Advertisement
ಈ ಹಿಂದೆ ಪ್ರಸ್ತಾವನೆಯಲ್ಲಿದ್ದ ಬೆಳ್ತಂಗಡಿ ತಾಲೂಕಿನ ಗ್ರಾಮಗಳನ್ನು ಕೈಬಿಟ್ಟು ಪುತ್ತೂರು ತಾಲೂಕಿನ 35 ಗ್ರಾಮಗಳು ಹಾಗೂ ಸುಳ್ಯ ತಾಲೂಕಿನ 7 ಗ್ರಾಮಗಳನ್ನು ಸೇರಿಸಿಕೊಂಡು ಒಟ್ಟು 42 ಗ್ರಾಮಗಳ ವ್ಯಾಪ್ತಿಯ ನೂತನ ಕಡಬ ತಾಲೂಕು ರೂಪುಗೊಂಡಿದೆ. ಹೊಸ ತಾಲೂಕಿನ ಒಟ್ಟು ಜನಸಂಖ್ಯೆ (2011ರ ಜನಗಣತಿಯಂತೆ) 1,20,086 ಆಗಿದ್ದು, ಒಟ್ಟು 149159.8 ಎಕರೆ ಭೌಗೋಳಿಕ ವಿಸ್ತೀರ್ಣವಿದೆ.
ಪ್ರಸ್ತುತ ಪುತ್ತೂರು ತಾಲೂಕಿನಲ್ಲಿರುವ ಕಡಬ, ಕೋಡಿಂಬಾಳ, ಬಂಟ್ರ, 102 ನೆಕ್ಕಿಲಾಡಿ, ಐತ್ತೂರು, ಬಿಳಿನೆಲೆ, ಕೊಂಬಾರು,
ನೂಜಿಬಾಳ್ತಿಲ, ರೆಂಜಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ಪೆರಾಬೆ, ಕುಂತೂರು, ಆಲಂಕಾರು, ರಾಮಕುಂಜ, ಹಳೆನೇರೆಂಕಿ, ಕೊಯಿಲ, ದೋಳ್ಪಾಡಿ, ಕಾಣಿಯೂರು, ಚಾರ್ವಾಕ, ಬೆಳಂದೂರು, ಕಾಯಿಮಣ, ಕುದ್ಮಾರು, ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಕೊಣಾಜೆ, ಶಿರಿಬಾಗಿಲು, ಗೋಳಿತ್ತೂಟ್ಟು, ಕೊಣಾಲು, ಆಲಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ, ಸುಳ್ಯ ತಾಲೂಕಿನ ಏನೆಕಲ್ಲು, ಸುಬ್ರಹ್ಮಣ್ಯ, ಐನೆಕಿದು, ಬಳ್ಪ, ಕೇನ್ಯ, ಎಣ್ಮೂರು ಮತ್ತು ಎಡಮಂಗಲ ಗ್ರಾಮಗಳು ನೂತನ ಕಡಬ ತಾಲೂಕಿನ ವ್ಯಾಪ್ತಿಯಲ್ಲಿವೆ. ಆಗಬೇಕಿರುವ ಕಚೇರಿಗಳು
ಸುಸಜ್ಜಿತ ಮಿನಿ ವಿಧಾನಸೌಧ, ನ್ಯಾಯಾಲಯ, ತಾ| ಮಟ್ಟದ ಸರಕಾರಿ ಆಸ್ಪತ್ರೆ, ಸಬ್ ರಿಜಿಸ್ಟ್ರಾರ್ ಕಚೇರಿ, ಖಜಾನೆ, ಅಗ್ನಿಶಾಮಕ ಠಾಣೆ, .ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ತೋಟಗಾರಿಕೆ, ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಕಚೇರಿಗಳು, ಜಿ.ಪಂ. ಎಂಜಿನಿಯರಿಂಗ್ ವಿಭಾಗ, ಆಹಾರ ನಿರೀಕ್ಷಕರ ಕಚೇರಿ, ಸ.ಪ. ಕಾಲೇಜು, ಪ್ರತ್ಯೇಕ ಎಪಿಎಂಸಿ ಹಾಗೂ ಪ್ರತ್ಯೇಕ ತಾ.ಪಂ. ವ್ಯವಸ್ಥೆ ಮತ್ತು ಕಚೇರಿ ಆಗಬೇಕಿದೆ.
