Advertisement

Green Card ನಿಯಮ ಸಡಿಲ: ಭಾರತೀಯರಿಗೆ ಸಂತಸ 

08:30 PM Jun 17, 2023 | Team Udayavani |

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಸ್ವಲ್ಪ ದಿನಗಳ ಮುನ್ನ ಗ್ರೀನ್‌ ಕಾರ್ಡ್‌ ಕುರಿತ ನಿಯಮಗಳನ್ನು ಜೋ ಬೈಡೆನ್‌ ಸರ್ಕಾರ ಸರಳಗೊಳಿಸಿದೆ. ಗ್ರೀನ್‌ ಕಾರ್ಡ್‌ಗೆ ಅರ್ಹತಾ ಮಾನದಂಡಗಳ ಕುರಿತು ನೀತಿ ನಿಯಮಗಳನ್ನು ಅಮೆರಿಕ ಸರ್ಕಾರ ಬಿಡುಗಡೆಗೊಳಿಸಿದೆ. ಇದರಿಂದಾಗಿ ಅನೇಕ ವರ್ಷಗಳಿಂದ ಗ್ರೀನ್‌ ಕಾರ್ಡ್‌ಗಾಗಿ ಕಾಯುತ್ತಿರುವ ಸಾವಿರಾರು ಭಾರತೀಯ ಟೆಕಿಗಳಿಗೆ ಉಪಯೋಗವಾಗಲಿದೆ ಎಂದು ಹೇಳಲಾಗಿದೆ. ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಗ್ರೀನ್‌ ಕಾರ್ಡ್‌ ಹೊಂದಿರುವುದು ಕಡ್ಡಾಯವಾಗಿದೆ.

Advertisement

ಉದ್ಯೋಗ ದೃಢೀಕರಣ ದಾಖಲೆ (ಇಎಡಿ)ಗಾಗಿ ಆರಂಭಿಕ ಮತ್ತು ನವೀಕರಣ ಅರ್ಜಿಗಳ ಅರ್ಹತೆಯ ಮಾನದಂಡಗಳ ಕುರಿತು ಅಮೆರಿಕ ಪೌರತ್ವ ಮತ್ತು ನಾಗರಿಕ ಸೇವೆಗಳು(ಯುಎಸ್‌ಸಿಐಎಸ್‌) ನಿಯಮಗಳನ್ನು ಬಿಡುಗಡೆಗೊಳಿಸಿದೆ. ಪ್ರತಿ ವರ್ಷ ಸುಮಾರು 1,40,000 ಉದ್ಯೋಗಿಗಳಿಗೆ ಗ್ರೀನ್‌ ಕಾರ್ಡ್‌ ನೀಡಲು ಅಮೆರಿಕ ವಲಸೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ವಾರ್ಷಿಕವಾಗಿ ಒಂದು ದೇಶದ ಉದ್ಯೋಗಿಗಳಿಗೆ ಶೇ.7ರಷ್ಟು ಗ್ರೀನ್‌ ಕಾರ್ಡ್‌ಗಳನ್ನು ಮಾತ್ರ ವಿತರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ಸಂದರ್ಭದಲ್ಲೇ ಈ ಘೋಷಣೆಯು ಅಲ್ಲಿ ನೆಲೆಸಿರುವ ಭಾರತೀಯರಿಗೆ ಸಂತಸವನ್ನುಂಟು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next