Advertisement

ಶ್ರೇಷ್ಠ ವ್ಯಕ್ತಿಯಾಗಲು ಉನ್ನತ ಆದರ್ಶ ಅಗತ್ಯ

02:10 PM Jun 11, 2018 | Team Udayavani |

ಅರಸೀಕೆರೆ: ಬದುಕಿನಲ್ಲಿ ಉನ್ನತ ಆದರ್ಶ, ಸತತ ಹೋರಾಟ ಹಾಗೂ ಸಮಾಜಮುಖೀ ಚಿಂತನೆ ಅಳವಡಿಸಿಕೊಂಡರೆ ಶ್ರೇಷ್ಠ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆ ಆರವಳಿಕೆ ತಜ್ಞ ಡಾ.ರಾಕೇಶ್‌ ತಿಳಿಸಿದರು. 

Advertisement

ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆ ಸಭಾಂಗಣದಲ್ಲಿ ಭಾನುವಾರ ಬೆಳಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜಾಧ್ಯಕ್ಷ ಟಿ.ಎ.ನಾರಾಯಣಗೌಡ ಜನ್ಮ ದಿನದ ಅಂಗವಾಗಿ ತಾಲೂಕು ಘಟಕ ಏರ್ಪಡಿಸಿದ್ದ ಸಸಿ ವಿತರಣೆ ಮತ್ತು ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅರಸೀಕೆರೆ ತಾಲೂಕಿನ ಟಿ.ಎ.ನಾರಾಯಣಗೌಡರು ಕನ್ನಡ ಪರ ಹೋರಾಟಗಳ ಮೂಲಕ ಈ ನಾಡಿನ ಭಾಷೆ, ನೆಲ, ಜಲಗಳ ಸಂರಕ್ಷಣೆಗಾಗಿ ಅನೇಕ ಹೋರಾಟ ಮಾಡಿದ್ದಾರೆ. ಹುಟ್ಟಿನಿಂದ ಸಾಮಾನ್ಯ ವ್ಯಕ್ತಿಯಾಗಿದ್ದರೂ ಅವರ ಉನ್ನತಮಟ್ಟದ ಆದರ್ಶಗಳು ಕನ್ನಡ ನಾಡಿನ ಭಾಷೆಯ ವಿಷಯದಲ್ಲಿ ಕಾವೇರಿ ನದಿ ನೀರಿನ ಜಲವಿವಾದದಲ್ಲಿಯೂ ಹೋರಾಟ ಮಾಡಿದ್ದಾರೆ ಎಂದು ಹೇಳಿದರು.

ನಾರಾಯಣಗೌಡರ 52ನೇ ವರ್ಷ ಜನ್ಮ ದಿನದ ಅಂಗವಾಗಿ ಸಾರ್ವಜನಿಕರಿಗೆ ಸಸಿ, ರೋಗಿಗಳಿಗೆ ಹಣ್ಣು ವಿತರಣೆ ಮಾಡುವ ಮೂಲಕ ಪರಿಸರ ಪ್ರೇಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಉತ್ತಮವಾದದ್ದು ಎಂದರು. 

ತಾಲೂಕು ಕರವೇ ಅಧ್ಯಕ್ಷ ಹೇಮಂತ್‌ಕುಮಾರ್‌ ಮಾತನಾಡಿ, ಕನ್ನಡ ನಾಡು ನುಡಿ, ನೆಲ, ಜಲದ ಸಮಸ್ಯೆ ವಿರುದ್ಧ ಧ್ವನಿ ಎತ್ತುವ ಮೂಲಕ ಅನೇಕ ಹೋರಾಟ ನಡೆಸಿರುವ ಕರವೇ ಸಂಘಟನೆ ರಾಜ್ಯಾಧ್ಯಕ್ಷರು ತಮ್ಮೆಲ್ಲರಿಗೂ ಸ್ಫೂರ್ತಿ ಎಂದರು. 

Advertisement

ತಾಲೂಕು ಕರವೇ ಗೌರವಾಧ್ಯಕ್ಷ ಬಾಣಾವರ ಲಕ್ಷ್ಮೀಶ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ನಂತರ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣುಗಳ ವಿತರಣೆ ಮಾಡಲಾಯಿತು. ಅಲ್ಲದೆ ಆಸ್ಪತ್ರೆಯ ಆವರಣದಲ್ಲಿ ಕಾರ್ಯಕರ್ತರು ವಿವಿಧ ಮಾದರಿಯ ಸಸಿ ನೆಟ್ಟರು. 

ಲಯನ್ಸ್‌ ಕ್ಲಬ್‌ ಮಾಜಿ ಅಧ್ಯಕ್ಷ ಎಂ.ವೈ.ಖಾನ್‌, ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಎನ್‌.ಜಿ.ಮಧು, ತಾಲೂಕು ಕರವೇ ಪ್ರಧಾನ ಕಾರ್ಯದರ್ಶಿ ರವಿಶಂಕರ್‌, ನಗರಾಧ್ಯಕ್ಷ ಕಿರಣ್‌ಕುಮಾರ್‌ಗೌಡ, ಮಂಜುನಾಥ್‌, ರೈಲ್ವೆ  ರಾಜಣ್ಣ, ಪ್ರಸಾದ್‌, ಮೈನ್ನುದ್ದೀನ್‌, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಮಲಮ್ಮ, ನಗರದ ಮಹಿಳಾ ಘಟಕದ ಅಧ್ಯಕ್ಷೆ ರುಕ್ಮಿàಣಿ, ರತ್ನಮ್ಮ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next