Advertisement
ಹಸಿರು ಭೂಮಿ ಪ್ರತಿಷ್ಠಾನ ಹಾಗೂ ಚಿಕ್ಕಟ್ಟೆ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಅಡ್ಲಿಮನೆ ಯಲ್ಲಿ ಏರ್ಪಡಿಸಿದ್ದ ಪರಿಸರ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಮನುಷ್ಯರು ದೇವಸ್ಥಾನಕ್ಕೆ ಹೋಗದಿದ್ದರೂ ತಪ್ಪಲ್ಲ, ಆದರೆ ಕೆರೆ-ಕಟ್ಟೆಗಳ ಪುನಶ್ಛೇತನ ಕಾರ್ಯ ವನ್ನು ತಮ್ಮ ಆದ್ಯಕರ್ತವ್ಯವೆಂದು ಭಾವಿಸ ಬೇಕೆಂದು ನಾಗರಾಜ್ ಹೇಳಿದರು.
ಕಾರ್ಯಪಡೆ ರಚಿಸಿ: ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಆರ್.ಪಿ.ವೆಂಕಟೇಶಮೂರ್ತಿ ಮಾತ ನಾಡಿ, ಹಾಸನ ನಗರದ ಸುತ್ತಮುತ್ತ ಬಿಲ್ವರ್‌ಗಳು, ಲೇಔಟ್ ಮಾಡುವವರು ಕೆರೆಗಳಲ್ಲಿ ಅವೈಜ್ಞಾನಿಕವಾಗಿ ಮಣ್ಣು ಬಗೆಯುತ್ತಿರುವು ದರಿಂದ ಕೆರೆಗಳು ವಿರೂಪಗೊಳ್ಳುತ್ತಿವೆ ಹಾಗೂ ತ್ಯಾಜ್ಯಗಳಿಂದ ಕೆರೆಗಳು ಹಾಳಾಗುತ್ತಿವೆ. ಇದನ್ನು ತಡೆಯಲು ಪ್ರತಿ ಗ್ರಾಮಗಳಲ್ಲೂ ಶಾಸನ ಬದ್ಧವಾದ ಕೆರೆ ಸಂರಕ್ಷಣಾ ಸಮಿತಿಗಳ ರಚನೆ ಆಗಬೇಕು ಹಾಗೂ ಸಾರ್ವಜನಿಕ ಆಸ್ತಿ ರಕ್ಷಣೆಗೆ ತಹಶೀಲ್ದಾರ್ ಹಾಗೂ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಮಟ್ಟದ ಅಧಿಕಾರಿಗಳನ್ನೊಳ ಗೊಂಡ ಕಾರ್ಯಪಡೆಯನ್ನು ತುರ್ತಾಗಿ ರಚಿಸ ಬೇಕಾಗಿದೆ. ಸಾರ್ವಜನಿಕರಿಗೆ ಕೆರೆ ತಮ್ಮದು ಎಂಬ ಭಾವನೆ ಬರಬೇಕಾದರೆ ಕನಿಷ್ಠ ನೂರು ರೂಗಳನ್ನಾದರೂ ದೇಣಿಗೆಯಾಗಿ ನೀಡಬೇಕು. ಈ ಮೂಲಕ ಹೆಚ್ಚು ಕೆಲಸಕ್ಕೆ ಒಳಗೊಳ್ಳು ವಂತಾಗಬೇಕು ಎಂದರು.
ದೇಣಿಗೆ ಭರವಸೆ: ಉದ್ಯಮಿ ಸುಜಾತಾ ನಾರಾಯಣ ಅವರು, ಚಿಕ್ಕಟ್ಟೆ ಅಭಿವೃದ್ಧಿಗೆ 50 ಸಾವಿರ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದರು. ಹಾಸನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತಪ್ಪ ಹಾಗೂ ಮುಂಜಾನೆ ಮಿತ್ರರ ಬಳಗ ಸ್ಥಳದಲ್ಲೇ ತಲಾ 5 ಸಾವಿರ ರೂ. ದೇಣಿಗೆ ನೀಡಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅಧಿಕಾರಿ ಪುರುಷೋತ್ತಮ, ಡಾ.ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್, ಪ್ರತಿಷ್ಠಾನದ ಉಪಾಧ್ಯಕ್ಷೆ ಡಾ. ಸಾವಿತ್ರಿ ಅವರು ಕೆರೆಯ ಅಭಿವೃದ್ಧಿಗೆ ಹಣಕಾಸು ನೆರವು ನೀಡುವುದಾಗಿ ಘೋಷಿಸಿದರು.
ಚಿಕ್ಕಟ್ಟೆ ಅಭಿವೃದ್ಧಿ ಸಂಘದ ಖಜಾಂಚಿ ಸತೀಶ್‌ಕುಮಾರ್ ಅವರು ಸಂಘದ ಲೆಕ್ಕಪತ್ರ ಮಂಡಿಸಿ, ಇಲ್ಲಿಯ ತನಕ 4.40 ಲಕ್ಷ ರೂ. ಸಂಗ್ರಹವಾಗಿದ್ದು, 5 ಲಕ್ಷ ರೂ.ಗೂ ಹೆಚ್ಚು ಮೊತ್ತದ ಕಾಮಗಾರಿ ನಡೆದಿದೆ ಎಂದು ವಿವರಿಸಿದರು.
ಸಂಘದ ಅಧ್ಯಕ್ಷ ಎಚ್.ಎಸ್.ಉಪೇಂದ್ರಾ ಚಾರ್ ಮಾತನಾಡಿ, ಕೆರೆಯ ಅಭಿವೃದ್ಧಿಗೆ ಸರ್ಕಾರ ಹಾಗೂ ಸಾರ್ವಜನಿಕರು ನೆರವು ನೀಡಬೇಕೆಂದು ವಿನಂತಿ ಮಾಡಿದರು. ನಗರ ಸಭಾ ಸದಸ್ಯರಾದ ಪ್ರಶಾಂತ್ ನಾಗರಾಜ್, ರೋಹಿತ್ ತಾಜ್ ಆಸಿಫ್, ಅಶ್ವಿನಿ ಮಹೇಶ್, ಪ್ರತಿಷ್ಠಾನದ ಕಾರ್ಯದರ್ಶಿ ಎಸ್.ಪಿ. ರಾಜೀವೇ ಗೌಡ, ಜನಪ್ರಿಯ ಆಸ್ಪತ್ರೆಯ ಡಾ. ಬಷೀರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ವೈ.ಎನ್.ಸುಬ್ಬಸ್ವಾಮಿ ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ಎಚ್.ವೇದ ಶ್ರೀರಾಜ್ ಸ್ವಾಗತಿ ಸಿದರು. ಮಂಜುನಾಥ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಅಹಮದ್ ಹಗರೆ ಅವರು ಹಸಿರು ಭೂಮಿ ಪ್ರತಿಷ್ಠಾನ ಬೆಳೆದು ಬಂದ ದಾರಿಯ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶಿಸಿದರು.