Advertisement

ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅದ್ಯತೆ

09:59 AM Jun 23, 2019 | Team Udayavani |

ಚಿಕ್ಕೋಡಿ: ಎರಡನೆ ಬಾರಿಗೆ ಬಿಜೆಪಿ ಅಭೂತ್ವಪೂರ್ವ ಗೆಲುವು ಸಾಧಿಸಿದ್ದು ಇದು ಬಿಜೆಪಿ ಗೆಲುವಲ್ಲ ಇದು ಭಾರತದ ಗೆಲುವು ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿದರು.

Advertisement

ಇಲ್ಲಿನ ಕೇಶವ ಕಲಾ ಭವನದಲ್ಲಿ ನೂತನವಾಗಿ ಆಯ್ಕೆಯಾದ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಕೇಂದ್ರ ಸಚಿವ ಸುರೇಶ ಅಂಗಡಿ ಅವರಿಗೆ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಜಗತ್ತಿನ ಅತ್ಯಂತ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಇದು ಯಾರ ಅಪ್ಪಮಕ್ಕಳ ಪಕ್ಷವಾಗದೇ ಇಡೀ ದೇಶದ ಕಾರ್ಯಕರ್ತರ ಪಕ್ಷವಾಗಿ ಬೆಳೆದು ನಿಂತಿದೆ. ಮಳೆ ಬಿಸಿಲು ಎನ್ನದೇ ಮತಚಲಾಯಿಸಿದ ಯುವಕರ ಪಾತ್ರ ಮಹತ್ವ ಪಡೆದುಕೊಂಡಿದ್ದು, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅದ್ಯತೆ ನೀಡಲಾಗುವುದು ಎಂದರು.

ರಾಜ್ಯದ ಹಾಗೂ ಜಿಲ್ಲೆಯ ರೈಲು ಯೋಜನೆಗಳ ಬಗ್ಗೆ ಮನವಿ ಇದ್ದರೇ ಅದನ್ನು ಸ್ಥಳೀಯ ಶಾಸಕರಿಗೆ ಸಲ್ಲಿಸಬೇಕು. ಸಂಸತ್ತಿನ ಅಧೀವೇಶನದಲ್ಲಿ ರೈಲು ಯೋಜನೆಗಳ ಬಗ್ಗೆ ಚರ್ಚೆ ನಡೆಸಿ ಯೋಜನೆ ಕಾರ್ಯಗತವಾಗಲು ಪ್ರಯತ್ನ ಮಾಡುತ್ತೇನೆ. ಇನ್ನು ಇಲಾಖೆಯಲ್ಲಿ ಮೊದಲ ಸುರಕ್ಷೆತೆಗೆ ಆದ್ಯತೆ ನೀಡಲಾಗುತ್ತದೆ. ರೈಲ್ವೆ ಇಲಾಖೆಯಲ್ಲಿ ಕನ್ನಡದ ಯುವಕರು ಹೆಚ್ಚಿನ ಉದ್ಯೋಗ ಪಡೆದುಕೊಂಡರೆ ಅಭಿವೃದ್ಧಿಗೆ ಹೆಚ್ಚಿನ ಮನ್ನಣೆ ದೊರೆಯುತ್ತದೆ ಎಂದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಬಿಜೆಪಿ ಗೆಲುವಿಗೆ ಪ್ರಧಾನಿ ಮೋದಿ ಕಾರಣಿಕರ್ತರಾಗಿದ್ದು, ಮೋದಿ ಸರ್ಕಾರದಲ್ಲಿ ನಾನು ಸಂಸದನಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಗಡಿ ಭಾಗದ ಅಭಿವೃದ್ಧಿಗೆ ಸದಾ ಪ್ರಯತ್ನ ಮಾಡುತ್ತೇನೆ ಎಂದರು.

Advertisement

ಮಾಜಿ ಶಾಸಕ ರಾಜು ಕಾಗೆ ಮಾತನಾಡಿ, ಗಡಿ ಭಾಗಕ್ಕೆ ಭೇಟಿ ನೀಡಿದ ಸಚಿವ ಡಿ.ಕೆ ಶಿವಕುಮಾರ ಪ್ರಚಾರ ಗಿಟ್ಟಿಸಿಕೊಳ್ಳಲು ನೀರಿನ ರಾಜಕಾರಣ ಮಾಡುತ್ತಿದ್ದು, ಕೃಷ್ಣಾ ನದಿಗೆ ನೀರು ಹರಿಸಿರುವ ವಿಷಯದಲ್ಲಿ ಮಹಾರಾಷ್ಟ್ರದಿಂದ ನಾನೇ ನೀರು ಹರಿಸಿರುವದಾಗಿ ಹೇಳುತ್ತಿರುವ ಹೇಳಿಕೆ ಸರಿಯಲ್ಲ, ಬಿಜೆಪಿ ಯಾವತ್ತು ಪ್ರಚಾರಕ್ಕಾಗಿ ನೀರಿನ ವಿಷಯದಲ್ಲಿ ರಾಜಕಾರಣ ಮಾಡಿಲ್ಲ ಎಂದರು.

ಇದೇ ವೇಳೆ ಪ್ರಭಾರಿಯಾಗಿ ಆಗಮಿಸಿದ ಮಹೇಶ ಟೆಂಗಿನಕಾಯಿ, ಈರಣ್ಣ ಕಡಾಡಿ ಅವರನ್ನು ಸನ್ಮಾನಿಸಿದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಠ, ವಿಧಾನ ಪರಿಷತ್‌ ಸದಸ್ಯ ಹಣಂಮಂತ ನೀರಾಣಿ, ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಶಾಸಕ ಸಂಜಯ ಪಾಟೀಲ, ರಾಯವಾಗ ಶಾಸಕ ದುರ್ಯೋಧನ ಐಹೊಳೆ, ಕುಡಚಿ ಶಾಸಕ ಪಿ ರಾಜೀವ್‌, ಡಿ.ಜೆ. ಗುಂಡೆ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶಶಿಕಾಂತ ನಾಯಿಕ,ಮಹೇಶ ಭಾತೆ, ದುಂಡಪ್ಪ ಬೆಂಡವಾಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next