Advertisement

ಮಲೇಶ್ಯನ್‌ ವಿಮಾನ: 3 ವರ್ಷಗಳ ವಿಫ‌ಲ ಶೋಧ ಕಾರ್ಯಾಚರಣೆ ಅಂತ್ಯ

07:54 PM Jan 17, 2017 | udayavani editorial |

ಸಿಡ್ನಿ : 2014ರ ಮಾರ್ಚ್‌ 8ರಂದು ಕೌಲಾಲಂಪುರದಿಂದ ಬೀಜಿಂಗ್‌ಗೆ ಹೋಗುತ್ತಿದ್ದ  ವೇಳೆ ಹಿಂದೂ ಮಹಾಸಾಗರದಲ್ಲಿ 239 ಜನರ ಸಾವಿಗೆ ಕಾರಣವಾಗಿ ಪತನಗೊಂಡಿದ್ದ ಮಲೇಶ್ಯನ್‌ ಏರ್‌ಲೈನ್ಸ್‌ ವಿಮಾನ ಎಂಎಚ್‌ 370 ಇದರ ವ್ಯರ್ಥ ಹಾಗೂ ವಿಫ‌ಲ ಶೋಧ ಕಾರ್ಯವನ್ನು ಸರಿಸುಮಾರು ಮೂರು ವರ್ಷಗಳ ಬಳಿಕ ಇದೀಗ ಕೊನೆಗೊಳಿಸಲಾಗಿದೆ.

Advertisement

ಮಲೇಶ್ಯ ಏರ್‌ಲೈನ್ಸ್‌ ಈ ನತದೃಷ್ಟ ಬೋಯಿಂಗ್‌ 777 ವಿಮಾನದ ಶೋಧ ಕಾರ್ಯಾಚರಣೆಗಾಗಿ 16 ಕೋಟಿ ಡಾಲರ್‌ ನೆರವು ನೀಡಿದ್ದ ಆಸ್ಟ್ರೇಲಿಯದ ಜಂಟಿ ಸಹಕಾರ ಕೇಂದ್ರ ಸಂಸ್ಥೆಯು, ವಿಮಾನದ ಶೋಧ ಕಾರ್ಯಾಚರಣೆಯನ್ನು ಕೊನೆಗೊಳಿಸಿರುವ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ. 

ಹಿಂದೂ ಮಹಾಸಾಗರದ ಆಳ ಸಮುದ್ರದಲ್ಲಿ ಹಾಗೂ ಪಶ್ಚಿಮ ಆಸ್ಟ್ರೇಲಿಯದ ದುರ್ಗಮ ಸಾಗರ ತಳದಲ್ಲಿನ ಸುಮಾರು 12,000 ಚದರ ಕಿ.ಮೀ. ಸಾಗರ ವಲಯದಲ್ಲಿ ಮಲೇಶ್ಯನ್‌ ವಿಮಾನಕ್ಕಾಗಿ ಕಳೆದ ಮೂರು ವರ್ಷಗಳಿಂದ ಹರಸಾಹಸ ನಡೆಸಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ ನಾಪತ್ತೆಯಾಗಿದ್ದ ವಿಮಾನದ ಯಾವುದೇ ಕುರುಹು ಕೂಡ ಈ ಶೋಧ ಕಾರ್ಯಾಚರಣೆಯಲ್ಲಿ ಸಿಕ್ಕಿಲ್ಲದಿರುವುದು ಅತ್ಯಂತ ನಿಗೂಢವಾಗಿದೆ. 

ವಿಫ‌ಲ ಹಾಗೂ ವ್ಯರ್ಥ ಶೋಧ ಕಾರ್ಯವನ್ನು ಕೊನೆಗೊಳಿಸಿರುವ ಬಗ್ಗೆ ಮಲೇಶ್ಯ, ಆಸ್ಟ್ರೇಲಿಯ ಮತ್ತು ಚೀನದ ಸಾರಿಗೆ ಸಚಿವರು ಜಂಟಿ ಹೇಳಿಕೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next