Advertisement

ಬಿಹಾರ ಮಹಾಘಟಬಂಧನದಲ್ಲಿ ಭಾರಿ ಭೂಕಂಪ

03:45 AM Jun 28, 2017 | Harsha Rao |

ಪಾಟ್ನಾ: ಬಿಹಾರದಲ್ಲಿ ಆಡಳಿತಾರೂಢ ಆರ್‌ಜೆಡಿ-ಜೆಡಿಯು ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಗೊತ್ತಿರುವುದೇ. ಇದೀಗ ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಅವರ ಸಖ್ಯ ತೊರೆಯಲು ಮುಂದಾಗಿದ್ದಾರೆ. ಇದು ಮೈತ್ರಿಕೂಟದಲ್ಲಿ ಭೂಕಂಪಕ್ಕೆ ಕಾರಣವಾಗಿದೆ.

Advertisement

ಇತ್ತೀಚೆಗೆ ಲಾಲು ಅವರ ಕುಟುಂಬದ ವಿವಿಧ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಸಂಬಂಧ ಮತ್ತಷ್ಟು ಬಿಗಡಾಯಿಸಿದೆ. ಇದಕ್ಕೆ ಪೂರಕವಾಗಿ, ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಅವರು ಬಿಜೆಪಿಯೊಂದಿಗೇ ನಮ್ಮ ಸಂಬಂಧ ಈ ಹಿಂದೆ ಚೆನ್ನಾಗಿತ್ತು ಎಂದು ಹೇಳಿದ್ದು, ಮೈತ್ರಿಕೂಟ ಒಡೆವ ಲಕ್ಷಣ ಗೋಚರಿಸಿದೆ.

ಇನ್ನು ಬಿಹಾರದಲ್ಲಿ ಮಹಾಘಟಬಂಧನ್‌ ಛಿದ್ರಗೊಳ್ಳವ ವಿಚಾರದಲ್ಲಿ ನಮಗೇನೂ ಅಚ್ಚರಿಯಿಲ್ಲ ಎಂದು ಬಿಹಾರ ಬಿಜೆಪಿ ನಾಯಕ ಸುಶೀಲ್‌ ಮೋದಿ ಹೇಳಿದ್ದಾರೆ. ಮೊದಲ ದಿನದಿಂದಲೇ ಈ ಮೈತ್ರಿಕೂಟ 5 ವರ್ಷ ಬಾಳಿಕೆ ಬರುವ ಬಗ್ಗೆ ನಮಗೆ ಸಂಶಯ ವಿತ್ತು. ಎರಡು ಮೂರು ವರ್ಷ ಬರಬಹುದು ಎಂಬ ನಿರೀಕ್ಷೆ ಇತ್ತು ಎಂದು ಹೇಳಿದ್ದಾರೆ.

ರಾಜಿಗಿಲ್ಲ ಅವಕಾಶ: ಇನ್ನು ಮೂಲಗಳ ಪ್ರಕಾರ, ಬಿಜೆಪಿಯೊಂದಿಗೆ ರಾಜಿ ಮಾಡಿ ಕೊಳ್ಳಲು ಲಾಲು ಅವರಿಗೆ ನಿತೀಶ್‌ ಅವಕಾಶ ಕೊಡಲಾರರು ಎಂದು ಹೇಳಲಾಗಿದೆ. ಇದು ಮೈತ್ರಿಕೂಟದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಲಾಲು ಅವರು ಬಿಜೆಪಿಗೆ ಹತ್ತಿರವಾದರೆ, ನಿತೀಶ್‌ ಸಿಎಂ ಸ್ಥಾನಕ್ಕೆ ಕುತ್ತಾಗಬಹುದು ಎನ್ನಲಾಗಿದೆ. 243 ಸದಸ್ಯರ ಬಿಹಾರ ಅಸೆಂಬ್ಲಿಯಲ್ಲಿ ಜೆಡಿಯು 71 ಸ್ಥಾನವನ್ನು ಹೊಂದಿದ್ದು, ಆರ್‌ಜೆಡಿ 80 ಮತ್ತು ಬಿಜೆಪಿ 53 ಸ್ಥಾನವನ್ನು ಹೊಂದಿದೆ. 
ಇನ್ನು ಬಿಹಾರದಲ್ಲಿ ನಿತೀಶ್‌ ಅವರನ್ನು ಬಿಜೆಪಿ ಬೆಂಬಲಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಸುಶೀಲ್‌ ಮೋದಿ ಅವರು ಪ್ರತಿ ಕ್ರಿಯಿಸಿದ್ದು, “ರಾಜಕೀಯದಲ್ಲಿ ಯಾವುದನ್ನೂ ತಳ್ಳಿಹಾಕುವಂತೆ ಇಲ್ಲ’ ಎಂದು ಹೇಳಿದ್ದಾರೆ. 

