Advertisement

ಸಂಡೇ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ; ನಿರ್ಬಂಧವಿದ್ದರೂ ರಸ್ತೆಗೆ ಬಂದವರಿಗೆ ಪೋಲಿಸರಿಂದ ದಂಡ

11:07 AM Jul 27, 2020 | Team Udayavani |

ಚಿತ್ರದುರ್ಗ: ಕೋವಿಡ್‌ ನಿಯಂತ್ರಿಸುವ ಉದ್ದೇಶಕ್ಕೆ ಜಾರಿ ಮಾಡುತ್ತಿರುವ ಭಾನುವಾರದ ಲಾಕ್‌ಡೌನ್‌ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಲ್ಲಿ ಇಲ್ಲಿ ಕೆಲವರು ಮೈಮರೆತು ಬೀದಿಗೆ ಬರುತ್ತಿದ್ದರು. ಅಂಥವರನ್ನು ಪೊಲೀಸರು ಹಿಡಿದು ದಂಡ ಹಾಕಿದರು. ನಾಲ್ಕನೇ ವಾರದ ಲಾಕ್‌ಡೌನ್‌ ವೇಳೆ ರಸ್ತೆಗಳಲ್ಲಿ ಪೊಲೀಸರು ಹೆಚ್ಚು ಕ್ರಿಯಾಶೀಲರಾಗಿ ಓಡಾಡುತ್ತಿದ್ದರು. ಖುದ್ದು ಡಿವೈಎಸ್‌ಪಿ ಪಾಂಡುರಂಗಪ್ಪ ಅವರೇ ಬೀದಿ ಬೀದಿಗಳಲ್ಲಿ ಓಡಾಡುತ್ತಾ ಮೈಕ್‌ ಹಿಡಿದು ಜನರಿಗೆ ಎಚ್ಚರಿಕೆ ಕೊಡುತ್ತಾ ಸಾಗಿದರು.

Advertisement

ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿರುವ ಬಡಾವಣೆ ಠಾಣೆ, ಗ್ರಾಮಾಂತರ ಠಾಣೆ, ಕೋಟೆ ಠಾಣೆ, ಸಂಚಾರಿ ಠಾಣೆ ಹಾಗೂ ನಗರ ಪೊಲೀಸ್‌ ಠಾಣೆ ಪೊಲೀಸರು ಚಳ್ಳಕೆರೆ ಗೇಟ್‌, ಹೊಳಲ್ಕೆರೆ ರಸ್ತೆ ಸೇರಿದಂತೆ ಹಲವೆಡೆ ಚೆಕ್‌ಪೋಸ್ಟ್‌ ನಿರ್ಮಿಸಿ ಸಂಚಾರ ನಿರ್ಬಂಧಿಸಿದ್ದರು. ಹದ್ದು ಮೀರಿ ಬಂದವರನ್ನು ತಡೆದು ದಂಡ ವಿ ಧಿಸಿದರು. ರಸ್ತೆಗೆ ಬರುತ್ತಿದ್ದ ಬಹುತೇಕರು ಆಸ್ಪತ್ರೆಗೆ ತೆರಳಬೇಕು, ಔಷಧ ತರಬೇಕು ಎಂಬ ಕಾರಣಗಳನ್ನಿಟ್ಟುಕೊಂಡು ರಸ್ತೆಗೆ ಬರುತ್ತಿದ್ದರು. ಪೊಲೀಸರಿಗೆ ಅವರು ಹೇಳುವ ಕಾರಣ ಸರಿಯಾಗಿದೆಯೋ ಇಲ್ಲವೋ ಎಂಬ ಗೊಂದಲವುಂಟಾಗಿ ಬಿಟ್ಟು ಕಳುಹಿಸುತ್ತಿದ್ದರು.

ನಗರದ ಹೊರಗೆ ಸಂಚರಿಸಲು ಯಾವುದೇ ವಾಹನಗಳಿರಲಿಲ್ಲ. ಮಾರುಕಟ್ಟೆ, ಬಸ್‌ ನಿಲ್ದಾಣ, ಅಂಗಡಿ, ಮಾರುಕಟ್ಟೆ ಮಳಿಗೆಗಳು ಬಂದ್‌ ಆಗಿದ್ದವು. ನಗರದ ಎಲ್ಲಾ ಪ್ರಮುಖ ರಸ್ತೆಗಳ ಚೆಕ್‌ಪೋಸ್ಟ್‌ಗಳಲ್ಲೂ ಪೊಲೀಸರಿದ್ದು ಜನ ಬೀದಿಗೆ ಬರದಂತೆ, ವಾಹನಗಳು ಸಂಚರಿಸದಂತೆ ನೋಡಿಕೊಂಡರು. ನಗರದ ಎಲ್ಲ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳ ರಸ್ತೆಗಳು ಕೂಡಾ ಖಾಲಿಯಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next