Advertisement

ಸುಮಧುರ‌ ಧ್ವನಿಗೆ ಉತ್ತಮ ಅವಕಾಶ

10:17 PM Dec 17, 2019 | mahesh |

ಇದು ಸ್ಪರ್ಧಾತ್ಮಕ ಯುಗ. ಈ ಯುಗದಲ್ಲಿ ಶಿಕ್ಷಣದ ಜತೆ ಜತೆಗೆ ನಾವು ಉದ್ಯೋಗದ ಕೌಶಲವನ್ನೂ ರೂಢಿಸಿಕೊಳ್ಳುವುದು ಉತ್ತಮ. ಏಕೆಂದರೆ ಈ ಕಾಲದಲ್ಲಿ ನಾವು ಓದಿರುವ ಕೋರ್ಸ್‌ಗೆ ಸಂಬಂಧಿಸಿದಂತೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಇಟ್ಟುಕೊಳ್ಳುವುದು ಕೂಡ ಅಸಾಧ್ಯವಾದ ಮಾತಾಗಿದೆ. ಈ ಹಿನ್ನೆಲೆಯಲ್ಲಿ ಇಂದು ನಾವು ಕಾಲೇಜು ದಿನಗಳಲ್ಲಿ ಓದುವ ಸಮಯದಲ್ಲಿ ಉದ್ಯೋಗದ ದುಡಿಮೆ ಮಾಡುವ ಮತ್ತು ಅದರಲ್ಲಿ ಕೌಶಲ ರೂಢಿಸಿಕೊಳ್ಳುವ ಅನೇಕ ಉದ್ಯೋಗಗಳನ್ನು ಕಾಣಬಹುದಾಗಿದೆ.

Advertisement

ಆಧುನಿಕ ಕಾಲದಲ್ಲಿ ತಂತ್ರಜ್ಞಾನಗಳು ಹೆಚ್ಚಾದಂತೆ ಉದ್ಯೋಗಗಳಲ್ಲಿ ಆಯ್ಕೆಗಳು ಹೆಚ್ಚಾಗಿವೆ. ಉತ್ತಮ ಕೌಶಲವಿದ್ದರೆ ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಕಾಲೇಜು ಓದುತ್ತಿರುವಾಗಲೇ, ಬೇರೆ ಉದ್ಯೋಗದಲ್ಲಿದ್ದುಕೊಂಡು ಅರೆಕಾಲಿಕವಾಗಿ ಅಥವಾ ಸಂಪೂರ್ಣವಾಗಿ ಹಿನ್ನೆಲೆ ಧ್ವನಿ ನೀಡುವವರಾಗಿ ಕೆಲಸ ಮಾಡಬಹುದು. ಧ್ವನಿ ಸುಮಧುರ‌ವಾಗಿದ್ದರೆ, ಸ್ಪಷ್ಟವಾಗಿದ್ದರೆ ಅಂತಹವರಿಗೆ ಹಿನ್ನೆಲೆ ಧ್ವನಿ( ವಾಯಿಸ್‌ ಓವರ್‌) ನೀಡಬಹುದು. ಇದಕ್ಕಾಗಿ ಯಾವುದೇ ಕೋರ್ಸ್‌ಗಳ ಅಗತ್ಯವಿಲ್ಲದಿದ್ದರೂ ಈಗ ಹೊಸ ಕೋರ್ಸ್‌ಗಳು ಆರಂಭವಾಗಿವೆ.

1.ಸ್ಪಷ್ಟ ಮತ್ತು ಸುಂದರ ಧ್ವನಿ
ಸ್ಪಷ್ಟ ಧ್ವನಿಯಿದ್ದರೆ ಅಂತಹವರಿಗೆ ಹಿನ್ನೆಲೆ ಧ್ವನಿ ನೀಡಬಹುದು. ಯಾವುದೇ ಭಾಷೆಯ ಸರಿಯಾದ ಉಚ್ಚಾರ ಇದ್ದರೆ ಸುಲಭವಾಗಿ ಹಿನ್ನೆಲೆ ಧ್ವನಿ ನೀಡುವವರಾಗಿ ಕೆಲಸ ಮಾಡಬಹುದು. ಜತೆಗೆ ಧ್ವನಿ ಸುಂದವಾಗಿದ್ದರೆ ಕೇಳುಗರಿಗೂ ಇಂಪಾಗಿ ಕೇಳುತ್ತದೆ.

