Advertisement
ಮಿಡತೆಗಳ ನಿಯಂತ್ರಣಕ್ಕೆ ಬಾತುಕೋಳಿ ಅತ್ಯುತ್ತಮ ಜೈವಿಕ ಅಸ್ತ್ರವಾಗಿದೆ. ಈ ಒಂದು ಬಾತುಕೋಳಿ ದಿನಕ್ಕೆ ಕನಿಷ್ಠ 200 ಮಿಡತೆಗಳನ್ನು ತಿನ್ನುವ ಸಾಮರ್ಥ್ಯ ಹೊಂದಿದೆ. ಚೀನ ಮತ್ತು ಭಾರತಕ್ಕೆ ಹೊಂದಿ ಕೊಂಡಿರುವ ಪಾಕ್ ಭಾಗಗಳಲ್ಲಿ ಮಿಡತೆ ಉಪಟಳದಿಂದ ಭಾರೀ ಬೆಳೆ ನಷ್ಟವಾಗಿದ್ದು, ಆಹಾರ ಮತ್ತು ಆರ್ಥಿಕತೆಗೆ ಭಾರೀ ಪೆಟ್ಟು ಬೀಳುತ್ತಿದೆ. ಮಿಡತೆ ಹಾವಳಿ ವಿಪರೀತವಾಗಿರು ವುದರಿಂದ ಪಾಕಿಸ್ಥಾನ ಸರಕಾರ ಇದನ್ನು ತುರ್ತು ಪರಿಸ್ಥಿತಿ ಎಂದು ಘೋಷಿಸಿತ್ತು. ರಾಜಸ್ಥಾನದಲ್ಲೂ ಮಿಡತೆಗಳು ದಾಳಿ ಮಾಡಿ ಬೆಳೆ ನಾಶಪಡಿಸಿವೆ. Advertisement
ಮಿಡತೆ ಸಂಹಾರಕ್ಕೆ ಬಾತುಕೋಳಿ ಬ್ರಹ್ಮಾಸ್ತ್ರ
12:20 AM Feb 28, 2020 | mahesh |