Related Articles
ನೂತನ ತಾಲೂಕು ಅನುಷ್ಠಾನಕ್ಕೆ ಬೇಕಾಗುವ ಸಿದ್ಧತೆಗಳಿಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಲವು ಸುತ್ತಿನ ಸಭೆಗಳು ನಡೆದಿವೆ. ವಿವಿಧ ಇಲಾಖೆಗಳ ತಾಲೂಕುಮಟ್ಟದ ಕಚೇರಿಗಳು ಕಡಬದಲ್ಲಿ ತೆರೆಯಬೇಕಾಗಿರುವುದರಿಂದ ಆ ದಿಕ್ಕಿನಲ್ಲಿಯೂ ತಯಾರಿ ನಡೆಸಲಾಗುತ್ತಿದೆ. ಕರಡು ಅಧಿಸೂಚನೆ ಹೊರಡಿಸಿ ನೂತನ ತಾಲೂಕಿನ ಕುರಿತು ಸಾರ್ವಜನಿಕರಿಂದ ಸಲಹೆ, ಸೂಚನೆಗಳು ಹಾಗೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವಂತೆ ಕಾಲಾವಕಾಶ ನೀಡಿದ್ದ ರಾಜ್ಯ ಸರಕಾರ ಇದೀಗ ಅಂತಿಮ ಅಧಿಸೂಚನೆ ಹೊರಡಿಸಿದೆ. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳ ತಾಲೂಕುಮಟ್ಟದ ಕಚೇರಿಗಳು ಕಡಬದಲ್ಲಿಯೇ ಕಾರ್ಯ ನಿರ್ವಹಿಸಲಿವೆ.
– ಜಾನ್‌ಪ್ರಕಾಶ್ ರೋಡ್ರಿಗಸ್,
ಕಡಬ ತಹಶೀಲ್ದಾರ್
Advertisement
ನೂತನ ಕಚೇರಿಗಳಿಗೆ ಜಾಗ ಮೀಸಲುತಾಲೂಕು ಮಟ್ಟದ ಕಚೇರಿಗಳನ್ನು ತೆರೆಯಲು ಕಡಬದಲ್ಲಿ ಜಮೀನು ಕಾದಿರಿಸಲಾಗಿದೆ. ಮಿನಿ ವಿಧಾನ ಸೌಧ ನಿರ್ಮಾಣಕ್ಕಾಗಿ 1.60 ಎಕ್ರೆ, ನಾಡ ಕಚೇರಿಗೆ1.00ಎಕ್ರೆ, ಶಿಕ್ಷಣ ಇಲಾಖೆಗೆ 14.56 ಎಕ್ರೆ, ಪೊಲೀಸ್ ಇಲಾಖೆಗೆ 2.5 ಎಕ್ರೆ, ಲೋಕೋಪಯೋಗಿ ಇಲಾಖೆಗೆ 0.20 ಎಕ್ರೆ, ಪಂಚಾಯತ್ ರಾಜ್ ಇಲಾಖೆಗೆ 5.62 ಎಕ್ರೆ, ನ್ಯಾಯಾಂಗ ಇಲಾಖೆಗೆ 2.50 ಎಕ್ರೆ, ಕೃಷಿ ಇಲಾಖೆಗೆ 0.10 ಎಕ್ರೆ, ಮೆಸ್ಕಾಂಗೆ 2.90 ಎಕ್ರೆ, ಆರೋಗ್ಯ ಇಲಾಖೆಗೆ2.11 ಎಕ್ರೆ ಭೂಮಿ ಕಾದಿರಿಸಲಾಗಿದೆ. ತೋಟಗಾರಿಕಾ ಇಲಾಖೆ ಕಚೇರಿಯನ್ನು ಪಂಜ ರಸ್ತೆಯ ಹಳೆಯ ಜೇನು ಕೃಷಿ ಕಚೇರಿಯ ಕಟ್ಟಡದಲ್ಲಿ ತೆರೆಯಲು ಸಿದ್ಧತೆ ನಡೆದಿದೆ. ತಾಲೂಕು ಪಂಚಾಯತ್ ಕಚೇರಿಗಳಿಗೆ ಹಳೆ ಸ್ಟೇಶನ್‌ನಲ್ಲಿರುವ ತಾಲೂಕು ಪಂಚಾಯತ್ ಅಧೀನದ ವಸತಿ ಗೃಹಗಳನ್ನು ಬಳಸಲು ಉದ್ದೇಶಿಸಲಾಗಿದೆ.