Advertisement

ಪಿಯುಸಿ ಫಲಿತಾಂಶ: ಆಳ್ವಾಸ್‌ಗೆ ಸಿಂಹಪಾಲು

11:17 PM Jun 18, 2022 | Team Udayavani |

ಮೂಡುಬಿದಿರೆ: ಪಿಯುಸಿ ಪರೀಕ್ಷಾ ಫಲಿತಾಂಶ ದಲ್ಲಿ ಆಳ್ವಾಸ್‌ ಪ.ಪೂ. ಕಾಲೇಜಿನ 31 ವಿದ್ಯಾರ್ಥಿಗಳು ರಾಜ್ಯದಲ್ಲೇ ಟಾಪ್‌ 10 ಸ್ಥಾನಗಳನ್ನು ಪಡೆದಿದ್ದು ವಿಜ್ಞಾನ ವಿಭಾಗದಲ್ಲಿ ಶ್ರೀಕೃಷ್ಣ ಪೆಜತ್ತಾಯ ಪಿ.ಎಸ್‌. 597 ಹಾಗೂ ವಾಣಿಜ್ಯ ವಿಭಾಗದಲ್ಲಿ ಸಮರ್ಥ್ ವಿಶ್ವನಾಥ್‌ ಜೋಶಿ 595 ಅಂಕ ಗಳಿಸಿ ವಿಭಾಗಶಃ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ವಿಜ್ಞಾನ ವಿಭಾಗದ ಸಾಧಕರು
ಶಿವಾಂಗ್‌ (594) ಐದನೇ, ಸಹನಾ (593) ಆರನೇ, ಭರತ್‌ ಎಂ. ಯು., ಜಾಹ್ನವಿ ಶೆಟ್ಟಿ, ವಿN°àಶ್‌ ಮಲ್ಯ. ಸಿಂಚನಾ ಆರ್‌. ಪಿ. (ಎಲ್ಲರೂ 592) ಏಳನೇ ಸ್ಥಾನ, ಭರತ್‌ ಗೌಡ, ರಾಘಶ್ರೀ, ವೈಷ್ಣವಿ ಡಿ. ರಾವ್‌ (ಎಲ್ಲರೂ 591) ಎಂಟನೇ ಸ್ಥಾನ, ಹಿತೇಶ್‌, ಮಧುಸೂದನ್‌, ಪೂಜಾ (ಎಲ್ಲರೂ 590) ಒಂಬತ್ತನೇ ಸ್ಥಾನ ಹರ್ಷಿತಾ ಮತ್ತು ದಿಶಾ ಎಸ್‌. ಶೆಟ್ಟಿ (589) ಹತ್ತನೇ ಸ್ಥಾನ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದ ಸಾಧಕರು
ಶಹಾ ವೇದಾಂತ್‌ ದೀಪಕ್‌, ಪ್ರಜ್ಞಾ ಗಣಪತಿ ಹೆಗ್ಡೆ (594) ತೃತೀಯ, ಆಶಿತಾ, ಸ್ಯಾಮ್‌ಸನ್‌ ಆಕಾಶ್‌ ರೋಡ್ರಿಗಸ್‌ (593) ನಾಲ್ಕನೇ, ಕಾವ್ಯಾ (591) ಆರನೇ ಸ್ಥಾನ, ಚೈತನ್ಯ, ಮೀಷ್ಣಾ ಆರ್‌. (590) ಏಳನೇ ಸ್ಥಾನ, ಹರ್ಷಿತಾ ಕೆ.ಎನ್‌., ಅಂಕಿತಾ ಎ. ಬರಾಡ್ಕರ್‌, ಅನ್ವಿತಾ ಆರ್‌. ಶೆಟ್ಟಿ ಹಾಗೂ ಕೃತಿಕಾ ಕೆ.ಎಂ. (ನಾಲ್ವರೂ 589) ಎಂಟನೇ ಸ್ಥಾನ ಗಳಿಸಿದ್ದಾರೆ. ಪಲ್ಲವಿ ಮಲ್ಲಿಕಾರ್ಜುನ್‌ ಮುಶಿ, ವೇದಾಂತ್‌ ಜೈನ್‌ (ಇಬ್ಬರೂ 588) ಒಂಬತ್ತನೇ ಸ್ಥಾನ, ತೇಜಸ್‌ ಬಿ.ವಿ., ದೇಶಿಕಾ ಕೆ. ಹಾಗೂ ಶ್ರೇಯಸ್‌ ಗೌಡ ಎಂ.ಎಸ್‌. (ಮೂವರೂ 587) ರಾಜ್ಯದಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ.

ನಗದು ಪುರಸ್ಕಾರ
ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಡಾ| ಎಂ. ಮೋಹನ ಆಳ್ವ ಅವರು ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಶ್ರೀಕೃಷ್ಣ ಪೆಜತ್ತಾಯ ಹಾಗೂ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಸಮರ್ಥ್ ವಿಶ್ವನಾಥ್‌ ಜೋಶಿ ಅವರಿಗೆ ತಲಾ 1 ಲಕ್ಷ ರೂ. ನಗದು ಹಾಗೂ ತೃತೀಯ ಸ್ಥಾನ ಪಡೆದ ವಾಣಿಜ್ಯ ವಿಭಾಗದ ಶಹಾ ವೇದಾಂತ್‌ ದೀಪಕ್‌ ಹಾಗೂ ಪ್ರಜ್ಞಾ ಗಣಪತಿ ಹೆಗ್ಡೆ ಅವರಿಗೆ ತಲಾ 50 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ಪ್ರಕಟಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಸದಾಕತ್‌, ವಾಣಿಜ್ಯ ವಿಭಾಗದ ಡೀನ್‌ ಪ್ರಶಾಂತ್‌ ಎಂ.ಡಿ. ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next