ರಾಣಿಬೆನ್ನೂರ: ಅರಿವಿನ ಗರ್ಭದಲ್ಲಿ ತನ್ನ ಮಕ್ಕಳನ್ನು ಇಟ್ಟುಕೊಂಡು ಮಕ್ಕಳಿಗಾಗಿ ತನ್ನ ಜೀವನವನ್ನೇ ಮುಡುಪಾಗಿಡುವ ತಾಯಿ ಜಗತ್ತಿನಲ್ಲಿ ಶ್ರೇಷ್ಠ ಸ್ಥಾನ ಹೊಂದಿದ್ದಾಳೆ ಎಂದು ಚಿತ್ರಕಲಾ ಶಿಕ್ಷಕ ಡಾ|ಜಿ.ಜೆ. ಮೆಹೆಂದಳೆ ಹೇಳಿದರು.
ಇಂದಿನ ಯುವಕ ಯುವತಿಯರು ಜನ್ಮ ನೀಡಿದ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿರುವುದು ಹೆಚ್ಚಾಗಿದೆ. ಇದು ಬಹಳ ಕಳವಳಕಾರಿ ಸಂಗತಿ. ಜೀವನದಲ್ಲಿ ಮಾನವೀಯ ಮೌಲ್ಯವನ್ನು ಅಳವಡಿಸಿಕೊಂಡು ವಯಸ್ಸಾದ ತಂದೆ-ತಾಯಿಗಳನ್ನು ವೃದ್ಧಾಶ್ರಮಗಳಿಗೆ ಸೇರಿಸದೆ ತಾವೇ ಜೋಪಾನ ಮಾಡಿದರೆ ಜೀವನ ಸಾರ್ಥವಾಗುತ್ತದೆ ಎಂದರು.
ಸಿ.ಡಿ. ನಡುವಿನಮನಿ, ವೆಂಕಟೇಶ್, ಗುಡಿಸಲು ವಾಸಿಗಳಾದ ಲಕ್ಷ ್ಮವ್ವ, ನಾಗಮ್ಮ, ನಾರಾಯಣಪ್ಪ, ಶಿವರಾಜ್, ರಾವಳಸ್ವಾಮಿ ಇದ್ದರು.
Advertisement
ರವಿವಾರ ತಾಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ವಾಸಿಸುವ ಗುಡಿಸಲು ವಾಸಿಗಳ ಸಮ್ಮುಖದಲ್ಲಿ ವಿಶ್ವ ಅಮ್ಮಂದಿರ ದಿನದ ಅಂಗವಾಗಿ ಕೊಲಾಜ ಚಿತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಗುಡಿಸಲಿನಲ್ಲಿ ವಾಸ ಮಾಡಿದರೂ ಮಕ್ಕಳಿಗೆ ಚಳಿ, ಮಳೆ, ಗಾಳಿ, ಇನ್ನಾವುದೇ ತೊಂದರೆ ಆಗದಂತೆ ತನ್ನ ಅಕ್ಕರೆಯ ಮಡಿಲಿನಲ್ಲಿ ಜೋಪಾನ ಮಾಡುವ ತಾಯಂದಿರ ಋಣವನ್ನು ತೀರಿಸುವುದು ಅಸಾಧ್ಯ ಎಂದರು.