Advertisement

ಶ್ರೇಷ್ಠ ನಾಯಕ ಧೋನಿಯೋ? ಗಂಗೂಲಿಯೋ?

02:21 PM Jan 14, 2017 | Team Udayavani |

ಈಗಾಗಲೇ ಮಹೇಂದ್ರ ಸಿಂಗ್‌ ಧೋನಿ ಭಾರತ ಕ್ರಿಕೆಟ್‌ ತಂಡದ ಸೀಮಿತ ಓವರ್‌ಗಳ ಪಂದ್ಯದ ನಾಯಕತ್ವಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಭಾರತ ಕಂಡ ಶ್ರೇಷ್ಠ ನಾಯಕ ಯಾರು ಅನ್ನುವ ಬಿಸಿ ಬಿಸಿ ಚರ್ಚೆಯೂ ಕಾವೇರಿದೆ. ಧೋನಿ ಸಾಧನೆಗೆ ಅಂಕಿ ಸಂಖ್ಯೆಗಳ ದೊಡ್ಡ ಪಟ್ಟಿಯಿದೆ. ಆದರೆ ಕಳಪೆ ತಂಡವನ್ನು ಪ್ರಬಲವಾಗಿ ಬೆಳೆಸಿರುವ ಕೀರ್ತಿ ಸೌರವ್‌ ಗಂಗೂಲಿಗಿದೆ. ಹೀಗಾಗಿ ಅಂಕಿ ಸಂಖ್ಯೆಯನ್ನು ಬಿಟ್ಟು ನೋಡುವುದಾದರೆ ಇಬ್ಬರೂ ಶ್ರೇಷ್ಠ ನಾಯಕರೇ ಆಗಿದ್ದಾರೆ.

Advertisement

ಧೋನಿ ಸಾಧನೆ ದೊಡ್ಡದು
ಭಾರತ ಕಂಡ ನಾಯಕರಲ್ಲಿಯೇ ಧೋನಿ ಅತ್ಯಂತ ಯಶಸ್ವಿಯಾನಕರಾಗಿದ್ದಾರೆ. ಏಕದಿನ, ಟಿ20 ವಿಶ್ವಕಪ್‌ ಗೆದ್ದ ಭಾರತದ ಏಕೈಕ ನಾಯಕರಾಗಿದ್ದಾರೆ. ಅಷ್ಟೇ ಅಲ್ಲ, ಚಾಂಪಿಯನ್ಸ್‌ ಟ್ರೋಫಿಯನ್ನು ಭಾರತಕ್ಕೆ ತಂದಿದ್ದಾರೆ. ಧೋನಿ ಅವಧಿಯಲ್ಲಿ ಭಾರತ ಟೆಸ್ಟ್‌, ಏಕದಿನ ಮತ್ತು ಟಿ20 ಮೂರು ಮಾದರಿಯಲ್ಲಿಯೂ ವಿಶ್ವ ನಂ.1 ಪಟ್ಟ ಪಡೆದಿದೆ. ದೇಶದಲ್ಲಿ ಅದ್ಭುತ ಪ್ರದರ್ಶನ ನೀಡಿದ ಕೀರ್ತಿಯಿದೆ. ಸದಾ ಕೂಲ್‌ ಆಗಿಯೇ ಇರುವ ಧೋನಿಗೆ ಅದೃಷ್ಟ ಕೂಡ ಬೆನ್ನ ಹಿಂದೆಯೇ ಇದೆ. ಹೀಗಾಗಿ ಒಂದು ಕಾಲದಲ್ಲಿ ಧೋನಿ ಮುಟ್ಟಿದ್ದೆಲ್ಲ ಚಿನ್ನವಾಗಿತ್ತು. ಆದರೆ ಕೊಹ್ಲಿಯ ಭರ್ಜರಿ ಯಶಸ್ಸು ಮತ್ತು 2019 ಏಕದಿನ ವಿಶ್ವಕಪ್‌ ಹಿನ್ನೆಲೆಯಲ್ಲಿ ನಾಯಕತ್ವ ಪಟ್ಟದಿಂದ ಕೆಳಗಿಯಬೇಕಾಗಿಯಿತು.

