Advertisement

ಕುಟ್ಟದಿಂದ ಮಡಿಕೇರಿಗೆ ಬೃಹತ್‌ ವಾಹನ ಜಾಥಾ

01:42 AM Apr 14, 2019 | sudhir |

ಮಡಿಕೇರಿ :ಕೃಷಿಕ ಸಮೂಹದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದಿಂದ ಕೊಡಗಿನ ಗಡಿ ಕುಟ್ಟದಿಂದ ಜಿಲ್ಲಾ ಕೇಂದ್ರ ಮಡಿಕೆೇರಿಯವರೆಗೆ ಬೃಹತ್‌ ವಾಹನ ಜಾಥ ನಡೆಯಿತು.

Advertisement

ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯ ಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಶುಕ್ರವಾರ ಬೆಳಗ್ಗೆ ಕುಟ್ಟ ಬಸ್‌ ನಿಲ್ದಾಣದಲ್ಲಿ ರೈತ ಸಂಘದ ನೂರಾರು ಸದಸ್ಯರು ‘ಮಾನವ ಸರಪಳಿ’ ನಿರ್ಮಿಸಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗೆಹರಿಕೆಗೆ ಸರ್ಕಾರವನ್ನು ಆಗ್ರಹಿಸಿದರು.
ಕುಟ್ಟದ ಪ್ರಗತಿಪರ ಕೃಷಿಕ ಮಾಚಿಮಾಡ ಸಿ.ಸುಬ್ಬಯ ಅ‌ವರು ಹಸಿರು ನಿಶಾನೆ ತೋರಿಸುವ ಮೂಲಕ ವಾಹನ ಜಾಥಾಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಕರ್ನಾಟಕ ರಾಜ್ಯ ಕೃಷಿ ವಿಶ್ವದ್ಯಾನಿಲಯದ ಮಾಜಿ ಸೆನೆಟ್‌ ಸದಸ್ಯರು, ಪ್ರಗತಿಪರ ರೈತರಾದ ಪುಚ್ಚಿಮಾಡ ಲಾಲಾ ಪೂಣಚ್ಚ ಮಾತನಾಡಿ, ರೈತರ ಪರವಾಗಿ ಯಾರೂ ಧ್ವನಿ ಎತ್ತುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತ ಸಂಘವು ಕೃಷಿಕ ಸಮೂಹದ ಮೂಲಭೂತ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟಗಳನ್ನು ನಡೆಸುತ್ತಿದೆ.

ಜಿಲ್ಲೆಯ ರೈತರು ರೈತ ಸಂಘದೊಂದಿಗೆ ಕೈಜೋಡಿಸುವ ಮೂಲಕ ತಮಗೆ ದೊರಕಬೇಕಾದ ಸೌಲಭ್ಯಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳಲು ಮುಂದಾಗಬೇಕೆಂದರು.

ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತರಾದ ಮಾಜಿ ಯೋಧ ಸೋಮೆಯಂಗಡ ಗಣೇಶ್‌ ಮಾತನಾಡಿ, ರೈತರು ಬೆಳೆದ ಕೃಷಿಯುತ್ಪನ್ನಗಳಿಗೆ ಬೆಂಬಲ ಬೆಲೆ ದೊರೆ ಯುತ್ತಿಲ್ಲ. ಸಾಲ ಮನ್ನಾ ವಿಚಾರದಲ್ಲಿ ಸರಕಾರ ರೈತರಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ.

Advertisement

ರೈತರ ಹೋರಾಟವನ್ನು ಪರಿಗಣಿಸಿ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ಕುಟ್ಟ ಭಾಗದ ಎಸ್‌ಎಸ್‌ಎನ್‌ನ‌ ಅಧ್ಯಕ್ಷರಾದ ಮಚ್ಚಮಾಡ ಸುಬ್ರಮಣಿ ಮಾತನಾಡಿ, ರಾಜಕೀಯ ರತವಾಗಿ ರೈತ ಸಂಘ ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ವ್ಯಾಪ್ತಿ ಬೆಂಬಲ ವ್ಯಕ್ತವಾಗುತ್ತಿದೆ.

ಈ ನಿಟ್ಟಿನಲ್ಲಿ ಕೊಡಗಿನ ರೈತರು ರೈತ ಸಂಘ ದೊಂದಿಗೆ ಕೈ ಜೋಡಿಸಿ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸೋಣವೆಂದು ಅವರು ಕರೆ ನೀಡಿದರು.

ರೈತರ ಬೇಡಿಕೆಗಳ ಚಾರದಲ್ಲಿ ಪ್ರಾಸ್ತಾಕವಾಗಿ ತಿತಿಮತಿಯ ರೈತ ಮುಖಂಡರಾದ ಚೆಪ್ಪುಡೀರ ಕಾರ್ಯಪ್ಪ ಅವರು ಮಾತನಾಡಿದರು.
ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಪ್ರಸ್ತುತ ಲೋಕಸಭೆ ಚುನಾವಣೆ ನಡೆಯು ತ್ತಿರುವುದರಿಂದ ರೈತರ ಸಮಸ್ಯೆಗಳನ್ನು ಅಭ್ಯರ್ಥಿಗಳಾಗಿ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ಗಮನ ಹರಿಸಿ ರೈತರ ಸಂಕಷ್ಟ ನಿವಾರಣೆಯಲ್ಲಿ ಕೈ ಜೋಡಿಸಬೇಕೆಂದು ಒತಾಯಿಸಿದರು.

ಜಾಥವು ಶ್ರೀಮಂಗಲ, ಹುದಿಕೇರಿ, ಪೊನ್ನಂಪೇಟೆ, ಗೋಣಿಕೊಪ್ಪ , ವಿರಾಜ ಪೇಟೆ, ಮೂರ್ನಾಡು ಮಾರ್ಗವಾಗಿ ಜಿಲ್ಲಾಧಿ ಕಾರಿಗಳ ಕಚೆೇರಿಗೆ ಆಗಮಿಸಿತು.
ಕೆಲ ಕಾಲ ರೈತ ಮುಖಂಡರು ಮತ್ತು ಸದಸ್ಯರು ಧರಣಿ ಮುಷ್ಕರ ನಡೆಸಿದರು.
ರೈತ ಮುಖಂಡರುಗಳಾದ ಚೆಟ್ರಾ ಮಾಡ ಸುಜಯ್‌ ಬೋಪಯ್ಯ, ಪುಚ್ಚಿಮಾಡ ಶುಭಾಷ್‌ ಸುಬ್ಬಯ್ಯ, ಮಂಡೇಪಂಡ ಪ್ರàವಿಣ್‌, ಅಜ್ಜಮಾಡ ಚಂಗಪ್ಪ, ದೇವಣಿರ ಸಿ.ಬೋಪಣ್ಣ, ಸಬಿತ ಭೀಮಯ್ಯ, ಕುಕ್ಕನೂರು ಎ.ಸೋಮಣ್ಣ, ಪೀಟರ್‌ ಜಾನ್‌, ಐಚೆಟ್ಟಿರ ಸುಬ್ಬಯ್ಯ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next