Advertisement
ಮಾರ್ನಮಿಕಟ್ಟೆಯ ಬ್ಲಾನಿ ಡಿ’ಸೋಜಾ ಅವರು ಈ ರೀತಿ ಟೆರೇಸ್ ಮೇಲೆ ಶೀತ ಪ್ರದೇಶದಲ್ಲಿ ಬೆಳೆಯುವ ದ್ರಾಕ್ಷಿ-ಸೇಬು ಕೃಷಿ ಮಾಡಿ ಯಶಸ್ಸು ಸಾಧಿಸುವ ಮೂಲಕ ಹೊಸ ದಾಖಲೆಯನ್ನೇ ನಿರ್ಮಿಸಲು ಹೊರಟಿದ್ದಾರೆ. ಮಂಗಳೂರು ಹೊರ ವಲಯದ ಮಾರ್ನಮಿಕಟ್ಟೆಯ ಜೈಹಿಂದ್ ನಗರದ ಒಣಿಯೊಂದರಲ್ಲಿರುವ ಬ್ಲಾನಿ ಡಿ’ಸೋಜಾ ಅವರ ಮನೆಯ ಟೆರೇಸ್‌ನ ಪುಟ್ಟ ತೋಟ ವೈವಿಧ್ಯಮಯ ಕೃಷಿಗಳ ದೊಡ್ಡ ಪ್ರಯೋಗಶಾಲೆ. ಸುಮಾರು 1,200 ಚದರ ಅಡಿ ವಿಸ್ತೀರ್ಣದ ಟೆರೇಸ್‌ನಲ್ಲಿ ತರಕಾರಿ, ಹಣ್ಣಿನ ಗಿಡಗಳು ಸೇರಿದಂತೆ ದೇಶ ವಿದೇಶಗಳ ಸುಮಾರು 200ಕ್ಕೂ ಅಧಿಕ ಗಿಡಗಳಿವೆ. ತರಕಾರಿಗಳಾದ ತೊಂಡೆ, ಬೆಂಡೆ, ಬದನೆ, ಟೊಮೇಟೊ, ಕುಂಬಳಕಾಯಿ, ಚೀನಿಕಾಯಿ, ಪಡುವಲ ಕಾಯಿ, ಹಾಗಲಕಾಯಿ, ಮೆಣಸು, ಬಸಳೆ, ಸೋರೆಕಾಯಿ ಸಹಿತ ವಿವಿಧ ತರಕಾರಿ ಗಿಡಗಳು ಫಲಭರಿತವಾಗಿ ನಳ ನಳಿಸುತ್ತಿವೆ. ಮಾವಿನ ಮರ, ಹಲಸಿನ ಮರ ಫಲಭರಿತವಾಗಿವೆ. ಥೈಲ್ಯಾಂಡ್ ಬುಗರಿ, ಜುಮೈಕಾ ಮಿಲ್ಕ್ ಫ್ರುಟ್, ಇಸ್ರೇಲ್, ಚೀನಾದ ಕಿತ್ತಳೆ ಹಣ್ಣು, ಬಿಳಿ ಸಪೋಟ ಹಣ್ಣು, ಆಸ್ಟ್ರೇಲಿಯಾದ ಫ್ಯಾಶನ್ ಫ್ರುಟ್ ಮುಂತಾದ ವಿದೇಶಿ ಹಣ್ಣಿನ ಗಿಡಗಳು ಅಚ್ಚರಿ ಹುಟ್ಟಿಸುತ್ತಿವೆ. ಇದಲ್ಲದೆ ಧಾರೆಹುಳಿ, ಅಂಬಟೆಕಾಯಿ, ಲವಂಗ, ಕಾಳುಮೆಣಸು, ಪುದೀನ, ಶುಂಠಿ, ಅರಸಿನ ಗಿಡಗಳು ಗಮನ ಸೆಳೆಯುತ್ತವೆ. ಗ್ರೀನ್ ಆ್ಯಪಲ್, ಹಳದಿ ಆ್ಯಪಲ್, ದಾಳಿಂಬೆ, ಎಗ್ ಫ್ರುಟ್ಸ್‌ಗಳಿವೆ.