ಈ ಹಿಂದೆ  ಸರ್ಜಿಕಲ್‌ ದಾಳಿ, ಅಪನಗದೀ ಕರಣ, ಇತ್ತೀಚಿಗೆ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುವ ಜೆಡಿಯು ನಿರ್ಧಾರಗಳು ಪ್ರಧಾನಿ ಮೋದಿ ಅವರಿಗೆ ನಿತೀಶ್‌ ಹತ್ತಿರವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದು ಜೆಡಿಯು-ಆರ್‌ಜೆಡಿ ಮೈತ್ರಿಕೂಟದಲ್ಲಿ ಬಿರುಕು ದೊಡ್ಡದಾಗಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

Advertisement

ಮಹಾಮೈತ್ರಿಯ ಆಯಸ್ಸನ್ನು ಕಾಂಗ್ರೆಸ್‌ ಕುಂಠಿತಗೊಳಿಸುತ್ತಿರುವುದೇಕೆ?
ನಿತೀಶ್‌ರನ್ನು ಟೀಕಿಸುವ ಮೂಲಕ ಮಹಾಮೈತ್ರಿಯ ಆಯುಷ್ಯವನ್ನು ಕಾಂಗ್ರೆಸ್‌ ಕುಂಠಿತ ಗೊಳಿಸುತ್ತಿದೆ ಎಂದು ಜೆಡಿಯು ಟೀಕಿಸಿದೆ. “ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್‌ ಅವರನ್ನು ಬೆಂಬಲಿಸುವ ನಿರ್ಧಾರ ತಳೆದದ್ದು, ಹಲವು ಬಾರಿ ಪರಿಶೀಲನೆ ನಡೆಸಿದ ಬಳಿಕ. ಎನ್‌ಡಿಎ ಜೊತೆಗೆ ಸ್ವಾಭಾವಿಕ ಸಂಬಂಧವಷ್ಟೇ ಇದೆ’ ಎಂದು ಜೆಡಿಯು ವಕ್ತಾರ ತ್ಯಾಗಿ ಹೇಳಿದ್ದಾರೆ.

ಕೋವಿಂದ್‌ ಅವರನ್ನು ಜೆಡಿಯು ಬೆಂಬಲಿಸಿದ್ದಕ್ಕೆ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಅವರು ಟೀಕಿಸಿದ್ದು, “ಒಂದು ತತ್ವದಲ್ಲಿ ನಂಬಿಕೆ ಇಟ್ಟವರು ಒಂದೇ ನಿರ್ಧಾರ ತೆಗೆ ದುಕೊಳ್ಳುತ್ತಾರೆ. ಬೇರೆ ಬೇರೆಯಲ್ಲ’ ಎಂದು ಟೀಕಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ತ್ಯಾಗಿ. “ಈ ವಿಚಾರದಲ್ಲಿ ಮಾತ್ರ ನಮ್ಮದು ಕೋವಿಂದ್‌ ಅವರಿಗೆ ಬೆಂಬಲ. ಇಷ್ಟಕ್ಕೂ ಕಾಂಗ್ರೆಸ್‌ ನಾಯಕರ ಬಗ್ಗೆ ನಾವೇನೂ ಕೆಟ್ಟದ್ದಾಗಿ ಅವರಾಡುವಂತೆ ಆಡಿಲ್ಲ’ ಎಂದು ಹರಿಹಾಯ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next