Advertisement
ಹಣ್ಣಿನ ಬೆಳೆಗಳಿಗೆ ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಅದರ ಶೇಷಾಂಶ ಹಣ್ಣುಗಳಲ್ಲಿ ಉಳಿಯುತ್ತದೆ. ಇಂಥ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಈ ವಿಷಯ ಮನಗಂಡಿರುವ ಗ್ರಾಹಕರು ಸಾವಯವ ಹಣ್ಣುಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ನಗರ, ಮಹಾನಗರಗಳಲ್ಲಿ ಸಾವಯವ ಹಣ್ಣುಗಳಿಗೆ ಪ್ರತ್ಯೇಕ ಮಾರುಕಟ್ಟೆಯೇ ಸೃಷ್ಟಿಯಾಗಿದೆ. ವಿದೇಶಗಳಲ್ಲಿ ಭಾರತದ ಸಾವಯವ ಹಣ್ಣುಗಳಿಗೆ ಬಹುಬೇಡಿಕೆ ಇದೆ. ಇಂಥ ಅವಕಾಶಗಳನ್ನು ಬೆಳೆಗಾರರು ಸದುಪಯೋಗಪಡಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಣ್ಣುಗಳ ರಾಜ ಎನ್ನಿಸಿಕೊಂಡಿರುವ ಮಾವು ಬೆಳೆಯನ್ನು ರಾಸಾಯನಿಕ ಕೀಟನಾಶಕ ಮುಕ್ತವಾಗಿ ಬೆಳೆಯುವುದು ಎಲ್ಲ ದೃಷ್ಟಿಯಿಂದಲೂ ಸಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ.
Related Articles
Advertisement
ಮೋಹಕ ಬಲೆಗಳ ವಿಶಿಷ್ಟತೆ ಇವುಗಳ ಒಳಗೆ ಇರುವ ಲ್ಯೂರ್‌ಗಳು ಲಿಂಗಾಕರ್ಷಕ ವಾಸನೆಯನ್ನು ಪರಿಸರದಲ್ಲಿ ಹರಡುತ್ತವೆ. ಇದರಿಂದ ಹೂಜಿನೊಣಗಳು ಇವುಗಳತ್ತ ಆಕರ್ಷಿತವಾಗುತ್ತವೆ. ಈ ಮೋಹಕ ಬಲೆಗಳನ್ನು ಬಳಸುವುದರಿಂದ ಮಾವಿನ ಬೆಳೆಗಾಗಲಿ, ಪರಿಸರಕ್ಕಾಗಲಿ ಯಾವುದೇ ಹಾನಿಯಾಗುವುದಿಲ್ಲ. ಇವುಗಳನ್ನು ಬಳಸುವುದರಿಂದ ಸಾವಯವ/ಜೈವಿಕ ಪದ್ಧತಿಯಲ್ಲಿ ಮಾವು ಬೆಳೆಯಲು ಸಹಾಯಕವಾಗುತ್ತದೆ.
ಮಾವಿನ ಕಾಯಿಗಳು ಗೋಲಿಗಾತ್ರದಲ್ಲಿದ್ದಾಗಲೇ ಒಂದು ಎಕರೆಗೆ ಎಂಟು ಮೋಹಕ ಬಲೆಗಳನ್ನು ಕಟ್ಟಬೇಕು. ಒಂದುವೇಳೆ ಆ ಪರಿಸರದಲ್ಲಿ ಬಾಧೆ ನೀಡುವ ಹೂಜಿನೊಣಗಳ ಸಂಖ್ಯೆ ಹೆಚ್ಚಿದ್ದರೆ ಅವುಗಳು ನಿಯಂತ್ರಿತವಾಗುತ್ತವೆ. ಮಾವು ಕೊಯಾಗುವವರೆಗೂ ಈ ಬಲೆಗಳನ್ನು ತೋಟದಲ್ಲಿ ಕಟ್ಟಿರಬೇಕು. ಒಮ್ಮೆ ಬಲೆ ಕಟ್ಟಿದರೆ ಅವುಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಆದರೆ, ಅವುಗಳ ಒಳಗಿರುವ ಲಿಂಗಾಕರ್ಷಕ ಕೇಕ್‌ಗಳನ್ನು ನಿರ್ದಿಷ್ಟ ದಿನಗಳಿಗೊಮ್ಮೆ ಬದಲಾಯಿಸಿದರೆ ಸಾಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.ಮಾಹಿತಿಗೆ -99008 00033
– ಕುಮಾರ ರೈತ