ಸಾಮಾನ್ಯವಾಗಿ ಟೆರೇಸ್ ಕೃಷಿ ಎಂದರೆ ಸೊಪ್ಪು, ತರಕಾರಿ, ಹಣ್ಣಿನ ಗಿಡಗಳು ತುಂಬಿರುತ್ತವೆ. ಆದರೆ ಬ್ಲಾನಿ ಡಿ’ಸೋಜಾ ಅವರು ಮರ ಸ್ವರೂಪದ ಗಿಡಗಳನ್ನು ಕೂಡ ಟೆರೇಸ್‌ನಲ್ಲಿ ಬೆಳೆಸಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಚಟ್ಟಿಯಲ್ಲಿ ಬೆಳೆಸಿದ ಹಲಸಿನ ಗಿಡಗಳು ನೆಲದಲ್ಲಿ ಬೆಳೆಸಿದ ಹಲಸಿನ ಮರದ ರೀತಿಯಲ್ಲೇ ಹಣ್ಣು ನೀಡಿವೆ. ಚಟ್ಟಿಯಲ್ಲಿ ಮಾವಿನ ಗಿಡ ಬೆಳೆಸಿ ಹಣ್ಣುಗಳನ್ನು ಪಡೆದಿದ್ದಾರೆ. ಅವರ ಟೆರೇಸ್‌ನಲ್ಲಿ ಕಾಳಪಾಡಿ ಸಹಿತ ಸುಮಾರು 25 ಬಗೆಯ ಮಾವಿನ ಗಿಡಗಳಿವೆ. ದ್ರಾಕ್ಷಿ ಗಿಡಗಳನ್ನು ಬೆಳೆಸಿ ಹಣ್ಣು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಂಪು, ಬಿಳಿ ದ್ರಾಕ್ಷಿಗಳು ಅವರ ಟೆರೇಸ್ ಗಾರ್ಡನ್‌ನಲ್ಲಿವೆ. ಖರ್ಜೂರ ಗಿಡಗಳನ್ನು ಬೆಳೆಸಿದ್ದಾರೆ. ಇದೆಲ್ಲಕ್ಕಿಂತಲೂ ಇದೀಗ ಅವರು ಪ್ರಯೋಗಾರ್ಥವಾಗಿ ನೆಟ್ಟ ಆ್ಯಪಲ್ ಗಿಡ ಹೂವು ಬಿಟ್ಟಿದೆ. ಮಂಗಳೂರಿನಲ್ಲಿ ದ್ರಾಕ್ಷಿ ಬೆಳೆಸಿ ಯಶಸ್ವಿಯಾದ ದಾಖಲೆ ನನ್ನದಾಗಿತ್ತು. ಇದೀಗ ಆ್ಯಪಲ್ ಹಣ್ಣು ಪಡೆಯುವಲ್ಲಿ ಯಶಸ್ವಿಯಾದರೆ ಅದು ಕೂಡ ದಾಖಲೆಯಾಗುತ್ತದೆ ಎನ್ನುತ್ತಾರೆ ಬ್ಲೋನಿ ಡಿ’ಸೋಜಾ ಅವರು. ಅವರ ಕೃಷಿ ಸಾಧನೆಯನ್ನು ಗಮನಿಸಿ ಕೇರಳ ಸರಕಾರ ಅವರನ್ನು ಸಮ್ಮಾನಿಸಿದೆ. ಟೆರೇಸ್ ಕೃಷಿಗೆ ಅವರು ಮನೆಯಲ್ಲಿ ಉತ್ಪತ್ತಿಯಾಗುವ ತಾಜ್ಯಗಳನ್ನೇ ಗೊಬ್ಬರವಾಗಿ ಬಳಸುತ್ತಾರೆ. ತರಕಾರಿ, ಕಿಚನ್ ತ್ಯಾಜ್ಯಗಳನ್ನು ಮಿಕ್ಸಿಯಲ್ಲಿ ಹಾಕಿ ಹುಡಿ ಮಾಡುತ್ತಾರೆ. ಬಳಿಕ ಸುಮಾರ 20 ಲೀಟರ್ ನೀರಿಗೆ ಹಾಕಿ ಕಲಸಿ ಗಿಡಗಳಿಗೆ ಹಾಕುತ್ತಾರೆ. ತರಕಾರಿ ಗಿಡಗಳ ಎಲೆಗಳನ್ನು ಬುಡಕ್ಕೆ ಹಾಕುತ್ತಾರೆ.
Related Articles
ಡಿ’ಸೋಜಾ ಅವರ ಟೆರೇಸ್ ತೋಟ ವಿದ್ಯಾರ್ಥಿಗಳಿಗೆ ಹಾಗೂ ಕೃಷಿ ಆಸಕ್ತರಿಗೆ ಕೃಷಿ ಪಾಠಶಾಲೆಯಾಗಿಯೂ ಆಕರ್ಷಣೆ ಪಡೆದಿದೆ. ಈ ವರ್ಷ ಸುಮಾರು 30ಕ್ಕೂ ಅಧಿಕ ಶಾಲಾ ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.
