Advertisement
ಅತ್ಯುತ್ತಮ ಕೆಲಸ ನಿರ್ವಹಿಸಿ, ಪುರಸ್ಕಾರ ಪಡೆದುಕೊಂಡವರ ವಿವರ ಹೀಗಿದೆ.
Related Articles
Advertisement
ಹಿರಿಯಡ್ಕ ಶ್ರೀ ವೀರಭದ್ರ ದೇವಸ್ಥಾನದ ಬಳಿ ನಡೆದ ಕಿಶನ್ ಹೆಗ್ಡೆ ಕೊಲೆ ಪ್ರಕರಣದ 9 ಆರೋಪಿಗಳನ್ನು ಶೀಘ್ರ ಬಂಧಿಸಿದ ಸಿಪಿಐಗಳಾದ ಬ್ರಹ್ಮಾವರದ ಅನಂತಪದ್ಮನಾಭ, ಆಗಿನ ಕಾಪು ಸಿಪಿಐ ಮಹೇಶ್ ಪ್ರಸಾದ್, ಉಡುಪಿಯ ಮಂಜುನಾಥ, ಡಿಸಿಐಬಿಯ ಮಂಜಪ್ಪ ಡಿ.ಆರ್., ಮಣಿಪಾಲದ ಮಂಜುನಾಥ, ಆಗಿನ ಬ್ರಹ್ಮಾವರ ಠಾಣೆಯ ಪಿಎಸ್‌ಐ ರಾಘವೇಂದ್ರ ಸಿ., ಕೋಟ ಪಿಎಸ್‌ಐ ಸಂತೋಷ್ ಬಿ.ಪಿ., ಎಎಸ್‌ಐ ಕೃಷ್ಣಪ್ಪ, ಡಿಸಿಐಬಿಯ ಎಎಸ್‌ಐ ರವಿಚಂದ್ರ, ಡಿಸಿಐಬಿ ಸಿಬಂದಿ ರಾಮು ಹೆಗ್ಡೆ, ರಾಘವೇಂದ್ರ, ಬ್ರಹ್ಮಾವರ ವೃತ್ತ ಕಚೇರಿ ಸಿಬಂದಿ ವಾಸುದೇವ, ಗಣೇಶ್, ಪ್ರದೀಪ್ ನಾಯಕ್ ಹಾಗೂ ಚಾಲಕ ಶೇಖರ, ಬ್ರಹ್ಮಾವರ ಠಾಣೆಯ ಸಿಬಂದಿ ದಿಲೀಪ್, ಅಣ್ಣಪ್ಪ ಮೊಗವೀರ ಮತ್ತು ರವೀಂದ್ರ, ಹಿರಿಯಡ್ಕ ಠಾಣೆಯ ಸಿಬಂದಿ ಇಂದ್ರೇಶ್ ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ಮಾದಕ ದ್ರವ್ಯ ತಡೆ :
ಮಾದಕ ದ್ರವ್ಯ ತಡೆ ಕಾಯ್ದೆಯಡಿ ಆರೋಪಿಗಳನ್ನು ಪತ್ತೆಹಚ್ಚಿ, ಅಪಾರ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿಕೊಂಡ ಮಣಿಪಾಲದ ಸಿಪಿಐ ಮಂಜುನಾಥ ಎಂ., ಉಪನಿರೀಕ್ಷಕ ರಾಜಶೇಖರ ವಂದಲಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಹಲವು ಪ್ರಕರಣ ಶೀಘ್ರ ಇತ್ಯರ್ಥ :
2019 ಮತ್ತು ಅದಕ್ಕೂ ಹಿಂದೆ ವರದಿಯಾಗಿರುವ ಪ್ರಕರಣಗಳ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿದ ಮಣಿಪಾಲದ ಮಂಜುನಾಥ ಎಂ., ದಿವಾಕರ ಶರ್ಮ, ರಾಜಶೇಖರ ವಂದಲಿ, ಆದರ್ಶ, ಕಾಪು ಠಾಣೆಯ ರಾಜಶೇಖರ ಬಿ. ಸಾಗನೂರು, ಮಹಾಬಲ ಶೆಟ್ಟಿಗಾರ್ ಮತ್ತು ಅರುಣ್ ಕುಮಾರ್, ಬೈಂದೂರಿನ ಸಂಗೀತಾ, ಮಂಜುನಾಥ, ನಾಗರಾಜ್, ಕೋಟದ ಸಂತೋಷ್ ಬಿ.ಪಿ., ಗಣೇಶ್ ಮತ್ತು ಕೃಷ್ಣ, ಉಡುಪಿ ನಗರ ಠಾಣೆಯ ಪಿಎಸ್‌ಐ ಸಕ್ತಿವೇಲು, ರಿಯಾಜ್ ಅಹ್ಮದ್ ಮತ್ತು ವಿಶ್ವನಾಥ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
67 ಪ್ರಕರಣ ಇತ್ಯರ್ಥ :
2020ನೇ ಸಾಲಿನಲ್ಲಿ ನಡೆದ ರಾಷ್ಟ್ರೀಯ ಲೋಕಅದಾಲತ್‌ನಲ್ಲಿ 67 ಪ್ರಕರಣಗಳನ್ನು ಇತ್ಯರ್ಥಪಡಿಸಿದ ತಂಡದಲ್ಲಿದ್ದ ಬೈಂದೂರು ಪಿಎಸ್‌ಐ ಸಂಗೀತಾ, ಶಂಕರನಾರಾಯಣ ಠಾಣೆಯ ಶ್ರೀಧರ ನಾಯ್ಕ, ಪಡುಬಿದ್ರಿಯ ದಿಲೀಪ್, ಕುಂದಾಪುರದ ಸದಾಶಿವ ಗವರೋಜಿ, ಬ್ರಹ್ಮಾವರದ (ಪ್ರಸ್ತುತ ಕಾಪು ಠಾಣೆ) ರಾಘವೇಂದ್ರ, ಉಡುಪಿ ಸಂಚಾರ ಠಾಣೆಯ ಅಬ್ದುಲ್ ಖಾದರ್ ಪುರಸ್ಕೃತರಾಗಿದ್ದಾರೆ.
ಜನಸ್ನೇಹಿ ಪೊಲೀಸ್ ವ್ಯವಸ್ಥೆ :
ಜನಸ್ನೇಹಿ ಪೊಲೀಸ್ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಿದ ಸಿಬಂದಿ ಕೊಲ್ಲೂರು ಠಾಣೆಯ ನವೀನ್ ದೇವಾಡಿಗ, ಮಲ್ಪೆಯ ರವಿರಾಜ್, ಪಡುಬಿದ್ರಿಯ ಬಸಪ್ಪ, ಶಿರ್ವಾದ ಅಂದಪ್ಪ ಹಾಗೂ ಕುಂದಾಪುರ ಠಾಣೆಯ ಪ್ರಸನ್ನ ಅವರು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.