2. ಭಾಷಾ ಜ್ಞಾನ
ಭಾಷೆಯ ಸರಿಯಾದ ಬಳಕೆ ಮತ್ತು ಜ್ಞಾನವಿರಬೇಕು. ಯಾವ ಪದ ಯಾವ ಅರ್ಥ ನೀಡುತ್ತದೆ ಎಂಬುದನ್ನು ತಿಳಿದಿರಬೇಕು. ಮಾತನಾಡುವಾಗ ಸರಿಯಾದ ವ್ಯಾಕ್ಯ ಪ್ರಯೋಗ ಮಾಡಬೇಕು. ಸಂಭಾಷಣೆಗಳಿಗೆ ಹಿನ್ನೆಲೆ ಧ್ವನಿ ನೀಡುವಾಗ ನಾವು ಸನ್ನಿವೇಶಗಳಿಗೆ ತಕ್ಕಂತೆ ಧ್ವನಿಯನ್ನು ನೀಡಬೇಕಾಗುತ್ತದೆ. ಭಾಷಾ ಶುದ್ಧತೆ ಈ ಹಿನ್ನೆಲೆಯಲ್ಲಿ ಮುಖ್ಯವಾಗುತ್ತದೆ.

3. ಸಾಮಾನ್ಯ ಜ್ಞಾನ
ಸಾಮಾನ್ಯ ಜ್ಞಾನ ಎಲ್ಲದಕ್ಕೂ ಅಗತ್ಯವಾಗಿದ್ದು, ಹಿನ್ನೆಲೆ ಧ್ವನಿ ನೀಡಬೇಕಾದರೂ ಸಾಮಾನ್ಯ ಜ್ಞಾನದ ಆವಶ್ಯಕತೆಯಿದೆ. ತಾವು ಯಾವುದಕ್ಕೆ ಧ್ವನಿ ನೀಡುತ್ತಿದ್ದೇವೆ. ಶಬ್ದಗಳು ಸರಿಯಾಗಿವೇ ಎಂಬುದನ್ನು ತಿಳಿದಿರಬೇಕು.

Advertisement

4. ಧ್ವನಿಯಲ್ಲಿ ಜೀವಂತಿಕೆ
ಧ್ವನಿಯಲ್ಲಿ ಜೀವಂತಿಕೆ ಅಗತ್ಯವಿದೆ. ಧ್ವನಿ ಚೆನ್ನಾಗಿದ್ದು ಓದುತ್ತಾ ಹೋದರೆ ಅದು ಹಿನ್ನೆಲೆ ಧ್ವನಿಯಾಗುವುದಿಲ್ಲ. ಬದಲಾಗಿ ಧ್ವನಿಯಲ್ಲಿ ಭಾವನೆಯಿದ್ದರೆ ಹಿನ್ನಲೆ ಧ್ವನಿ ಸುಂದರವಾಗಿರುತ್ತದೆ.

ಪ್ರತ್ಯೇಕವಾಗಿ ವಾಯಿಸ್‌ ಓವರ್‌ ಕೋರ್ಸ್‌ಗಳು ಇಲ್ಲದಿದ್ದರೂ ಕೆಲವೊಂದು ಸ್ಟುಡಿಯೋಗಳು, ಕಾಲೇಜುಗಳಲ್ಲಿ ಇದರ ಮಾಹಿತಿ ನೀಡುತ್ತಾರೆ. ಜತೆಗೆ ಇದಕ್ಕೆ ಪ್ರತ್ಯೇಕ ತರಗತಿಯ ಆವಶ್ಯಕತೆಯಿಲ್ಲ. ಬದಲಾಗಿ ಆಸಕ್ತಿ ಮತ್ತು ಸ್ವಲ್ಪ ಕೌಶಲವಿದ್ದರೆ ಉತ್ತಮ ಹಿನ್ನೆಲೆ ಧ್ವನಿ ನೀಡಬಹುದು.

ವ್ಯಾಪ್ತಿ
ಟಿವಿ, ರೇಡಿಯೋ ಮತ್ತು ಇತರೆ ಹಲವಾರು ಕ್ಷೇತ್ರಗಳಿಗೆ ಹಿನ್ನಲೆ ಧ್ವನಿ ನೀಡುವವರ ಆವಶ್ಯಕತೆಯಿದ್ದು ಉತ್ತಮ ಧ್ವನಿಯಿದ್ದವರೂ ಉತ್ತಮ ಸಾಧನೆ ಮಾಡಬಹುದು. ಹಲವಾರು ಕ್ಷೇತ್ರಗಳಲ್ಲಿ ಇಂದು ಹಿನ್ನೆ°ಲೆ ಧ್ವನಿ ನೀಡು ವವರ ಆವಶ್ಯಕತೆಯಿದ್ದು, ಇವರಿಗೆ ಹೆಚ್ಚಿನ ಅವಕಾಶ ವಿದೆ. ಡಾಕ್ಯುಮೆಂಟರಿಗಳಿಗೆ, ಜಾಹೀರಾತು ಕ್ಷೇತ್ರಗಳಲ್ಲಿ, ಗ್ರಾಹಕರ ಸಂಪರ್ಕ ಕೊಂಡಿ ಯಾಗಿ ಹೀಗೆ ಹಲ ವಾರು ಅವಕಾಶಗಳು ಇದರಲ್ಲಿವೆ.

-   ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next