Advertisement
ಬೇಕಾಗುವ ಸಾಮಗ್ರಿಚಿಕನ್ 1/2ಕೆ.ಜಿ., ಶುಂಠಿ-ಬೆಳ್ಳುಳ್ಳಿ ಪೇಸ್ಟ್ 3 ಚಮಚ, ಹಸಿ ಮೆಣಸು 8ರಿಂದ10, ಕೊತ್ತಂಬರಿ ಸೊಪ್ಪು 1 ಕಟ್ಟು, ಈರುಳ್ಳಿ 2, ಮೊಸರು 1 ಕಪ್,ಪುದೀನ 1ಕಟ್ಟು, ಗರಂ ಮಸಾಲ 2 ಚಮಚ, ಲಿಂಬೆ ಹಣ್ಣು 1, ಎಣ್ಣೆ 4 ಚಮಚ, ಕಾನ್‌ಫ್ಲೋರ್ 3 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ಮೊದಲು ಚಿಕನ್ ನೀರಿನಲ್ಲಿ ತೊಳೆದು ನಿಮಗೆ ಬೇಕಾದ ಸೈಜ್‌ಗೆ ಕಟ್ ಮಾಡಿಕೊಳ್ಳಿ. ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪುದೀನ ಸೊಪ್ಪು ಮತ್ತು ಸ್ವಲ್ಪ ನೀರು ಬೆರೆಸಿ ನುಣ್ಣಗೆ ರುಬ್ಬಿರಿ. ಒಂದು ಪಾತ್ರೆಗೆ ಕಟ್ ಮಾಡಿಟ್ಟ ಚಿಕನ್‌ಗೆ ರುಬ್ಬಿಟ್ಟ ಮಸಾಲೆಯನ್ನು ಹಾಕಿ, ನಂತರ ಗರಂ ಮಸಾಲೆ, ಕಾನ್‌ಫ್ಲೋರ್ ಹಾಕಿ ಮಿಕ್ಸ್ ಮಾಡಿ ತದನಂತರ ಲಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸುಮಾರು 15 ರಿಂದ 20 ನಿಮಿಷಗಳ ಕಾಲ ನೆನೆಸಿ ಇಡಿ.ಒಂದು ದಪ್ಪ ತಳದ ಪಾತ್ರೆ ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಹಸಿಮೆಣಸು, ಈರುಳ್ಳಿ ಹಾಕಿ ಕಂದು ಬಣ್ಣ ಬರುವ ತನಕ ಈರುಳ್ಳಿಯನ್ನು ಫ್ರೈ ಮಾಡಿ. ನಂತರ ಮಸಾಲೆ ಹಚ್ಚಿರುವ ಚಿಕನ್ ಚೂರುಗಳನ್ನು ಬೆರೆಸಿ ಕೆಂಪಗೆ ಹುರಿದುಕೊಳ್ಳಿ. ಸ್ವಲ್ಪ ನೀರು ಸೇರಿಸಿ ಬೇಯಿಸಿ ಕೊನೆಗೆ ಮೊಸರು ಬೆರೆಸಿ ಕಲೆಸಿ, ಉಪ್ಪು ಸೇರಿಸಿ ಕುದಿಸಿರಿ. ಚಿಕನ್ ಬೆಂದ ನಂತರ ಕೊತ್ತಂಬರಿ ಸೊಪ್ಪು ಹಾಕಿ. ಈಗ ಬಿಸಿ-ಬಿಸಿಯಾದ ಗ್ರೀನ್ ಚಿಲ್ಲಿ ಚಿಕನ್ ಗ್ರೇವಿ ಸವಿಯಲು ಸಿದ್ದ. ಚಪಾತಿ, ರೊಟಿ ಹಾಗೂ ಅನ್ನದ ಜೊತೆಗೂ ಈ ಗ್ರೇವಿ ಬಹಳ ರುಚಿಕರವಾಗುವುದು.