Advertisement
ಪ್ರತಿಯೋರ್ವರು ಟೆರೇಸ್‌ನಲ್ಲಿ, ಮನೆಯ ಅಂಗಳದಲ್ಲಿ ಗಿಡಗಳನ್ನು ಬೆಳೆಸಿದರೆ ಆ ಪ್ರದೇಶ ಹಸಿರುಮಯವಾಗಿರುತ್ತದೆ. ಶುದ್ಧಗಾಳಿ ಲಭಿಸುತ್ತದೆ. ಹಾಗೂ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ. ನಮ್ಮ ವೈವಿಧ್ಯಮಯ ಗಿಡಮರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಾಗುತ್ತದೆ’ ಎಂದು ವಿವರಿಸುತ್ತಾರೆ ಬ್ಲಾನಿ ಡಿ’ಸೋಜಾ.
ರಸ್ತೆಬದಿಗಳಲ್ಲಿ ಹಣ್ಣಿನ ಗಿಡ ಬೆಳೆಸಿ‘ರಸ್ತೆಬದಿಗಳಲ್ಲಿ ಬದಿಗಳಲ್ಲಿ ಪ್ರಯೋಜನಕ್ಕೆ ಬಾರದ ಮರಗಳನ್ನು ನೆಡುವ ಬದಲು ಹಣ್ಣುಗಳ ಗಿಡಿ ಬೆಳೆಸಬೇಕು. ಮುಂದೆ ಅದು ಹಣ್ಣು ಬಿಟ್ಟಾಗ ಮನುಷ್ಯರಿಗೆ, ಪ್ರಾಣಿ, ಪಕ್ಷಿಗಳಿಗೆ ಆಹಾರವಾಗುತ್ತದೆ. ನಾವು ತಿಂದ ಹಣ್ಣುಗಳ ಬೀಜಗಳನ್ನು ಕಸಕ್ಕೆ ಹಾಕಬೇಡಿ. ಎಲ್ಲಿಯಾದರೂ ಖಾಲಿ ಜಾಗದಲ್ಲಿ ಹಾಕಿಬಿಡಿ. ಅವುಗಳಲ್ಲಿ ಎರಡು ಬೀಜವಾದರೂ ಮೊಳಕೆಯೊಡುತ್ತವೆ’ ಎಂದವರು ಸಲಹೆ ಮಾಡುತ್ತಾರೆ. ಕೃಷಿ ಪ್ರೀತಿಯ ಸೆಳೆತ
ದುಬಾೖಯಲ್ಲಿ ಆಡಿಟರ್ ಆಗಿದ್ದ ಬ್ಲಾನಿ ಡಿ’ಸೋಜಾ ಅವರಲ್ಲಿದ್ದ ಕೃಷಿ ಪ್ರೀತಿಯ ಸಳೆತ ಟೆರೇಸ್ ಗಾರ್ಡನ್‌ಗೆ ಕಾರಣವಾಯಿತು. ಚಿಕ್ಕಂದಿನಿಂದಲೂ ನನಗೆ ಕೃಷಿ ಎಂದರೆ ಪ್ರೀತಿ. ರಸ್ತೆಯಲ್ಲಿ ಬಿದ್ದಿದ್ದ ಬೀಜಗಳನ್ನು ತಂದು ಮನೆಯಲ್ಲಿ ಹಾಕುತ್ತಿದ್ದೆ. ಅದು ಮೊಳಕೆಯೊಡೆದು ಬಂದಾಗ ನನಗೆ ಬಹಳ ಖುಷಿ. ಮುಂದೆ ಆಡಿಟರ್ ಆಗಿ ವಿದೇಶದಲ್ಲಿ ಒಂದಷ್ಟು ವರ್ಷ ಕೆಲಸ ಮಾಡಿ ಊರಿಗೆ ಬಂದಾಗಲೂ ನನ್ನ ಮನಸ್ಸು ಸದಾ ಕೃಷಿಯತ್ತ ಸೆಳೆಯುತ್ತಿತ್ತು. ಇದು ಟೆರೇಸ್ ಕೃಷಿಗೆ ಮೂಲವಾಯಿತು.
– ಬ್ಲಾನಿ ಡಿ’ಸೋಜಾ
ತೋಟದ ಮಾಲಿಕ ಕೇಶವ ಕುಂದರ್