ಮುಂಬೈ: ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಟೆಸ್ಟ್ ಸ್ಪೆಷಲಿಸ್ಟ್ ಗಳಾದ ಚೇತೇಶ್ವರ ಪೂಜಾರ, ಉಮೇಶ್ ಯಾದವ್ ಅವರನ್ನು ಕೈ ಬಿಡಲಾಗಿದೆ. ಜಯದೇವ್ ಉನಾದ್ಕತ್ ಮತ್ತು ಡೆಲ್ಲಿ ವೇಗಿ ಮಕೇಶ್ ಕುಮಾರ್ ಅವರನ್ನು ಟೆಸ್ಟ್ ತಂಡಕ್ಕೆ ಕರೆಯಲಾಗಿದೆ.
ಎರಡು ಪಂದ್ಯಗಳಿಗೆ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಅವರನ್ನು ಸೇರಿಸಲಾಗಿದ್ದರೂ, ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ಅವರನ್ನು ಮುಂದುವರಿಸಲಾಗಿದೆ.
ಇದನ್ನೂ ಓದಿ:ಮಗನನ್ನು ಅಪಹರಿಸಿದ ತಂದೆ ಪೊಲೀಸ್ ಬಲೆಗೆ
ಟೆಸ್ಟ್ ತಂಡದ ಆಯ್ಕೆಯ ಬಗ್ಗೆ ಮಾಜಿ ಅಟಗಾರ ಸುನಿಲ್ ಗಾವಸ್ಕರ್ ಅಸಮಾಧಾನ ಹೊರ ಹಾಕಿದ್ದಾರೆ. ಇದೇ ವರ್ಷದಲ್ಲಿ ಏಕದಿನ ವಿಶ್ವಕಪ್ ನಡೆಯಲಿರುವ ಕಾರಣ ಸೀನಿಯರ್ ಆಟಗಾರರಿಗೆ ಟೆಸ್ಟ್ ನಿಂದ ವಿಶ್ರಾಂತಿ ಕೊಡಬೇಕಿದೆ ಎಂದಿದ್ದಾರೆ.
“ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮುಗಿದಿದೆ. ಈಗ ಮುಂದಿನ ದೊಡ್ಡ ವಿಷಯವೆಂದರೆ ಅಕ್ಟೋಬರ್ ನಲ್ಲಿ ನಡೆಯುವ ವಿಶ್ವಕಪ್. ಆದ್ದರಿಂದ ಸೀನಿಯರ್ ಗಳಿಗೆ ಟೆಸ್ಟ್ ಕ್ರಿಕೆಟ್ ನಿಂದ ಸಂಪೂರ್ಣ ವಿರಾಮ ನೀಡಬೇಕೆಂದು ನಾನು ಬಯಸುತ್ತೇನೆ. ಈಗ ವೈಟ್ ಬಾಲ್ ಕ್ರಿಕೆಟ್ ಬಗ್ಗೆ ಮಾತ್ರ ನೋಡಿ, ರೆಡ್ ಬಾಲ್ ಕ್ರಿಕೆಟ್ ಅಲ್ಲ. ವಿಶ್ವಕಪ್ ಆಡುವುದು ಖಚಿತವಾಗಿರುವ ಅವರಿಗೆ ಸಂಪೂರ್ಣ ವಿರಾಮ ನೀಡಿ. ಅವರು 3-4 ತಿಂಗಳಿಂದ ತಡೆರಹಿತ ಕ್ರಿಕೆಟ್ ಆಡುತ್ತಿದ್ದಾರೆ. ಅವರಿಗೆ ವಿರಾಮ ಸಿಕ್ಕಿರಲಿಲ್ಲ” ಎಂದು ಹೇಳಿದರು.
“ಪ್ರತಿಯೊಬ್ಬ ಹಿರಿಯ ಆಟಗಾರರಿಗೆ ವಿರಾಮ ನೀಡಿ ಇನ್ನೂ ಕೆಲವು ಕಿರಿಯ ಆಟಗಾರರನ್ನು ಆಡಿಸಿದ್ದರೆ, ಅದು ಭಾರತೀಯ ಕ್ರಿಕೆಟ್ ಗೆ ಉತ್ತಮಾವುದದನ್ನೇ ಮಾಡುತ್ತಿತ್ತು. ಆದರೆ ಅದು ಆಗಲಿಲ್ಲ. ಅದ್ಭುತ ಅವಕಾಶವನ್ನು ಕಳೆದುಕೊಂಡಿದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.