Advertisement

ಪರಿಸರ ಇಲಾಖೆ ಅನುಮತಿ ಪ್ರಶ್ನಿಸಿ ಹಸಿರು ಮಂಡಳಿ ಮೊರೆ: ಗೋವಾ ಸಿಎಂ

09:49 AM Oct 25, 2019 | Team Udayavani |

ಪಣಜಿ: ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ಕಳಸಾ-ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿರುವುದಕ್ಕೆ ಗೋವಾ ಸರ್ಕಾರ ತಕರಾರು ತೆಗೆದಿದೆ.

Advertisement

ಈ ಕುರಿತು ಪ್ರತಿಕ್ರಿಯಿಸಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ನಮ್ಮ ವಿಚಾರಣೆ(ಅಹವಾಲು) ಆಲಿಸದೇ ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಅನುಮತಿ ನೀಡಿದ್ದರೆ ಇದನ್ನು ಪ್ರಶ್ನಿಸಿ ರಾಷ್ಟ್ರೀಯ ಹಸಿರು ಮಂಡಳಿಯಲ್ಲಿ (ಎನ್‌ಜಿಟಿ) ಅರ್ಜಿ ಸಲ್ಲಿಸುತ್ತೇವೆ. ಮಹದಾಯಿ ನಮಗೆ ತಾಯಿಗಿಂತಲೂ ಮಿಗಿಲಾಗಿದೆ.

ಮಹದಾಯಿ ರಕ್ಷಣೆಗಾಗಿ ನಾವು ಯಾವುದೇ ಬೆಲೆಯನ್ನು ತೆರಲು ಸಿದ್ಧರಿದ್ದೇವೆ. ಗೋವಾ ಜನರ ಹಿತಾಸಕ್ತಿ ಕಾಪಾಡುತ್ತೇವೆ. ಇದಕ್ಕಾಗಿ ಎಲ್ಲದ್ದಕ್ಕೂ ತಯಾರಿಗಿದ್ದೇವೆ ಎಂದು ತಿಳಿಸಿದ್ದಾರೆ.

ಗೋವಾ ಬಿಜೆಪಿ ಪಾರ್ಟಿ ಅಧ್ಯಕ್ಷ ವಿಜಯ್‌ ಸರ್ದೇಸಾಯಿ ಮಾತನಾಡಿ, ಕೇಂದ್ರ ಪರಿಸರ ಇಲಾಖೆಯ ಈ ಬೆಳವಣಿಗೆ ಮಹದಾಯಿ ನದಿಯನ್ನು ಕೊಲ್ಲುವ ನಡೆಯಾಗಿದೆ. ಇದು ಕುಡಿಯುವ ನೀರಿನ ಯೋಜನೆಯಲ್ಲ, ಮಹದಾಯಿಯನ್ನು ಕೊಲ್ಲುವ ಯೋಜನೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಗೋವಾ ನಿಯೋಗ ದೆಹಲಿಗೆ:
ಕಳಸಾ-ಬಂಡೂರಿ ಯೋಜನೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಗೋವಾ ನಿಯೋಗ ದೆಹಲಿಗೆ ತೆರಳಿದ್ದು, ಕೇಂದ್ರ ಪರಿಸರ ಇಲಾಖೆ ಮಾತುಕತೆ ನಡೆಸುವುದಾಗಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next