ಗಂಗೂಲಿಗೆ ತಂಡವನ್ನು ಮೇಲಕ್ಕೆತ್ತಿದ ಕೀರ್ತಿ
ನಾಯಕನಾಗಿದ್ದ ಮೊಹಮ್ಮದ್‌ ಅಜರುದ್ದೀನ್‌ ಮ್ಯಾಚ್‌ ಫಿಕ್ಸಿಂಗ್‌ ಹಗರಣದಲ್ಲಿ  ಸಿಕ್ಕಿಬಿದ್ದರು. ಹೀಗಾಗಿ ಅಂದು ಸ್ಫೋಟಕ ಬ್ಯಾಟ್ಸ್‌ಮನ್‌ ಆಗಿದ್ದ ಸಚಿನ್‌ ತೆಂಡುಲ್ಕರ್‌ ಹೆಗಲಿಗೆ ನಾಯಕತ್ವ ಪಟ್ಟ ದೊರಕಿತು. ಆದರೆ ಸಚಿನ್‌ ನಾಯಕತ್ವದಲ್ಲಿ ತಂಡ ತೀರಾ ಕಳಪೆ ಪ್ರದರ್ಶನ ನೀಡತೊಡಗಿತು. ವೈಯಕ್ತಿಕವಾಗಿ ಸಚಿನ್‌ ಪ್ರದರ್ಶನವೂ ಕುಗ್ಗಿತು. ಹೀಗಾಗಿ ಅನಿವಾರ್ಯವಾಗಿ ನಾಯಕ ಪಟ್ಟ  ಸೌರವ್‌ ಗಂಗೂಲಿ ಹೆಗಲೇರಿತು.

ಆಕ್ರಮಣಕಾರಿ ಸ್ವಭಾವದ ಗಂಗೂಲಿಗೆ ತಂಡವನ್ನು ಮೇಲಕ್ಕೆತ್ತಿದ್ದ ಕೀರ್ತಿ ಸಲ್ಲುತ್ತದೆ. ಹಲವು ಟೂರ್ನಿಗಳಲ್ಲಿ ಫೈನಲ್‌ವರೆಗೂ ಏರಿ ಸೋತಿರುವ ಉದಾಹರಣೆಗಳೇ ಅಧಿಕವಾಗಿದೆ. 2003 ವಿಶ್ವಕಪ್‌ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿತು. ಯುವ ಆಟಗಾರರನ್ನು ಹುರಿದುಂಬಿಸಿದ ಗಂಗೂಲಿ ತಂಡವನ್ನು ಫೈನಲ್‌ವರೆಗೂ ಕೊಂಡೊಯ್ಯದರು. ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವಂತಾಯಿತು.

ಯುವ ಆಟಗಾರರನ್ನು ಹುರಿದುಂಬಿಸುವಲ್ಲಿ ಇಬ್ಬರೂ ಮುಂದೆ
ಇಬ್ಬರು ನಾಯಕರೂ ಕೂಡ ಯುವ ಆಟಗಾರರನ್ನು ಹುರಿದುಂಬಿಸುವಲ್ಲಿ ಎತ್ತಿದ ಕೈಯಾಗಿದ್ದಾರೆ. ಗಂಗೂಲಿ ಕಾಲದಲ್ಲಿ ವೀರೇಂದ್ರ ಸೆಹ್ವಾಗ್‌, ಮೊಹಮ್ಮದ್‌ ಕೈಫ್, ಯುವರಾಜ್‌ ಸಿಂಗ್‌, ಹರ್ಭಜನ್‌ ಸಿಂಗ್‌… ಅಂತಹ ಪ್ರತಿಭೆಗಳಿಗೆ ಮನ್ನಣೆ ಸಿಕ್ಕಿದೆ. ಅದೇ ರೀತಿ ಧೋನಿ ನಾಯಕತ್ವದಲ್ಲಿ ವಿರಾಟ್‌ ಕೊಹ್ಲಿ, ಆಜಿಂಕ್ಯ ರಹಾನೆ, ರವಿಚಂದ್ರನ್‌ ಅಶ್ವಿ‌ನ್‌, ರವಿಂದ್ರ ಜಡೇಜಾ….ಇಂತಹ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದೆ. ಯುವ ಆಟಗಾರರಿಂದ ಕಳಪೆ ಪ್ರದರ್ಶನ ಬಂದರೂ ಅವರನ್ನು ರಕ್ಷಿಸಿ, ಪ್ರೋತ್ಸಾಹಿಸಿದ ಕೀರ್ತಿ ಇಬ್ಬರಿಗೂ ಸಲ್ಲುತ್ತದೆ. ಇದನ್ನು ಸ್ವತಃ ಯುವ ಆಟಗಾರರೇ ಹೇಳಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next