸಕ್ತಿಯಿಂದ ಸತತ ಮೂರು ವರ್ಷಗಳಿಂದ ತರಕಾರಿ ಬೆಳೆಯಲಾಗುತ್ತಿದೆ. ತರಕಾರಿ ಕೃಷಿ ಕೆಲಸಕ್ಕೆ ಹೆತ್ತವರು ಶ್ರಮದಾನ ಮಾಡುವುದರ ಜತೆಗೆ ತಮ್ಮಲ್ಲಿರುವ ಹಟ್ಟಿ ಗೊಬ್ಬರವನ್ನು ಉಚಿತವಾಗಿ ನೀಡುತ್ತಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಣ ಇಲಾಖೆಯ ನಿರಂತರ ಪ್ರೋತ್ಸಾಹ ಕೂಡ ಇದೆ.
-ಶ್ಯಾಮಲಾ ಶೆಟ್ಟಿ,
ಮುಖ್ಯ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ ಶಿವಪುರ - ಹೆಬ್ರಿ ಉದಯಕುಮಾರ್ ಶೆಟ್ಟಿ