ಬೆಂಗಳೂರು: ವಿಶ್ವದ ಹೆಸರಾಂತ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿಯು “ಇಂಡಿಯನ್ ಫೆಡ ರೇಷನ್ ಆಫ್ ಗ್ರೀನ್ ಎನರ್ಜಿ’ (ಐಎಫ್ಜಿಇ) ಕೊಡಮಾಡುವ ಭಾರತದ ಅತ್ಯುತ್ತಮ ಇಂಧನ ಪ್ರಶಸ್ತಿ-2020 ಇದರ ಮೂರನೇ ಆವೃತ್ತಿಯ “ಅತ್ಯುತ್ತಮ ನವೀಕರಿಸಬಹುದಾದ ಇಂಧನ ಬಳಕೆದಾರ’ ವಿಭಾಗದಲ್ಲಿ ಗುರುತಿಸಲ್ಪಟ್ಟಿದೆ.
ದೀರ್ಘಾವಧಿಯ ಇಂಧನ ಭದ್ರತೆ ಮತ್ತು ಸ್ಥಿರತೆಯನ್ನು ಖಚಿತ ಪಡಿಸಿಕೊಳ್ಳಲು ನವೀಕರಿಸಬಹುದಾದ ಇಂಧನದಲ್ಲಿ ಪರ್ಯಾಯ ಮೂಲಗಳ ಬಳಕೆಯನ್ನು ಹೆಚ್ಚಿಸುವ ಸಮರ್ಥನೀಯ ಪ್ರಯತ್ನಗಳಿಗೆ ಟಿವಿಎಸ್ ಮೋಟಾರ್ಸ್ ಈ ಪ್ರಶಸ್ತಿಗೆ ಭಾಜನವಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ನವೀಕರಿಸ ಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಸಚಿವ ಭಗವಂತ ಖೂಬಾ ಅವರು ಪ್ರಶಸ್ತಿ ಪ್ರದಾನ ಮಾಡಿ ದರು. ಮೂಲಗಳಲ್ಲಿ ಶಕ್ತಿಯಲ್ಲಿ ಪರ್ಯಾಯ ವಿದ್ಯುತ್ ಮೂಲಗಳ ಬಳಕೆಯನ್ನು ಹೆಚ್ಚಿಸುವ ಸಮರ್ಥನೀಯ ಪ್ರಯತ್ನಗಳ ಅಂಗೀಕಾರವಾಗಿ ಕಂಪನಿಯು ಈ ಪ್ರಶಸ್ತಿಯನ್ನು ಗೆದ್ದಿದೆ.
ಇದನ್ನೂ ಓದಿ:- ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ
ಸಲಕರಣೆಗಳ ದಕ್ಷತೆಯನ್ನು ಉತ್ತಮಗೊಳಿಸುವ ಮೂಲಕ ಮತ್ತು ಎಲ್ಲಾ ಘಟಕಗಳ ಚಾಲನಾ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನವನ್ನು ಸಂಯೋಜಿ ಸುವ ಮೂಲಕ ವಿದ್ಯುತ್ ಸಂರಕ್ಷಣೆಯನ್ನು ಸಾಧಿಸಬಹುದು. ಟಿವಿಎಸ್ ಮೋಟಾರ್ನಲ್ಲಿ ಈ ನಿರಂತರ ಪ್ರಯತ್ನಗಳು ನಿರ್ದಿಷ್ಟ ವಿದ್ಯುತ್ ಬಳಕೆಯನ್ನು ಶೇ.15 ಮತ್ತು ನಿರ್ದಿಷ್ಟ ಇಂಧನ ಬಳಕೆಯನ್ನು ಶೇ.20ರಷ್ಟು ಕಡಿಮೆ ಮಾಡಲಾಗಿದೆ. ನವೀಕರಿಸಬಹುದಾದ ಇಂಧನ ಉಪಕ್ರಮಗಳ ಮೂಲಕ 2020-21ರಲ್ಲಿ ಹೊರಸೂಸುವಿಕೆ ಪ್ರಮಾಣ 58 ಸಾವಿರ ಟನ್ ಕಡಿತಗೊಂಡಿತು.
ಹೆಚ್ಚುವರಿಯಾಗಿ, ಕಂಪನಿಯು 5.9 ಮೆ.ವ್ಯಾ. ಛಾವಣಿ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥಯ ವನ್ನು ಹೆಚ್ಚಿಸಿದೆ. 35 ಮೆ.ವ್ಯಾ. ಪವನ ಶಕ್ತಿ ಸೇರ್ಪಡೆ ಗೊಳಿಸಲಾಯಿತು. 2020-21ರಲ್ಲಿ, ನವೀಕರಿಸಬ ಹುದಾದ ಶಕ್ತಿಯು ಒಟ್ಟಾರೆ ಕಂಪನಿಯ ವಿದ್ಯುತ್ ಬಳಕೆಯ ಶೇ.84ರಷ್ಟು ಕೊಡುಗೆ ನೀಡಿತು. ಟಿವಿಎಸ್ ಮೋಟಾರ್ ಕಂಪನಿಯು ತನ್ನ ಉತ್ಪಾದನಾ ಘಟಕಗಳಲ್ಲಿ ಸಮಗ್ರ ಹಸಿರು ಉಪಕ್ರಮಗಳನ್ನು ಕೈಗೊಂಡಿದೆ. ಶೂನ್ಯ ವಿಸರ್ಜನಾ ಘಟಕಗಳು, ನೀರಿನ ಮರುಬಳಕೆ, ಮರುಬಳಕೆಗಾಗಿ ವಿನ್ಯಾಸ, ಮಳೆ ನೀರು ಕೊಯ್ಲು ಮತ್ತು ಜೀವ ವೈವಿಧ್ಯ ಸಂರಕ್ಷಣೆಯನ್ನು ಅಳವಡಿಸಿಕೊಳ್ಳಲಾಗಿದೆ.