Advertisement
ಕೃಷಿ ಉತ್ಪನ್ನಗಳನ್ನು ಒಂದು ಕಡೆಯಿಂದ ಮತ್ತೂಂದೆಡೆಗೆ ಸಾಗಿಸಲು ರೈಲ್ವೇಯು ಕಿಸಾನ್ ರೈಲು ಸೇವೆಯನ್ನು ಆರಂಭಿಸಿದೆ. ಅದೇ ಮಾದರಿಯಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಹಣ್ಣು, ತರಕಾರಿ ಸರಬರಾಜು ಮಾಡಲು ಹಸುರು ಬಸ್ ಆರಂಭಿಸಿ ಹಂತಹಂತವಾಗಿ ರಾಜ್ಯ ವ್ಯಾಪಿಯಾಗಿ ವಿಸ್ತರಿಸುವ ಯೋಜನೆ ಕೆಎಸ್ಸಾರ್ಟಿಸಿಯದು.
ಕೆಎಸ್ಸಾರ್ಟಿಸಿ ಬಳಿ 8,738 ಬಸ್‌ಗಳಿದ್ದು, 10 ವರ್ಷ ಮೇಲ್ಪಟ್ಟ 565 ಬಸ್‌ಗಳಿವೆ. ಬೆಂಗಳೂರು ಕೇಂದ್ರೀಯ ವಿಭಾಗದಲ್ಲಿ 11, ತುಮಕೂರಿನಲ್ಲಿ 57, ಕೋಲಾರ- 18, ಚಿಕ್ಕಬಳ್ಳಾಪುರ= 32, ಮೈಸೂರು ನಗರ ಸಾರಿಗೆ- 188, ಮೈಸೂರು ಗ್ರಾಮಾಂತರ- 76, ಮಂಡ್ಯ- 36, ಚಾಮರಾಜನಗರ -33, ಹಾಸನ- 312, ಮಂಗಳೂರು- 44, ಪುತ್ತೂರು- 20, ದಾವಣಗೆರೆ -2, ಶಿವಮೊಗ್ಗ- 13, ಚಿತ್ರದುರ್ಗದಲ್ಲಿ 4 ಬಸ್‌ಗಳಿವೆ.
Related Articles
ಲಾಕ್‌ಡೌನ್, ಸಿಬಂದಿ ಮುಷ್ಕರ ಸಹಿತ ಹಲವು ಕಾರಣಗಳಿಂದ ಕೆಎಸ್ಸಾರ್ಟಿಸಿಯ ಆದಾಯಕ್ಕೆ ಪೆಟ್ಟು ಬಿದ್ದಿದ್ದು, ಅದನ್ನು ಸರಿ ದೂಗಿಸುವ ನಿಟ್ಟಿನಲ್ಲಿ ಒಂದೊಂದೇ ವಿನೂತನ ಹೆಜ್ಜೆಗಳನ್ನು ಇಡುತ್ತಿದೆ. ಈಗಾಗಲೇ ಹಳೆಯ ಬಸ್‌ಗಳನ್ನು ಉಪಯೋಗಿಸಿಕೊಂಡು ಆಮ್ಲ ಜನಕ ಬಸ್, ಸಂಚಾರಿ ಶೌಚಾಲಯ, ಸಂಚಾರಿ ಗ್ರಂಥಾಲಯ ಸಹಿತ ವಿನೂತನ ಯೋಜನೆ ಗಳನ್ನು ಪರಿಚಯಿಸಿದೆ.
Advertisement
ಒಂದು ಕಡೆಯಿಂದ ಮತ್ತೂಂದು ಕಡೆಗೆ ತರಕಾರಿ ಒಯ್ಯುವುದಕ್ಕಾಗಿ ಈಗಾಗಲೇ ಕಿಸಾನ್ ರೈಲು ಸೇವೆ ಇದ್ದು, ಅದೇ ರೀತಿ ಹಸುರು ಬಸ್ ಪರಿಚಯಿಸಲು ಮುಂದಾಗಿದ್ದೇವೆ. ಸದ್ಯದಲ್ಲೇ ಈ ಯೋಜನೆಯನ್ನು ಆರಂಭಿಸಲಾಗುವುದು.– ಶಿವಯೋಗಿ ಕಳಸದ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