Advertisement
ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ವಿವಿಧೆಡೆಯಿಂದ ನೀರು ಸಮುದ್ರ ಸೇರಿದೆ. ನೀರಿನಲ್ಲಿ ಅತೀ ಸೂಕ್ಷ್ಮ ಆಲ್ಗಾಲ್ ಹೆಚ್ಚಾಗಿ ಬಣ್ಣ ಬದಲಾಗುತ್ತದೆ. ಹೀಗಾಗಿ ಸಮುದ್ರದ ಬಣ್ಣ ಹಸುರಾಗಿ ಗೋಚರಿಸುತ್ತದೆ. ಇದು ಸಮುದ್ರ ತೀರದುದ್ದಕ್ಕೂ ಗೋಚರಿಸದೇ ಕೆಲವು ಭಾಗದ ದಡದಲ್ಲಿ ಮಾತ್ರ ಕಂಡು ಬರುತ್ತದೆ ಎಂದು ತಜ್ಞರ ಅಭಿಪ್ರಾಯಟ್ಟಿದ್ದಾರೆ. ಆದರೆ ಸಮುದ್ರ ಮಾಲಿನ್ಯ ಇದಕ್ಕೆ ಕಾರಣವೇ ಎಂಬುದನ್ನು ಪರಿಶೀಲಿಸಲು ಮಂಗಳವಾರ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರ ಸೂಚನೆ ಮೇರೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅ ಧಿಕಾರಿ ಕೀರ್ತಿಕುಮಾರ್ ನೇತೃತ್ವದಲ್ಲಿ ಅಧಿ ಕಾರಿಗಳು ಸಮುದ್ರ ದಡದಿಂದ ನೀರು ಸಂಗ್ರಹಿಸಿ ಲ್ಯಾಬ್‌ಗ ಕಳಿಸಿದ್ದಾರೆ.
ಈ ರೀತಿ ಸಮುದ್ರದಲ್ಲಿ ಸಮುದ್ರ ನೀರಿನ ಬಣ್ಣ ಬದಲಾಗುವುದು ಮಾಲಿನ್ಯವೂ ಕೂಡ ಆಗಿರಬಹುದು. ಹಾವಸೆಯಂತಹ ವಸ್ತು ಮೀನು ಬಲೆಗೆ ಸಿಲುಕಿ ಸಮಸ್ಯೆಯಾಗುತ್ತದೆ. ಡಾಮರಿನಂತ ಗಟ್ಟಿ ವಸ್ತುಗಳೂ ಮೀನುಗಾರರಿಗೆ ಸಮಸ್ಯೆ ಉಂಟು ಮಾಡುತ್ತವೆ. ಈ ಬಗ್ಗೆ ಸೂಕ್ತ ಕ್ರಮ ಅಗತ್ಯ.
-ಗಂಗಾಧರ ಹೊಸಬೆಟ್ಟು, ಮೊಗವೀರ ಮಹಾಜನ ಸಂಘದ ಮಾಜಿ ಅಧ್ಯಕ್ಷ